ಕಿರುತೆರೆಯಲ್ಲಿ 'ಅಮೃತಧಾರೆ' ಅಬ್ಬರ ; ಗೌತಮ್-ಭೂಮಿಕಾ ಮ್ಯಾಜಿಕ್ - 'ಕರ್ಣ' ಕಕ್ಕಾಬಿಕ್ಕಿ..!
ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಫರ್ಧೆ ಇದ್ದೇ ಇರುತ್ತೆ. ಕಿರುತೆರೆ ಕೂಡ ಇದರಿಂದ ಹೊರತಾಗಿಲ್ಲ. ಪ್ರತಿ ವಾರ ಇಲ್ಲಿಯೂ ಕೂಡ ಹಾವು ಏಣಿಯ ಆಟ ನಡೆಯುತ್ತಲೇ ಇರುತ್ತೆ. ಈ ವಾರ ಮೇಲೆ ಇರುವ ಧಾರಾವಾಹಿ ಮುಂದಿನ ವಾರ ಪ್ರೇಕ್ಷಕರ ಅವಕೃಪೆಗೆ ಪಾತ್ರವಾದರೆ.. ನಿರಾಸೆ ಮಾಡಿದ ಧಾರಾವಾಹಿಯಲ್ಲಿ ಏಕಾಏಕಿ ಬದಲಾವಣೆಯಾಗುತ್ತೆ. ಹಣೆಬರಹ ಬದಲಾಗುತ್ತೆ. ಎಲ್ಲವೂ ಇಲ್ಲಿ ಅನಿಶ್ಚಿತತೆ. ಪ್ರತಿ ವಾರ ಹೀಗೆ ಇರುತ್ತೆ ಎಂದು ಹೇಳಲು ಸಾಧ್ಯ ಇಲ್ಲ.
ಈ ಧಾರಾವಾಹಿಯೇ ಮೊದಲ ಸ್ಥಾನ ಬರಬಹುದು ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಹಿಂದೆಯೆಲ್ಲ ಪ್ರೇಕ್ಷಕರಿಂದ ಕಡೆಗಣಿಸಲಾದ ಧಾರಾವಾಹಿ ಕೆಲವೊಮ್ಮೆ ಅಚ್ಚರಿ ಎಂಬಂತೆ ಅದೇ ಪ್ರೇಕ್ಷಕರ ಹೃದಯವನ್ನು ಗೆಲ್ಲುತ್ತೆ. ಮೊದಲನೇ ಸ್ಥಾನವನ್ನು ಕೂಡ ಅಲಂಕರಿಸುತ್ತೆ. ಉದಾಹರಣೆಗೆ ''ಅಮೃತಧಾರೆ''.

ಹೌದು, ''ಅಮೃತಧಾರೆ'' ಕನ್ನಡಿಗರ ಸದ್ಯದ ಮೊದಲ ಆಯ್ಕೆ. ಕೆಲ ತಿಂಗಳ ಹಿಂದೆ ಟಿಆರ್‌ಪಿ ರೇಸ್‌ನಲ್ಲಿ ತುಂಬಾ ಹಿಂದೆ ಇದ್ದ ಈ ಧಾರಾವಾಹಿಯನ್ನು ಈಗ ಜನ ಕಾದು ನೋಡುತ್ತಿದ್ದಾರೆ. ಭೂಮಿಕಾ ಮತ್ತು ಗೌತಮ್ ನಡುವಿನ ಮುನಿಸು, ಪ್ರೀತಿಯ ಕಥೆಯನ್ನು ಮೆಚ್ಚಿಕೊಂಡಿದ್ದಾರೆ. ಕಳೆದ ಹಲವು ದಿನಗಳಿಂದ ದಿನಕ್ಕೊಂದು ತಿರುವು ಪಡೆಯುತ್ತಿರುವ ಈ ಧಾರಾವಾಹಿಗೆ ಮನ ಸೋತಿದ್ದಾರೆ.
ಇದಕ್ಕೆ ಪುರಾವೆ ಎನ್ನುವಂತೆ 41ನೇ ವಾರದ ಟಿಆರ್‌ಪಿ ರೇಸ್‌ನಲ್ಲಿ ''ಅಮೃತಧಾರೆ'' ಉಳಿದ ಎಲ್ಲ ಧಾರಾವಾಹಿಗಳನ್ನು ಅದರಲ್ಲಿಯೂ ಜೀ ಕನ್ನಡದಲ್ಲಿ ಶುರುವಾದ ದಿನದಿಂದ ನಂ 1 ಸ್ಥಾನದಲ್ಲಿಯೇ ವಿರಾಜಮಾನವಾಗಿದ್ದ ''ಕರ್ಣ''ನಿಗೆ ಸೆಡ್ಡು ಹೊಡೆದಿದೆ. ಈ ವಾರದ ಜನ ಮೆಚ್ಚಿದ ನಂಬರ್ 1 ಧಾರಾವಾಹಿಯಾಗಿ ಹೊರ ಹೊಮ್ಮಿದೆ.
ರೂರಲ್ ಪ್ರದೇಶದಲ್ಲಿ ಬರೋಬ್ಬರಿ 9.0 ಟಿವಿಆರ್ ಗಳಿಸಿರುವ ''ಅಮೃತಧಾರೆ'' ಅರ್ಬನ್‌ನಲ್ಲಿ 7.0 ಟಿವಿಆರ್ ಗಳಿಸಿದೆ. ಈ ಮೂಲಕ ಈ ವಾರು ಕರುನಾಡು ಮೆಚ್ಚಿದ ನಂಬರ್ ಒನ್ ಧಾರಾವಾಹಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ''ಕರ್ಣ'' ಕೇವಲ ಒಂದು ಪಾಯಿಂಟ್‌ನಿಂದ ಹಿಂದೆ ಬಿದ್ದಿದ್ದು 8.9 ಟಿವಿಆರ್ ಗಳಿಸಿ ಎರಡನೇ ಸ್ಥಾನದಲ್ಲಿದೆ.
ಇನ್ನೂ ''ಕರ್ಣ'' ಕಾಲಿಡುವ ಮುನ್ನ ಜೀ ಕನ್ನಡದಲ್ಲಿ ''ಅಣ್ಣಯ್ಯ'' ಅಬ್ಬರ ಇತ್ತು. ಆದರೆ ಆ ನಂತರ ''ಅಣ್ಣಯ್ಯ'' ಸ್ಥಾನ ''ಕರ್ಣ''ನ ಪಾಲಾಯ್ತು. ಆದರೂ ಸೋಲು ಒಪ್ಪದ ''ಅಣ್ಣಯ್ಯ'' ಪ್ರತಿ ವಾರ ''ಕರ್ಣ''ನಿಗೆ ತೀವೃ ಸ್ಫರ್ಧೆಯೊಡ್ಡುತ್ತಿದ್ದಾನೆ. ಇದಕ್ಕೆ ಪುರಾವೆ ಎನ್ನುವಂತೆ ಈ ವಾರ ಕೇವಲ ಒಂದು ಪಾಯಿಂಟ್‌ದಿಂದ ''ಕರ್ಣ''ನ ಹಿಂದೆ ''ಅಣ್ಣಯ್ಯ'' ಇದ್ದಾನೆ. ಮೂರನೇ ಸ್ಥಾನವನ್ನು ಅಲಂಕರಿಸಿದ್ಧಾನೆ.

ಇನ್ನುಳಿದಂತೆ ನಾಲ್ಕನೇ ಸ್ಥಾನದಲ್ಲಿ 8.2 ಟಿವಿಆರ್ ಪಡೆದ ''ಲಕ್ಷ್ಮೀ ನಿವಾಸ'' ಇದೆ. 6.6 ಟಿವಿಆರ್ ಪಡೆದಿರುವ ''ನಾ ನಿನ್ನ ಬಿಡಲಾರೆ'' ಐದನೇ ಸ್ಥಾನದಲ್ಲಿದ್ದು, ಮುಕ್ತಾಯದ ಹಂತಕ್ಕೆ ತಲುಪಿರುವ ''ಪುಟ್ಟಕ್ಕನ ಮಕ್ಕಳು'' 6.1 ಟಿವಿಆರ್‌ನೊಂದಿಗೆ ಆರನೇ ಸ್ಥಾನದಲ್ಲಿದೆ. ''ಶ್ರೀ ರಾಘವೇಂದ್ರ ಮಹಾತ್ಮೆ'' 5.7 ಟಿವಿಆರ್ ಪಡೆದು ಏಳನೇ ಸ್ಥಾನದಲ್ಲಿದ್ದು ದೀಪಾ, ದಿಶಾ, ಚಿರು ''ಬ್ರಹ್ಮಗಂಟು'' 8ನೇ ಸ್ಥಾನಕ್ಕೆ ಕುಸಿದಿದೆ. ಕೇವಲ 5.2 ಟಿವಿಆರ್‌ನ ಈ ಧಾರಾವಾಹಿ ಪಡೆದಿದೆ.4.4 ಟಿವಿಆರ್ ಪಡೆದ ''ಶ್ರಾವಣಿ ಸುಬ್ರಹ್ಮಣ್ಯ'' 9ನೇ ಸ್ಥಾನದಲ್ಲಿದೆ.
ಇನ್ನು ''ಕಲರ್ಸ್ ಕನ್ನಡ''ದಲ್ಲಿ ''ಭಾಗ್ಯಲಕ್ಷ್ಮೀ'' ಧಾರಾವಾಹಿ ಮೊದಲ ಸ್ಥಾನದಲ್ಲಿದೆ. 4.8 ಟಿವಿಆರ್ ಈ ಧಾರಾವಾಹಿಗೆ ಸಿಕ್ಕಿದೆ. ಎರಡನೇ ಸ್ಥಾನದಲ್ಲಿ ''ಮುದ್ದು ಸೊಸೆ'' ಇದ್ದರೆ ಮೂರನೇ ಸ್ಥಾನದಲ್ಲಿ ''ಗಂಧದ ಗುಡಿ'' ಧಾರಾವಾಹಿ ಇದೆ. ನಾಲ್ಕನೇ ಸ್ಥಾನ ''ಭಾರ್ಗವಿ ಎಲ್‌ಎಲ್‌ಬಿ'' ಮತ್ತು ಐದನೇ ಸ್ಥಾನದಲ್ಲಿ ''ನಂದಗೋಕುಲ'' ಧಾರಾವಾಹಿ ಇದೆ. ''ಪ್ರೇಮ ಕಾವ್ಯ'' ಆರನೇ ಸ್ಥಾನದಲ್ಲಿದೆ.


Click it and Unblock the Notifications











