ಪುಟ್ಟಕ್ಕನ ಮಕ್ಕಳು - ಗಟ್ಟಿಮೇಳ: ಈ ವಾರ ಟಿಆರ್‌ಪಿ ಪಟ್ಟಿಯಲ್ಲಿ ಯಾರ ಕೈ ಮೇಲಾಯ್ತು?

By ಶೃತಿ ಹರೀಶ್ ಗೌಡ

ಜೀ ಕನ್ನಡ ಹಾಗೂ ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ, ಉದಯ ಟಿವಿ ವಾಹಿನಿಗಳು ತಮ್ಮದೇ ಆದ ಕಥೆಗಳ ಮೂಲಕ ಜನರ ಮನಸ್ಸನ್ನು ಗೆದ್ದು ಜನರಿಗೆ ಮತ್ತಷ್ಟು ಹತ್ತಿರವಾಗಲು ನೋಡುತ್ತಿವೆ. ಇದಕ್ಕಾಗಿ ಹೊಸ ಹೊಸ ಕಥೆಗಳನ್ನು ಸಹ ನೀಡುತ್ತಾ ಬರ್ತಿದ್ದಾರೆ. ಕಳೆದ ವಾರ ಕೂಡ 'ಗಟ್ಟಿಮೇಳ' ಧಾರಾವಾಹಿ ನಂಬರ್ ಒನ್ ಸ್ಥಾನದಲ್ಲಿ ಮುಂದುವರೆದಿದೆ.

'ಗಟ್ಟಿಮೇಳ' ಧಾರಾವಾಹಿ ಟಿಆರ್‌ಪಿಯಲ್ಲಿ ಹೆಚ್ಚೇನು ಬದಲಾವಣೆ ಆಗುತ್ತಿಲ್ಲ. ಒಂದು ಅಥವಾ ಎರಡನೇ ಸ್ಥಾನದಲ್ಲಿ ಧಾರಾವಾಹಿ ಮುಂದುವರೆದಿದೆ. ಈ ವಾರವೂ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಪ್ರಬಲ ಪೈಪೋಟಿ ಕೊಟ್ಟು ವೇದಾಂತ್ ಹಾಗೂ ಅಮೂಲ್ಯ ಸ್ಟೋರಿ ಮೊದಲ ಸ್ಥಾನದಲ್ಲಿ ಭದ್ರವಾಗಿದೆ. ಈ ಧಾರಾವಾಹಿಗೆ ತನ್ನದೇ ಆದ ಪ್ರೇಕ್ಷಕ ಬಳಗ ಇದ್ದು ಧಾರಾವಾಹಿಯಲ್ಲಿ ಏನಾಯಿತು ಎಂದು ಕುತೂಹಲದಿಂದ ನೋಡುವವರು ಸಹ ಇದ್ದಾರೆ. ಕಳೆದ ವಾರ ಈ ಧಾರಾವಾಹಿಗೆ 6.7 ರೇಟಿಂಗ್ ಸಿಕ್ಕಿದೆ.

TRP Ratings of Kannada Serials for This Week 2023: Gattimela Continues to Rule the Top Position

'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಸಹ ಗಟ್ಟಿಮೇಳ ಧಾರಾವಾಹಿಗೆ ಪೈಪೋಟಿಯನ್ನು ನೀಡುತ್ತಾ‌ ಬಂದಿದೆ. ಒಂದು ಮತ್ತು ಎರಡನೇ ಸ್ಥಾನವನ್ನುನ ಅನುಸರಿಸುತ್ತಾ ಬಂದಿರುವುದು ವಿಶೇಷವಾಗಿದೆ. ತಮ್ಮ ಸ್ಥಾನವನ್ನು ಯಾರಿಗೂ ಬಿಟ್ಟು ಕೊಟ್ಟಿಲ್ಲ. ಇತರೆ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳು ರೇಟಿಂಗ್‌ನಲ್ಲಿ ಇವೆರಡು ಧಾರಾವಾಹಿಗಳ ಹತ್ತಿರ ಸುಳಿಯಲು ಸಾಧ್ಯವಾಗುತ್ತಿಲ್ಲ. ಮಕ್ಕಳು ಧಾರಾವಾಹಿ 6.4 ರಷ್ಟು ಟಿಆರ್ಪಿ ಪಡೆದಿದೆ.

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯನ್ನು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಹಿಂದಿಕ್ಕಿ ಮುಂದೆ ಸಾಗಿದೆ. ಶ್ರೀರಸ್ತು ಶುಭಮಸ್ತು ಧಾರಾವಾಹಿ ಯಾವಾಗಲು ಮುಂಚೂಣಿಯಲ್ಲಿ ಇತ್ತು. ಆದರೆ ಈ ಬಾರಿ 'ಲಕ್ಷ್ಮಿ ಬಾರಮ್ಮ' ಮೂರನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ಧಾರಾವಾಹಿ 5.9 ರಷ್ಟು ರೇಟಿಂಗ್ ಗಳಿಸಿದೆ. ಇನ್ನು 'ಲಕ್ಷ್ಮಿ ಬಾರಮ್ಮ' ಹಾಗೂ 'ಭಾಗ್ಯಲಕ್ಷ್ಮಿ' ಈ ಎರಡು ಧಾರವಾಹಿಗಳು ಅಕ್ಕ-ತಂಗಿರ ಕಥೆಗಳಾಗಿದ್ದು ಪ್ರೇಕ್ಷಕರು ಮೆಚ್ಚಿಕೊಂಡು ನೋಡುತ್ತಿದ್ದಾರೆ. ಇದು ಸಹ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

TRP Ratings of Kannada Serials for This Week 2023: Gattimela Continues to Rule the Top Position

ನಾಲ್ಕನೇ ಸ್ಥಾನಕ್ಕೆ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ತೃಪ್ತಿ ಪಟ್ಟುಕೊಂಡಿದೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಈ ಧಾರಾವಾಹಿಗೆ ಎಲ್ಲರೂ ಸಹ ಫಿದಾ ಆಗಿದ್ದಾರೆ. ಇದೊಂದು ಕೌಟುಂಬಿಕ ಧಾರಾವಾಹಿಯಾಗಿದ್ದು ಮನೆ ಮಂದಿ ಎಲ್ಲಾ ಕುಳಿತು ನೋಡಿವಂತಿದೆ. ಸುಧಾರಾಣಿ ನಟಿಸುತ್ತಿರುವ ಈ ಧಾರಾವಾಹಿ ಕಳೆದ ವಾರ 5.4 ರೇಟಿಂಗ್ ಪಡೆದುಕೊಂಡಿದೆ.

ಐದನೇ ಸ್ಥಾನವನ್ನು ಜೀ ಕನ್ನಡದಲ್ಲಿ ಪ್ರಸಾರವಾಗುವ 'ಮನೆ ಮಗಳು' ಹಾಗೂ 'ತ್ರಿನಯನಿ' ಈ ಎರಡು ಧಾರಾವಾಹಿಗಳು ಪಡೆದುಕೊಂಡಿದೆ. ಮಧ್ಯಾಹ್ನದ ವೇಳೆ ಈ ಎರಡು ಧಾರವಾಹಿಗಳು ಪ್ರಸಾರವಾಗ್ತಿದ್ದು ಸಂಜೆ ವೇಳೆ ಪ್ರಸಾರವಾಗುವ ಸತ್ಯ ಧಾರವಾಹಿಗೆ ಪೈಪೋಟಿಯನ್ನು ನೀಡುತ್ತಿದೆ. ಇವೆರಡು ಧಾರವಾಹಿಗಳಿಗೆ 4.9ರಷ್ಟು ರೇಟಿಂಗ್ ಸಿಕ್ಕಿದೆ.

TRP Ratings of Kannada Serials for This Week 2023: Gattimela Continues to Rule the Top Position

ಆರನೇ ಸ್ಥಾನದಲ್ಲಿ ಸತ್ಯ ಧಾರಾವಾಹಿ ತನ್ನ ಸ್ಥಾನವನ್ನ ಭದ್ರ ಮಾಡಿಕೊಂಡಿದೆ. ಸತ್ಯ ಧಾರಾವಾಹಿ ಶುರುವಾದ ದಿನದಿಂದಲೂ ಸಹ ಸತ್ಯಳಿಗೆ ಅಂತಲೇ ಒಂದಷ್ಟು ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ.‌ ಸತ್ಯ ಧಾರಾವಾಹಿಯನ್ನು ನೋಡುತ್ತಿರುವ ಸಂಖ್ಯೆ ಏನು ಕಡಿಮೆಯಾಗಿಲ್ಲ. ಇದರಿಂದಾಗಿ ಯಾವಾಗಲೂ ಸಹ ಐದು ಅಥವಾ ಆರನೇ ಸ್ಥಾನವನ್ನು ಪಡೆಯುತ್ತಾ ಬಂದಿದೆ. ಕಳೆದ ವಾರ ಸಿಕ್ಕಿದ್ದು 4. 7 ರೇಟಿಂಗ್.

ಏಳನೇ ಸ್ಥಾನವನ್ನು 'ಹಿಟ್ಲರ್ ಕಲ್ಯಾಣ' ಹಾಗೂ 'ಪುನರ್ ವಿವಾಹ' ಪಡೆದುಕೊಂಡಿದೆ' ಹಿಟ್ಲರ್ ಕಲ್ಯಾಣ ಸಂಜೆಯ ವೇಳೆ ಪ್ರಸಾರ ಕಾಣುವ ಧಾರಾವಾಹಿಯಾಗಿದ್ದು, ಏಜೆ- ಲೀಲಾ ಕಥೆ ಗಮನ ಸೆಳೆಯುತ್ತಿದೆ. 'ಪುನರ್ ವಿವಾಹ' ಧಾರಾವಾಹಿ ಮಧ್ಯಾಹ್ನ ಪ್ರಸಾರ ಕಾಣುತ್ತಿದ್ದು, ಅಕುಲ್ ಬಾಲಾಜಿಯ ನಟನೆ ಅದ್ಭುತವಾಗಿ ಮೂಡಿ ಬರುತ್ತಿದೆ. ಇವೆರಡು ಧಾರಾವಾಹಿ ಸಹ 4.5 ಟಿ ಆರ್ ಪಿ ಪಡೆದುಕೊಂಡಿದೆ.

'ಕೆಂಡ ಸಂಪಿಗೆ' ಧಾರಾವಾಹಿಗೂ ಸಹ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದ್ದು ಈ ಧಾರಾವಾಹಿ ಎಂಟನೇ ಸ್ಥಾನವನ್ನು ಪಡೆದುಕೊಂಡಿದೆ. ಬಡ ಹುಡುಗಿ ಒಬ್ಬಳು ಕಾರ್ಪೊರೇಟರ್ ಅನ್ನು ಮದುವೆಯಾಗಿ, ಈಗ ಶಾಸಕನನ್ನಾಗಿ ಮಾಡಿದ್ದಾಳೆ. ಆದರೆ ಆ ಶಾಸಕನಿಗೆ ಯಾವುದೇ ಕೃತಜ್ಞತೆ ಇಲ್ಲ ಬಡ ಹುಡುಗಿಯನ್ನ ಮನೆಯಿಂದ ಓಡಿಸಬೇಕು ಎಂದು ಅಂದುಕೊಂಡಿದ್ದಾನೆ. ಇದೆಲ್ಲವೂ ಸಹ ಜನರಿಗೆ ಕಥೆ ಇಷ್ಟವಾಗುವಂತೆ ಮಾಡಿದೆ.

ಇತ್ತೀಚೆಗೆ ಶುರುವಾದ 'ನಮ್ಮ ಲಚ್ಚಿ' ಧಾರಾವಾಹಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಈ ಧಾರಾವಾಹಿ ಒಂಬತ್ತನೇ ಸ್ಥಾನವನ್ನು ಅಲಂಕರಿಸಿದೆ. ಬಡ ಹುಡುಗಿ ಲಚ್ಚಿ ಈಗ ತನ್ನ ತಂದೆಯೇ ಮನೆಯಲ್ಲೇ ಇದ್ದಾಳೆ. ಆದರೆ ಆಕೆಗೆ ನನ್ನ ತಂದೆ ಯಾರು ಎಂಬುದೇ ತಿಳಿಯಲಿಲ್ಲ. ಆದರೂ ಸಹ ಹೇಗೋ ತಂದೆಯ ನೇರಳಲ್ಲೇ ಇದ್ದು ಹಾಡನ್ನು ಹಾಡುತ್ತಿದ್ದಾಳೆ.

ಟಾಪ್ 10ನೇ ಸ್ಥಾನವನ್ನು 'ಶ್ರೀ ರೇಣುಕಾ ಎಲ್ಲಮ್ಮ' ಧಾರಾವಾಹಿ ಪಡೆದುಕೊಂಡಿದೆ. ನಂತರ 'ತ್ರಿಪುರ ಸುಂದರಿ' ಹಾಗೂ 'ಗೀತಾ' ಧಾರಾವಾಹಿಗಳು ಲಿಸ್ಟ್‌ನಲ್ಲಿದೆ ಇವೆ. ನಂತರ ಪಾರು, ರಾಮಾಚಾರಿ ಕಾಣಿಸಿಕೊಂಡಿವೆ.

More from Filmibeat

English summary
TRP Ratings of Kannada Serials for this Week 2023: Gattimela Continues to Rule the Top Position. here is list of top 10 Serials. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X