ಟಿ ಎಸ್ ನಾಗಾಭರಣ ಸಂಚಿಕೆಯ 'ವೀಕೆಂಡ್ ವಿತ್ ರಮೇಶ್' ಪ್ರೊಮೋ ನೋಡಿ
Recommended Video
ಕನ್ನಡದ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಅತಿಥಿಯಾಗಿದ್ದಾರೆ. ಕಾರ್ಯಕ್ರಮ ಇದೇ ಭಾನುವಾರ ಪ್ರಸಾರ ಆಗಲಿದ್ದು, ಸಂಚಿಕೆಯ ಪ್ರೋಮೋ ಇದೀಗ ಹೊರ ಬಂದಿದೆ.
ಟಿ ಎಸ್ ನಾಗಾಭರಣ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪ್ರೋಮೋ ಹಂಚಿಕೊಂಡಿದ್ದಾರೆ. ಪ್ರೊಮೋದಲ್ಲಿ ಅವರಿಗೆ ಬಂದ ಪ್ರಮುಖ ಪ್ರಶಸ್ತಿಗಳ ವಿವರವನ್ನು ನೀಡಲಾಗಿದೆ.
''9 ರಾಷ್ಟ್ರ ಪ್ರಶಸ್ತಿ, 15 ರಾಜ್ಯ ಪ್ರಶಸ್ತಿ, 4 ಫಿಲ್ಮ್ ಫೇರ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮೂರು ಬಾರಿ ರಾಷ್ಟ್ರೀಯ ಭಾವೈಕ್ಯತ ಪ್ರಶಸ್ತಿ ಪರೆದಿರುವ ಏಕೈಕ ಕನ್ನಡಿಗ ಟಿ ಎಸ್ ನಾಗಾಭರಣ'' ಎಂದು ರಮೇಶ್ ಸ್ವಾಗತ ಮಾಡಿದ್ದಾರೆ.

''ನನ್ನ ಬದುಕಿನ ಪಯಣವನ್ನು ನಾನು ನೋಡುವ ಹಾಗೆ ಮಾಡುತ್ತಿರುವ ನಿಮಗೆ ಆಭಾರಿ'' ಎನ್ನುವ ಮೂಲಕ ಕಾರ್ಯಕ್ರಮದ ಇಡೀ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.
ಕಳೆದ 40 ವರ್ಷಗಳಿಂದ ನಾಗಾಭರಣ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಹಣ, ಆಕಸ್ಮಿಕ, ಅನ್ವೇಷಣೆ, ಜನುಮದ ಜೋಡಿ, ಮೈಸೂರು ಮಲ್ಲಿಗೆ, ಚಿನ್ನಾರಿ ಮುತ್ತ, ನಾಗಮಂಡಲ, ಚಿಗುರಿದ ಕನಸು ಅವರ ನಿರ್ದೇಶನದ ಬೆಸ್ಟ್ ಸಿನಿಮಾಗಳಾಗಿವೆ.
ಬೆನಕ ಎಂಬ ತಮ್ಮ ರಂಗ ತಂಡದ ಮೂಲಕ ಸಾಕಷ್ಟು ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ರಾಷ್ಟ್ರೀಯ ವಾಹಿನಿ ಹಾಗೂ ಪ್ರಾದೇಶಿಕ ವಾಹಿನಿಗಳಿಗೆ ಕೆಲವು ಧಾರಾವಾಹಿಗಳನ್ನು ಮಾಡಿದ್ದಾರೆ.


Click it and Unblock the Notifications











