ಸಾಧಕರ ಕುರ್ಚಿ ಮೇಲೆ ಹಿರಿಯ ನಿರ್ದೇಶಕ ನಾಗಾಭರಣ

Recommended Video

Weekend With Ramesh Season 4:ಕನ್ನಡದ ಹಿರಿಯ ನಿರ್ದೇಶಕರೊಬ್ಬರು ವೀಕೆಂಡ್ ವಿತ್ ರಮೇಶ್‍ನಲ್ಲಿ

ಕನ್ನಡ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ ಈಗ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಅತಿಥಿಯಾಗಿದ್ದಾರೆ. ಸಾಧಕರ ಕುರ್ಚಿ ಮೇಲೆ ಕುಳಿತ ಅವರ ಫೋಟೋವನ್ನು ಪುತ್ರ ಪನ್ನಗ ಭರಣ ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗ, ಕನ್ನಡ ಕಿರುತೆರೆ ಹಾಗೂ ಕನ್ನಡ ರಂಗಭೂಮಿಗೆ ದೊಡ್ಡ ಕೊಡುಗೆ ನೀಡುರುವ ಇವರನ್ನು ಸಾಧಕರ ಕುರ್ಚಿ ಮೇಲೆ ಕೂರಿಸಿ ಗೌರವ ನೀಡಲಾಗಿದೆ. ಅನೇಕರಿಗೆ ತಿಳಿಯದ ನಾಗಾಭರಣ ಅವರ ಜೀವದ ವಿಚಾರಗಳು ಈ ಕಾರ್ಯಕ್ರಮದಲ್ಲಿ ಹೊರ ಬರಲಿದೆ.

ನಾಗಾಭರಣ ಈವರೆಗೆ ಸುಮಾರು 34 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇವುಗಳಲ್ಲಿ 19ಕ್ಕೂ ಹೆಚ್ಚು ಸಿನಿಮಾಗಳಿಗೆ ಪ್ರತಿಷ್ಠಿತ ಪ್ರಶಸ್ತಿಗಳು ಬಂದಿವೆ. ವಿವಿಧ ವಿಭಾಗದಲ್ಲಿ 15 ಚಿತ್ರಗಳಿಗೆ ರಾಜ್ಯ ಹಾಗೂ 8 ರಾಷ್ಟ್ರ ಪ್ರಶಸ್ತಿ ಲಭಿಸಿದೆ.

ts nagabharana will be next guest of weekend with ramesh 4

ಕಳೆದ 40 ವರ್ಷಗಳಿಂದ ನಾಗಾಭರಣ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಹಣ, ಆಕಸ್ಮಿಕ, ಅನ್ವೇಷಣೆ, ಜನುಮದ ಜೋಡಿ, ಮೈಸೂರು ಮಲ್ಲಿಗೆ, ಚಿನ್ನಾರಿ ಮುತ್ತ, ನಾಗಮಂಡಲ, ಚಿಗುರಿದ ಕನಸು ಅವರ ನಿರ್ದೇಶನದ ಬೆಸ್ಟ್ ಸಿನಿಮಾಗಳಾಗಿವೆ.

ಬೆನಕ ಎಂಬ ತಮ್ಮ ರಂಗ ತಂಡದ ಮೂಲಕ ಸಾಕಷ್ಟು ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ರಾಷ್ಟ್ರೀಯ ವಾಹಿನಿ ಹಾಗೂ ಪ್ರಾದೇಶಿಕ ವಾಹಿನಿಗಳಿಗೆ ಕೆಲವು ಧಾರಾವಾಹಿಗಳನ್ನು ಮಾಡಿದ್ದಾರೆ.

ಇಷ್ಟೊಂದು ಸಾಧನೆ ಮಾಡಿರುವ ಇದರ ಕಥೆ ವೀಕೆಂಡ್ ಕಾರ್ಯಕ್ರಮದಲ್ಲಿ ಪ್ರಸಾರ ಆಗುತ್ತಿದೆ. ಜೂನ್ 8 ರಂದು ಇವರ ಸಂಚಿಕೆ ಪ್ರಸಾರ ಆಗುವ ಸಾಧ್ಯತೆ ಇದೆ.

More from Filmibeat

English summary
Kannada director TS Nagabharana will be next guest of Zee Kannada channel's Weekend With Ramesh 4.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X