'ಗಟ್ಟಿಮೇಳ' ಧಾರವಾಹಿ ಟಿಆರ್‌ಪಿಯಲ್ಲಿ ಏರುಪೇರು: ಹೆಚ್ಚು ಅಂಕ ಸಿಕ್ಕಿದ್ದು ಯಾರಿಗೆ?
ಕಿರುತೆರೆ ಧಾರಾವಾಹಿಗಳ ನಡುವೆ ದಿನದಿಂದ ದಿನಕ್ಕೆ ಸ್ಪರ್ಧೆ ಹೆಚ್ಚಾಗುತ್ತಿದೆ. ಜಿದ್ದಿಗೆ ಬಿದ್ದಂತೆ ಹೊಸ ಹೊಸ ತಿರುವುಗಳನ್ನು ಕೊಡುತ್ತಾ ಮುಂದೆ ಸಾಗುತ್ತಿವೆ. ಜೀ ಕನ್ನಡ, ಕಲರ್ಸ್ ಕನ್ನಡ, ಉದಯ ಟಿವಿ, ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ ಧಾರಾವಾಹಿಗಳಲ್ಲಿ ಹಲವು ಪ್ರೇಕ್ಷಕರ ಮನಸನ್ನು ಗೆದ್ದಿವೆ. ಇನ್ನೂ ಸೋಶಿಯಲ್ ಮೀಡಿಯಾ ಹವಾ ಹೇಗಿದೆ? ಯಾವ ಧಾರಾವಾಹಿ ಎಷ್ಟು ಟಿಆರ್‌ಪಿ ಗಳಿಸಿದೆ ನೋಡೋಣ ಬನ್ನಿ.
ಟಾಪ್ ಒನ್ ಸ್ಥಾನವನ್ನು ಜೀ ಕನ್ನಡದಲ್ಲಿ ಪ್ರಸಾರವಾಗುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಉಳಿಸಿಕೊಂಡಿದೆ. ಈಗ ಸ್ನೇಹ ಹಾಗೂ ಕಂಠಿಯ ಪ್ರೀತಿ ಬಂಗಾರಮ್ಮನಿಗೆ ಗೊತ್ತಾಗಿದೆ. ಆದರೆ ಈ ವಿಷಯ ಕಂಠಿಗೆ ತಿಳಿದಿಲ್ಲ. ಕಂಠಿ, ಸ್ನೇಹಾಳ ಜೊತೆಗೆ ಪರೀಕ್ಷೆ ಬರೆಸಲು ಕರೆದುಕೊಂಡು ಹೋಗಿದ್ದಾನೆ. ಈ ಧಾರಾವಾಹಿ 7.8 ಟಿಆರ್‌ಪಿ ಪಡೆದು ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಎರಡನೇ ಸ್ಥಾನಕ್ಕೆ ಬಂದ ಗಟ್ಟಿಮೇಳ
'ಗಟ್ಟಿಮೇಳ' ಧಾರಾವಾಹಿ ಕಳೆದ ಬಾರಿ ಮೊದಲನೇ ಸ್ಥಾನದಲ್ಲಿ ಇತ್ತು. ಈ ಬಾರಿ ಎರಡನೇ ಸ್ಥಾನಕ್ಕೆ ಬಂದಿದೆ. ಅದಿತಿ ಹಾಗೂ ಧ್ರುವನ ಎಂಗೇಜ್ಮೆಂಟ್ ಆಗಿದೆ. ಅದಿತಿ ನನಗೆ ಗ್ರ್ಯಾಂಡ್ ಆಗಿ ಮದುವೆಯಾಗಲು ಇಷ್ಟ ಇಲ್ಲ ಎಂದು ವೇದಾಂತ್ ಬಳಿ ಹೇಳಿದ್ದಾಳೆ. ಇದಕ್ಕೆ ವೇದಾಂತ್ ಸಹ ಒಪ್ಪಿದ್ದಾನೆ. ಈ ಧಾರಾವಾಹಿಗೆ ಸಿಕ್ಕಿರೋದು 7.7 ಟಿಆರ್‌ಪಿ.
'ಶ್ರೀರಸ್ತು-ಶುಭಮಸ್ತು' ಪ್ರಬಲ ಪೈಪೋಟಿ
ಜೀ ಕನ್ನಡದಲ್ಲಿ ಪ್ರಸಾರವಾಗುವ 'ಶ್ರೀರಸ್ತು-ಶುಭಮಸ್ತು' ಧಾರಾವಾಹಿ ಕಳೆದ ವಾರ ಎರಡನೇ ಸ್ಥಾನ ಪಡೆದುಕೊಂಡಿತ್ತು. ಆದರೆ ಈಗ ಮೂರನೇ ಸ್ಥಾನಕ್ಕೆ ಬಂದಿದೆ. ಅವಿಗೆ ತಂದೆಯ ಮೇಲೆ ಸ್ಪಲ್ಪ ಸಾಫ್ಟ್ ಕಾರ್ನರ್ ಬರುತ್ತಿದೆ. ಮಾಧವ, ತುಳಸಿಯನ್ನು ಕೆಫೆಯಲ್ಲಿ ಮೇನ್ ಶೆಫ್ ಆಗಿ ಮಾಡಿಕೊಳ್ಳಬೇಕು ಎಂಬ ತವಕದಲ್ಲಿ ಇದ್ದಾನೆ. ಈ ಧಾರಾವಾಹಿ 7.3 ಅನ್ನು ಪಡೆದುಕೊಂಡಿದೆ.
'ಲಕ್ಷ್ಮೀ ಬಾರಮ್ಮ' ಹಿಂದಿಕ್ಕಿದ ಸತ್ಯ
ಕಳೆದ ವಾರ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯನ್ನು 'ಸತ್ಯ' ಧಾರಾವಾಹಿ ಹಿಂದಿಕ್ಕಿದೆ. 4ನೇ ಸ್ಥಾನವನ್ನು 'ಸತ್ಯ' ಧಾರಾವಾಹಿ ಪಡೆದುಕೊಂಡಿದೆ. ರಿತು ಮದುವೆಯನ್ನು ರಾಕೇಶ್ ಜೊತೆಗೆ ಮಾಡಬೇಕು ಎಂದು ಸತ್ಯ ಅಂದುಕೊಂಡಿದ್ದಾಳೆ. ಇದರಿಂದಾಗಿ ಮನೆಯವರು ಸತ್ಯಳ ಮೇಲೆ ದ್ವೇಷ ಸಾಧಿಸುವಂತಾಗಿದೆ. ಬಾಲ ಮಾತ್ರ ದಿವ್ಯಳನ್ನು ನಂಬಿಸುವ ಸಲುವಾಗಿ ಹೊಸ ನಾಟಕ ಮಾಡುತ್ತಿದ್ದಾನೆ.

ಐದನೇ ಸ್ಥಾನದಲ್ಲಿ 'ಲಕ್ಷ್ಮೀ ಬಾರಮ್ಮ'
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಲಕ್ಷ್ಮೀ ಅಪ್ಪನ ಮನೆಗೆ ಬಂದಿದ್ದಾಳೆ. ಅವರ ಚಿಕ್ಕಮ್ಮ ಅರಿಶಿಣ ಕುಂಕುಮದ ಶಾಸ್ತ್ರವನ್ನು ಮಾಡುತ್ತಿದ್ದಾಳೆ. ಇದಕ್ಕೆ ವೈಷ್ಣವ್, ಲಕ್ಷ್ಮೀಯನ್ನು ರೇಗಿಸುತ್ತಿದ್ದಾನೆ. ಈ ಧಾರಾವಾಹಿ 6.5 ಟಿಆರ್‌ಪಿಯನ್ನು ಪಡೆದುಕೊಂಡಿದೆ.
ಆರನೇ ಸ್ಥಾನದಲ್ಲಿ ಎರಡು ಧಾರಾವಾಹಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮೀ' ಹಾಗೂ ಜೀ ಕನ್ನಡದಲ್ಲಿ ಪ್ರಸಾರವಾಗುವ 'ಹಿಟ್ಲರ್ ಕಲ್ಯಾಣ' ಆರನೇ ಸ್ಥಾನವನ್ನು ಪಡೆದುಕೊಂಡಿವೆ. ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯನ ಮಾವನಿಗೆ ಹಾರ್ಟ್ ಅಟ್ಯಾಕ್ ಆಗಿದ್ದು, ತಾಂಡವ್ ಮಾತ್ರ ಶ್ರೇಷ್ಠಾಳ ಕೈಗೊಂಬೆಯಾಗಿ ಮನೆಯವರನ್ನೇ ಮರೆತಿದ್ದಾನೆ. 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಅಂತರಾ ಈಗ ಎಜೆ ಜೊತೆಯಲ್ಲಿ ಸ್ಪಲ್ಪ ಸ್ಪಲ್ಪವೇ ಮನಸು ಬಿಚ್ಚಿ ಮಾತನಾಡುತ್ತಿದ್ದಾಳೆ. ಈ ಎರಡು ಧಾರಾವಾಹಿಗಳು 5.7 ಟಿಆರ್‌ಪಿಯನ್ನು ಪಡೆದುಕೊಂಡಿದೆ.
7ನೇ ಸ್ಥಾನ ಪಡೆದ 'ಭೂಮಿಗೆ ಬಂದ ಭಗವಂತ'
ಜೀ ಕನ್ನಡದಲ್ಲಿ ಪ್ರಸಾರವಾಗುವ ಭೂಮಿಗೆ ಬಂದ ಭಗವಂತ ಏಳನೇ ಸ್ಥಾನವನ್ನು ಪಡೆದಿದೆ. ಶಿವಪ್ರಸಾದ್‌ಗೆ ದಿನಕ್ಕೊಂದು ತಲೆನೋವು ತಪ್ಪಿಲ್ಲ. ಈಗ ಭಗವಂತನ ಜೊತೆಯಲ್ಲಿ ಮಾತನಾಡಿಕೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.
8ನೇ ಸ್ಥಾನದಲ್ಲಿ 2 ಧಾರಾವಾಹಿಗಳು
ಎಂಟನೇ ಸ್ಥಾನವನ್ನು 'ತ್ರಿನಯನಿ' ಮತ್ತು 'ಪುನರ್ ವಿವಾಹ' ಧಾರಾವಾಹಿಗಳು ಪಡೆದುಕೊಂಡಿದೆ. ಇವೆರಡು ಧಾರಾವಾಹಿಗಳು ಮಧ್ಯಾಹ್ನ ಪ್ರಸಾರವಾಗುವ ಧಾರಾವಾಹಿಗಳು ಆಗಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಧಾರಾವಾಹಿ 4.9 ಟಿಆರ್‌ಪಿಯನ್ನು ಪಡೆದುಕೊಂಡಿದೆ. ಒಂಭತ್ತರಲ್ಲಿ 'ವೈದೇಹಿ ಪರಿಣಯ' ಹಾಗೂ ಹತ್ತರಲ್ಲಿ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿಗಳಿವೆ.


Click it and Unblock the Notifications











