ಕಳೆದ ವಾರದ ಟಿಆರ್‌ಪಿ ಲಿಸ್ಟ್ ಔಟ್: ಮತ್ತೆ 'ಪುಟ್ಟಕ್ಕನ ಮಕ್ಕಳು' ನಂಬರ್ ಒನ್

By ಶೃತಿ ಹರೀಶ್ ಗೌಡ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟಾಪ್ ಒನ್ ಸ್ಥಾನವನ್ನು ಭದ್ರವಾಗಿ ಉಳಿಸಿಕೊಂಡು ಬಂದಿದೆ. ಸ್ನೇಹಾ -ಕಂಠಿ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಸ್ನೇಹಾಗೆ ಕಂಠಿ ಸತಾಯಿಸುತ್ತಿದ್ದಾನೆ. ಇದರಿಂದ ಸ್ನೇಹ ಅನ್ಯ ಮನಸ್ಕಳಾಗಿದ್ದಾಳೆ. ಈ ಧಾರಾವಾಹಿ 8.8 ಟಿಆರ್‌ಪಿಯನ್ನು ಪಡೆದುಕೊಂಡಿದೆ.

ಕಳೆದ ಬಾರಿಯೂ ಸಹ 'ಗಟ್ಟಿಮೇಳ' ಧಾರಾವಾಹಿ ಎರಡನೇ ಸ್ಥಾನದಲ್ಲಿ ಇತ್ತು. ಈ ಬಾರಿಯು ಎರಡನೇ ಸ್ಥಾನವನ್ನು ಹಾಗೇ ಉಳಿಸಿಕೊಂಡು ಪ್ರೇಕ್ಷಕರ ಮನ ಗೆದ್ದಿದೆ. ವೇದಾಂತ್ ಮನೆದಲ್ಲಿ ಸೀರೆ ತೆಗೆದುಕೊಳ್ಳುವ ಸಂಭ್ರಮ ಮನೆ ಮಾಡಿದೆ. ಈ ಧಾರಾವಾಹಿ 8.0 ಟಿಆರ್‌ಪಿಯನ್ನು ಪಡೆದಿದೆ.

ಜೀ ಕನ್ನಡದಲ್ಲಿ ಪ್ರಸಾರವಾಗುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಸ್ಥಾನ ಈ ವಾರವೂ ಬದಲಾಗಿಲ್ಲ. ಮಾಧವನಿಗೆ ದತ್ತ ಮಗನ ಸ್ಥಾನವನ್ನು ಕೊಟ್ಟಿದ್ದಾನೆ. ಹುಷಾರಿಲ್ಲದ ದತ್ತನ ಆರೈಕೆಯನ್ನು ಮಾಧವ ಮಾಡಿದ್ದಾನೆ. ಈ ಧಾರಾವಾಹಿ 7.0 ಸ್ಥಾನವನ್ನು ಪಡೆದುಕೊಂಡಿದೆ.

'ಹಿಟ್ಲರ್‌ ಕಲ್ಯಾಣ' ಹಿಂದಿಕ್ಕಿದ 'ಸತ್ಯ'

'ಹಿಟ್ಲರ್‌ ಕಲ್ಯಾಣ' ಹಿಂದಿಕ್ಕಿದ 'ಸತ್ಯ'

'ಹಿಟ್ಲರ್‌ ಕಲ್ಯಾಣ' ಧಾರಾವಾಹಿಯನ್ನು 'ಸತ್ಯ' ಧಾರಾವಾಹಿ ಮೇಲೇರಿದೆ. 'ಸತ್ಯ' ಧಾರಾವಾಹಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಸತ್ಯ ಮತ್ತು ಕಾರ್ತಿಕ್ ಹಾಯಾಗಿ ಇರುವಾಗ ಅಲ್ಲೇ ಇರುವ ಬಾಲ ಮತ್ತು ಸತ್ಯಳ ಅಕ್ಕ ದಿವ್ಯಾ, ಇಬ್ಬರಿಗೂ ಕಿರಿ ಕಿರಿ ಮಾಡುತ್ತಿದ್ದಾರೆ. ಇನ್ನು ಕೀರ್ತನಾ ಸತ್ಯ ವಿರುದ್ಧ ಮಸಲತ್ತು ನಡೆಸುತ್ತಿದ್ದು, ಏನೇನೋ ಪ್ಲ್ಯಾನ್ ಮಾಡ್ತಿದ್ದಾಳೆ. ಈ ಧಾರಾವಾಹಿ 6.8 ಟಿಆರ್‌ಪಿಯನ್ನು ಪಡೆದುಕೊಂಡಿದೆ.

5ನೇ ಸ್ಥಾನಕ್ಕೆ 'ಹಿಟ್ಲರ್ ಕಲ್ಯಾಣ'

5ನೇ ಸ್ಥಾನಕ್ಕೆ 'ಹಿಟ್ಲರ್ ಕಲ್ಯಾಣ'

ಐದನೇ ಸ್ಥಾನವನ್ನು 'ಹಿಟ್ಲರ್ ಕಲ್ಯಾಣ' ಪಡೆದುಕೊಂಡಿದೆ. ಲೀಲಾ ಮತ್ತು ಎಜೆ ಪರಸ್ಪರ ಪ್ರೀತಿಸಲು ಶುರು ಮಾಡಿದ್ದು ಜೋಡಿ ಹಕ್ಕಿಗಳ ರೀತಿ ಹಾರಾಡುತ್ತಿದ್ದಾರೆ. ಅಜ್ಜಿ ಇಬ್ಬರಿಗೆ ಮರು ಮದುವೆ ಮಾಡಿಸಲು ಏನೇನೋ ಸರ್ಕಸ್ ಮಾಡುತ್ತಿದ್ದಾರೆ. ಮತ್ತೊಂದು ಕಡೆ ದುರ್ಗಾಗೆ ಅಂತರಾ ಎದುರಾಗಿದ್ದಾಳೆ. ಕಥೆ ಈಗ ಕುತೂಹಲದ ಹಂತ ತಲುಪಿದೆ. ಈ ಧಾರಾವಾಹಿ 6.4 ಟಿಆರ್‌ಪಿಯನ್ನು ಪಡೆದುಕೊಂಡಿದೆ.

'ಲಕ್ಷ್ಮೀ ಬಾರಮ್ಮ'ಗೆ 6ನೇ ಸ್ಥಾನ

'ಲಕ್ಷ್ಮೀ ಬಾರಮ್ಮ'ಗೆ 6ನೇ ಸ್ಥಾನ

'ಭಾಗ್ಯದ ಲಕ್ಷ್ಮಿ ಬಾರಮ್ಮ' ಧಾರಾವಾಹಿ ಟಾಪ್ 6ರಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಎಲ್ಲಾ ಅಡೆತಡೆಗಳನ್ನು ದಾಟಿ ವೈಷ್ಣವ್ ಲಕ್ಷ್ಮೀ ಮದುವೆ ಆಗಿದ್ದಾರೆ. ಮನೆಯವರ ಪ್ರೀತಿಗೆ ಕಟ್ಟುಬಿದ್ದು ವೈಷ್ಣವ್, ಲಕ್ಷ್ಮೀಯನ್ನು ಮದುವೆ ಮಾಡಿಕೊಂಡಿದ್ದಾನೆ. ಈ ಧಾರಾವಾಹಿ 6.0 ಟಿಆರ್‌ಪಿಯನ್ನು ಪಡೆದುಕೊಂಡಿದೆ.

'ಯಲ್ಲಮ್ಮ'ನ ಪವಾಡ

'ಯಲ್ಲಮ್ಮ'ನ ಪವಾಡ

'ಉಧೋ ಉಧೋ ಯಲ್ಲಮ್ಮ' ಧಾರಾವಾಹಿ 7ನೇ ಸ್ಥಾನವನ್ನು ಪಡೆದಿದೆ. ಭಕ್ತಿ ಪ್ರಧಾನ ಧಾರಾವಾಹಿಯನ್ನು ಜನರು ಇಷ್ಟಪಟ್ಟು ನೋಡುತ್ತಿದ್ದಾರೆ. ಇದು ಟಿಆರ್‌ಪಿಯಲ್ಲಿ 5.3 ಅನ್ನು ಧಾರಾವಾಹಿ ಪಡೆದಿದೆ. 'ಗೀತಾ' ಧಾರಾವಾಹಿ ಟಿಆರ್‌ಪಿಯಲ್ಲಿ ಕೊಂಚ ಕೆಳಗಿಳಿದಿದೆ. ಗೀತಾ ಮತ್ತು ವಿಜಿಗೆ ಸೂರ್ಯಪ್ರಕಾಶ್ ಕೊಲೆ ವಿಷಯದಲ್ಲಿ ಏನು ಮಾಡಬೇಕು ತಿಳಿಯುತ್ತಿಲ್ಲ. ಈ ಧಾರಾವಾಹಿ 5.0 ಟಿಆರ್‌ಪಿಯನ್ನು ಪಡೆದಿದೆ.

'ತ್ರಿಪುರ ಸುಂದರಿ' ಮೆಚ್ಚಿದ ಪ್ರೇಕ್ಷಕರು

'ತ್ರಿಪುರ ಸುಂದರಿ' ಮೆಚ್ಚಿದ ಪ್ರೇಕ್ಷಕರು

'ತ್ರಿಪುರ ಸುಂದರಿ' ಧಾರಾವಾಹಿ ಗಂಧರ್ವ ಕನ್ಯೆಯ ಪಾತ್ರವಾಗಿದ್ದು, ಜನರು ತ್ರಿಪುರ ಸುಂದರಿಯನ್ನು ಮೆಚ್ಚಿಕೊಂಡಿದ್ದಾರೆ. ಈ ಧಾರಾವಾಹಿ 4.7 ಟಿಆರ್‌ಪಿಯನ್ನು ಪಡೆದಿದೆ. ಟಾಪ್ ಹತ್ತರಲ್ಲಿ ಹಲವಾರು ಧಾರವಾಹಿಗಳು ಸ್ಥಾನವನ್ನು ಪಡೆದುಕೊಂಡಿವೆ. 'ಯಡಿಯೂರು ಸಿದ್ದಲಿಂಗೇಶ್ವರ', 'ರಾಮಾಚಾರಿ', 'ಲಕ್ಷಣ', 'ಪುನರ್ ವಿವಾಹ' ಸೇರಿದಂತೆ ಎಲ್ಲಾ ಕೊನೆಯ ಸ್ಥಾನದಲ್ಲಿವೆ.

More from Filmibeat

English summary
TRP Report Week 10: Puttakkana Makkalu continues to be the most watched show on Kannada television. Check out Latest Latest TRP Report. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X