Gicchi giligili-3: ತುಕಾಲಿ ಸಂತು ಪತ್ನಿ ಮಾನಸ ಕಾಮಿಡಿಗೆ ವೀಕ್ಷಕರು ಫುಲ್ ಖುಷ್

By ಎಸ್ ಸುಮಂತ್

ಕಲರ್ಸ್ ಕನ್ನಡದಲ್ಲಿ ನಕ್ಕು ನಲಿಸುವ ಶೋ ಅಂದರೆ ಅದು ಗಿಚ್ಚಿ ಗಿಲಿಗಿಲಿ. ಈಗ ಸೀಸನ್- 3 ಶುರುವಾಗಿದೆ. ಈ ಬಾರಿ ನಗಿಸಲು ಹೊಸ ಕಲಾವಿದರು ಎಂಟ್ರಿ ಆಗಿದ್ದಾರೆ. ಸ್ಕಿಟ್‌ಗಳೇ ವಿಭಿನ್ನವಾಗಿದೆ. ನೋಡುಗರಂತು ನಕ್ಕು ನಕ್ಕು ಸುಸ್ತಾಗಿ ಹೋಗಿದ್ದಾರೆ. ಅದರಲ್ಲೂ ಮಾನಸ ಕಾಮಿಡಿಗೆ ಜೈ ಎನ್ನದವರೇ ಇಲ್ಲ. ಫಿಲ್ಟರ್ ಇಲ್ಲದೆ ಕಾಮಿಡಿ ಮಾಡೋ ಮಾನಸಾಗೆ ಫುಲ್ ಮಾರ್ಕ್ಸ್ ಸಿಕ್ಕಿದೆ.

ಬಿಗ್ ಬಾಸ್ ಸೀಸನ್- 10 ಮುಗಿದಿದೆ. ಈ ಸೀಸನ್‌ನಲ್ಲಿ ತುಕಾಲಿ ಸಂತು ಕೂಡ ಸ್ಪರ್ಧಿಯಾಗಿದ್ದರು. ಎರಡನೇ ಅಥವಾ ಮೂರನೇ ವಾರಕ್ಕೆಲ್ಲಾ ವಾಪಾಸ್ ಮನೆಗೆ ಹೋಗುತ್ತಾರೆ ಎಂದೆ ಎಲ್ಲರೂ ನಂಬಿದ್ದರು. ಆದರೆ ಆ ರೀತಿ ಆಗಲೇ ಇಲ್ಲ. ಫಿನಾಲೆ ತನಕ ಬಂದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ದರು. ಇದೀಗ ಕಲರ್ಸ್ ಕನ್ನಡದ ಜೊತೆಗೆ ಬಾಂಧವ್ಯ ಮುಂದುವರೆಸಿದ್ದಾರೆ.

Tukali Santu wife Manasa at entry to gicchi gili gili season- 3

'ಗಿಚ್ಚಿ ಗಿಲಿಗಿಲಿ'ಗೆ ತುಕಾಲಿ ಎಂಟ್ರಿ

ಬಿಗ್ ಬಾಸ್ ಸೀಸನ್-10 ಮುಗಿದ ಮೇಲೆ ತುಕಾಲಿ ಸಂತೋಷ್ ಮತ್ತೆ ಕಲರ್ಸ್ ಕನ್ನಡದ ಮೂಲಕ ತಮ್ಮ ಬಾಂಧವ್ಯವನ್ನು ಮುಂದುವರೆಸಿದ್ದಾರೆ. 'ಗಿಚ್ಚಿ ಗಿಲಿಗಿಲಿ' ಮೂಲಕ ಕಲರ್ಸ್ ಕನ್ನಡದ ವೀಕ್ಷಕರನ್ನು ನಕ್ಕು ನಲಿಸುವ ಕೆಲಸ ಮಾಡಿದ್ದಾರೆ. ತುಕಾಲಿ ಸಂತು ಹಳ್ಳಿ ಸೊಗಡಿನ ಕಾಮಿಡಿ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಬಿಗ್ ಬಾಸ್ ಮುಗಿದ ಮೇಲೆ ತುಕಾಲಿ ಸಂತೋಷ್, ಡ್ರೋನ್ ಪ್ರತಾಪ್, ಇಶಾನಿ ಮೂರು ಜನ ಗಿಚ್ಚಿ ಗಿಲಿಗಿಲಿಗೆ ಎಂಟ್ರಿ ಕೊಟ್ಟಿದ್ದಾರೆ.

ಸಂತು ಪತ್ನಿ ಮಾನಸ ಮಿಂಚು

ಈ ಬಾರಿ ಮತ್ತೊಂದು ಸ್ಪೆಷಾಲಿಟಿ ಇದೆ. ತುಕಾಲಿ ಸಂತೂ ಹಾಗೂ ಮಾನಸಾಳದ್ದು ಹೇಳಿ ಮಾಡಿಸಿದ ಜೋಡಿ. ಅರೆಂಜ್ ಮ್ಯಾರೇಜ್ ಆದರೂ ಇಬ್ಬರ ಮನೋಭಾವ ಒಂದೇ ತರನಾಗಿದೆ. ಕಾಮಿಡಿ ಮಾಡುವುದರಲ್ಲಿ ತುಕಾಲಿ ಸಂತೂಗಿಂತ ನಿಸ್ಸೀಮರು ಮಾನಸ. ಹೀಗಾಗಿ ಗಂಡ-ಹೆಂಡತಿ ಇಬ್ಬರನ್ನು ಕಲರ್ಸ್ ಕನ್ನಡ ಕರೆಸಿದೆ.

ತುಕಾಲಿ ಮರ್ಯಾದೆ ತೆಗೆದ ಮಾನಸ

ಮಾನಸ ನ್ಯಾಚುರಲ್‌ ಆಗಿಯೇ ಕಾಮಿಡಿ ಮಾಡುತ್ತಾರೆ. ಅವರಿಗೆ ಅಂತ ಯಾವುದೇ ಸ್ಕ್ರಿಪ್ಟ್ ಬೇಡ. ಅಷ್ಟು ನಾಜೂಕಾಗಿ ಕಾಮಿಡಿ ಮಾಡುತ್ತಾರೆ. ತುಕಾಲಿ ಸಂತೂಗೆ ವರ್ತೂರು ಸಂತೋಷ್ ಒಂದು ಡಾಲರ್ ಕೊಟ್ಟಿದ್ದಾರೆ. ಅದಕ್ಕೆ ನಿರ್ಮಾಪಕರು ಚಿನ್ನದ ಸರವನ್ನು ನೀಡಿದ್ದಾರೆ. ಈ ವಿಚಾರವನ್ನೇ ಕಾಮಿಡಿ ಮಾಡಿದ ಮಾನಸ, ನನ್ನ ಗಂಡ ಕಾಸ್ಟ್ಲಿಯೆಸ್ಟ್ ಭಿಕ್ಷುಕ ಎಂದಿದ್ದಾರೆ. ಡಾಲರ್ ಮನೆಯಲ್ಲಿಯೇ ಇಡಬಹುದಿತ್ತು. ಆದರೆ ಜೇಬಲ್ಲಿ ಇಟ್ಟುಕೊಂಡು ಓಡಾಡ್ತಾ ಇದ್ದಿದ್ದೇ, ಯಾರಾದರೂ ಸರ ಕೊಡಲಿ ಅಂತ. ಉಂಗುರು ಬೇರೆ ಯಾರ ಹತ್ರಾನೋ ತಗೊಂಡಿದ್ದಾರೆ. ಈಗ ಮನೆಯಲ್ಲಿ ಇಟ್ಟು ಬಂದಿದ್ದಾರೆ ಎಂದು ಪತಿಯ ಕಾಲೆಳೆದಿದ್ದಾರೆ. ಮಾನಸ ಅವರ ಕಾಮಿಡಿಗೆ ಜನ ಬಿದ್ದು ಬಿದ್ದು ನಕ್ಕಿದ್ದಾರೆ.

Tukali Santu wife Manasa at entry to gicchi gili gili season- 3
ಮಾನಸ ಕಾಮಿಡಿಗೆ ನೋಡುಗರು ಫಿದಾ

ಸಂತು ಪತ್ಮಿ ಮಾನಸ ಮಾಡುವ ಕಾಮಿಡಿಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಸಾಕಷ್ಟು ಸಲ ಹೊಗಳಿದ್ದಾರೆ. ತುಕಾಲಿ ಸಂತೂಗಿಂತ ಮಾನಸ ಕಾಮಿಡಿ ಸೂಪರ್ ಆಗಿರುತ್ತೆ ಎಂದಿದ್ದಾರೆ. ಮಾನಸರನ್ನು ಮುಂದಿನ ಬಿಗ್ ಬಾಸ್‌ಗೆ ಕರೆತನ್ನಿ ಎಂದಿದ್ದಾರೆ. 'ಗಿಚ್ಚಿ ಗಿಲಿಗಿಲಿ'ಯಲ್ಲೂ ಮಾನಸ ಸಿಕ್ಕಾಪಟ್ಟೆ ಕಾಮಿಡಿ ಮಾಡುತ್ತಾರೆ. ಇಬ್ಬರ ನಡುವಿನ ಹೊಂದಾಣಿಕೆ ತುಂಬಾ ಚೆನ್ನಾಗಿದೆ.

More from Filmibeat

English summary
Tukali Santu wife Manasa Fun At gicchi gili gili season- 3
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X