ಮೊದಲ ಸ್ಥಾನದಲ್ಲಿ ಮೆರೆಯುತ್ತಿರುವ ಪುಟ್ಟಕ್ಕ: ಉಳಿದ ಸ್ಥಾನಗಳಿಗೆ ಪೈಪೋಟಿ ನಡೆಸುತ್ತಿರುವವರ TRP ಎಷ್ಟಿದೆ?

By ಶೃತಿ ಹರೀಶ್ ಗೌಡ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಟಾಪ್ ಒನ್ ಸ್ಥಾನವನ್ನು ಹಾಗೇ ಉಳಿಸಿಕೊಂಡು ಬರುತ್ತಿದೆ. ಸ್ನೇಹಾ ಹಾಗೂ ಕಂಠಿ ಒಬ್ಬರಿಗೊಬ್ಬರು ಪ್ರೀತಿ ಮಾಡುತ್ತಿದ್ದಾರೆ. ಕಂಠಿ ಪ್ರಪೋಸ್ ಮಾಡಲು ಬಂದಾಗ ಸ್ನೇಹ ನಿರಾಕರಿಸಿದ್ದಾಳೆ.‌ ನಂತರ ಕಂಠಿಗೆ ಆಟವನ್ನು ಆಡಿಸಿ ಸಪ್ರೈಸ್ ಕೊಟ್ಟಿದ್ದಾಳೆ. ಈ ಕಡೆ ಪುಟ್ಟಕ್ಕನ ಮಗಳಿಗೆ ವರದಕ್ಷಿಣೆ ಕಿರುಕುಳ ಶುರುವಾಗಿದೆ. ಈ ಧಾರಾವಾಹಿ 7.8 ಟಿಆರ್‌ಪಿಯನ್ನು ಪಡೆದಿದೆ.

2ನೇ ಸ್ಥಾನ ಹಾಗೇ ಉಳಿಸಿಕೊಂಡ 'ಗಟ್ಟಿಮೇಳ': ಕಳೆದ ಬಾರಿಯೂ ಸಹ 'ಗಟ್ಟಿಮೇಳ' ಧಾರಾವಾಹಿ 2ನೇ ಸ್ಥಾನದಲ್ಲಿ ಇತ್ತು. ಈ ಬಾರಿಯೂ ಅದೇ ಸ್ಥಾನವನ್ನು ಹಾಗೇ ಉಳಿಸಿಕೊಂಡು ಪ್ರೇಕ್ಷಕರ ಮನವನ್ನು ಗೆದ್ದಿದೆ. ವೇದಾಂತ್ ಮನೆದಲ್ಲಿ ಸೀಮಂತ ಸಂಭ್ರಮ ಮನೆ ಮಾಡಿದೆ. ವೈದೇಹಿಗೆ ನಿನ್ನ ಸ್ಥಾನದಲ್ಲಿ ನೀನು ಇರು ಎಂದು ಸುಹಾಸಿನಿ ಬೈದಿದ್ದಾಳೆ. ಈ ಧಾರಾವಾಹಿ 7.5 ಟಿಆರ್‌ಪಿಯನ್ನು ಪಡೆದಿದೆ.

TRP Report Week 11: Puttakkana Makkalu leads, between Gattimela and Lakshmi Baramma neck to neck Fight continues

3ನೇ ಸ್ಥಾನಕ್ಕೇರಿದ 'ಲಕ್ಷ್ಮೀ ಬಾರಮ್ಮ': ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ 3ನೇ ಸ್ಥಾನವನ್ನು ಪಡೆದುಕೊಂಡಿದೆ. ಅಕ್ಕ- ತಂಗಿಯ ಕಥೆಯಲ್ಲಿ ತಂಗಿಯ ಕಥೆಯನ್ನು ಎಲ್ಲರೂ ಸಹ ಮೆಚ್ಚಿಕೊಂಡಿದ್ದಾರೆ. ಈ ಧಾರಾವಾಹಿ 6.8 ಟಿಆರ್‌ಪಿಯನ್ನು ಪಡೆದಿದೆ.

4ನೇ ಸ್ಥಾನದಲ್ಲಿ 'ಶ್ರೀರಸ್ತು ಶುಭಮಸ್ತು': ಜೀ ಕನ್ನಡದಲ್ಲಿ ಪ್ರಸಾರವಾಗುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ತನ್ನ ಸ್ಥಾನದಿಂದ ಕೊಂಚ ಕೆಳಗೆ ಇಳಿದಿದೆ. ಈ ಧಾರಾವಾಹಿ 6.7 ಸ್ಥಾನವನ್ನು ಪಡೆದುಕೊಂಡಿದೆ. ಮಾಧವನಿಗೆ ಎರಡನೇ ಮಗನ ಎಂಗೇಜ್‌ಮೆಂಟ್ ತನ್ನ‌ ಶತ್ರು ಮಗಳ ಜೊತೆ ಎಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದರಿಂದ ಬಹಳ ವ್ಯಥೆಯನ್ನು ಪಟ್ಟಿದ್ದಾರೆ. ತುಳಸಿಗೆ ಶಾರ್ವರಿ ಅವಮಾನ ಮಾಡಿದ್ದಾಳೆ.

TRP Report Week 11: Puttakkana Makkalu leads, between Gattimela and Lakshmi Baramma neck to neck Fight continues

ಒಂದು ಸ್ಥಾನ ಕೆಳಗಿಳಿದ 'ಸತ್ಯ': ಕಳೆದ ಬಾರಿ 4ನೇ ಸ್ಥಾನವನ್ನು ಪಡೆದಿದ್ದ 'ಸತ್ಯ' 5.9 ಟಿಆರ್‌ಪಿ ಪಡೆದು ಈ ವಾರ 5ನೇ ಸ್ಥಾನಕ್ಕೆ ಬಂದಿದೆ. ಸತ್ಯ ಹಾಗೂ ಕಾರ್ತಿಕ್‌ಗೆ ಕೀರ್ತನಾ ಬಹಳಷ್ಟು ಟಾರ್ಚರ್ ಕೊಡಿಸುತ್ತಿದ್ದಾಳೆ. ಅವಾರ್ಡ್ ಫಂಕ್ಷನ್ ತಪ್ಪಿಸಲು ಯೋಜನೆ ಮಾಡಿದ್ದಾರೆ. ಇದಕ್ಕೆಲ್ಲ ಸೆಡ್ಡು ಹೊಡೆದ ಸತ್ಯ ಅವಾರ್ಡ್ ಫಂಕ್ಷನ್‌ಗೆ ಕಾರ್ತಿಕ್ ಜೊತೆಗೆ ಬಂದಿದ್ದಾಳೆ.

'ಹಿಟ್ಲರ್ ಕಲ್ಯಾಣ'- 'ಭಾಗ್ಯಲಕ್ಷ್ಮಿ' ಧಾರಾವಾಹಿ ಎರಡು ಸಹ ಒಂದೇ ಟಿಆರ್‌ಪಿಯನ್ನು ಪಡೆದುಕೊಂಡು ಐದನೇ ಸ್ಥಾನದಲ್ಲಿವೆ. ಲೀಲಾ-ಏಜೆ ಕೈಯಲ್ಲಿ ತಾಳಿ ಕಟ್ಟಿಸಿಕೊಳ್ಳಲು ನೋಡುತ್ತಿದ್ದಾಳೆ. ಆದರೆ ದುರ್ಗಾ, ಲೀಲಾ-ಎಜೆಗೆ ಶಾಕ್ ಕೊಡಲು ನಿರ್ಧಾರ ಮಾಡಿದ್ದು ಅಂತರಾಳನ್ನು ಕರೆದುಕೊಂಡು ಬರುವ ಪ್ಲ್ಯಾನ್ ಮಾಡಿದ್ದಾಳೆ.

TRP Report Week 11: Puttakkana Makkalu leads, between Gattimela and Lakshmi Baramma neck to neck Fight continues

'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಭಾಗ್ಯ ತನ್ನ ತಂಗಿಯ ಮದುವೆಯನ್ನು ಮುಗಿಸಿ ನಿರಾಳಳಾಗಿದ್ದಾಳೆ. ಆದರೆ ಗಂಡನ ತಾತ್ಸಾರ ಮಾತ್ರ ಕಡಿಮೆಯಾಗಿಲ್ಲ. ಈ ಕಡೆ ಗರ್ಲ್ ಫ್ರೆಂಡ್ ಫೋನ್ ರಿಸೀವ್ ಮಾಡದ್ದಕ್ಕೆ ಭಾಗ್ಯಳ ಗಂಡನಿಗೆ ಚಿಂತೆಯಾಗಿದೆ. ಇವೆರಡು ಧಾರಾವಾಹಿಗಳು 5.8 ಟಿಆರ್‌ಪಿಯನ್ನು ಪಡೆದುಕೊಂಡಿವೆ.

ಕಳೆದ ಬಾರಿ ಕೆಳಕ್ಕೆ ಇಳಿದಿದ್ದ 'ಗೀತಾ' ಧಾರಾವಾಹಿ ಮೇಲಕ್ಕೇರಿದೆ. ಸುಧಾರಾಣಿ ಹೊಸ ಮನೆಗೆ ಇಡೀ ಫ್ಯಾಮಿಲಿಯನ್ನು ಕರೆದುಕೊಂಡು ಬಂದಿದ್ದಾಳೆ. ಭಾನುಮತಿ ಹಾಗೂ ಶೃತಿಗೆ ಚಿಂತೆ ಕಾಡಲು ಶುರುವಾಗಿವೆ. ಈ ಧಾರಾವಾಹಿ 4.9 ಟಿಆರ್‌ಪಿಯನ್ನು ಪಡೆದಿದೆ. 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿ ಏಳನೇ ಸ್ಥಾನವನ್ನು ಪಡೆದಿದೆ.

8ನೇ ಸ್ಥಾನವನ್ನು 4 ಧಾರಾವಾಹಿಗಳು ಪಡೆದುಕೊಂಡಿವೆ. 'ತ್ರಿನಯನಿ' 'ರಾಮಾಚಾರಿ', 'ತ್ರಿಪುರ ಸುಂದರಿ' ಹಾಗೂ 'ಪುನರ್ ವಿವಾಹ' ಪಡೆದಿದ್ದು, 4.2 ಟಿಆರ್‌ಪಿಯನ್ನು ಪಡೆದುಕೊಂಡಿವೆ. 9ನೇ ಸ್ಥಾನದಲ್ಲಿ 'ಯಡಿಯೂರು ಸಿದ್ದಲಿಂಗೇಶ್ವರ' ಧಾರಾವಾಹಿ ಇದ್ದು 10ನೇ ಸ್ಥಾನದಲ್ಲಿ 'ವೈದೇಹಿ ಪರಿಣಯ', 'ಲಕ್ಷಣ', 'ಪಾರು' ಧಾರಾವಾಹಿಗಳಿವೆ.

More from Filmibeat

English summary
TRP Report Week 11: Puttakkana Makkalu leads, between Gattimela and Lakshmi Baramma neck neck Fight. Here Is complete details Week 11 TRP. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X