ತುಳು ಸಿನಿಮಾಗಳ ಚಾರ್ಲಿ ಚಾಪ್ಲಿನ್ ಅರವಿಂದ ಬೋಳಾರ್ ಬಗ್ಗೆ ಗೊತ್ತೆ?

By ಪೂರ್ವ

ತುಳುನಾಡ ಚಾರ್ಲಿನ್ ಚಾಪ್ಲಿನ್ ಎಂದು ಪ್ರಸಿದ್ಧಿ ಪಡೆದಿರುವವರು ಅರವಿಂದ್ ಬೋಳಾರ್. ಕೋಸ್ಟಲ್‌ವುಡ್‌ನ ಹಾಸ್ಯ ಕಲಾವಿರಾದ ಇವರಿಗೆ ಕರಾವಳಿಯಲ್ಲಿ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಇವರ ಅಭಿನಯಕ್ಕೆ ಮಾರು ಹೋಗದವರ ಸಂಖ್ಯೆ ಕಡಿಮೆ, ಅನೇಕ ಜನ ಅರವಿಂದ್ ಬೋಲಾರ್ ಕಾಮಿಡಿ ಕಚಗುಳಿಗಾಗಿಯೇ ಅವರ ಸಿನಿಮಾವನ್ನು ನೋಡುತ್ತಾರೆ. ಸಿನಿಮಾ ಹಾಗೂ ನಾಟಕಗಳಲ್ಲಿ ಹಾಸ್ಯವನ್ನು ಹೆಚ್ಚು ಇಷ್ಟಪಡುವ ಕರಾವಳಿಗರಿಗೆ ಅರವಿಂದ್ ಬೋಳಾರ್ ಇಷ್ಟವಾಗಿರುವುದರಲ್ಲಿ ಆಶ್ಚರ್ಯವಿಲ್ಲ.

ಅರವಿಂದ್‌ ನಟನೆ ಆರಂಭಿಸಿದ್ದು ಬೈಸಿಕೊಂಡಂತೆ. ಅರವಿಂದ್, ಶಾಲೆಗೆ ಹೋಗಾಬೇಕಾದರೆ ಮೇಷ್ಟ್ರು ಏನಾದರೂ ಕಾರ್ಯಕ್ರಮ ನೀಡಲು ಹೇಳಿದ್ದಾರೆ, ಆದರೆ ಅರವಿಂದ್, 'ನನಗೇನು ಗೊತ್ತಿಲ್ಲ ಸರ್' ಎಂದಿದ್ದಾರೆ, ಇದನ್ನು ಕೇಳಿದ ಮೇಷ್ಟ್ರು 'ಹುಚ್ಚ' ಎಂದು ಬೈದರಂತೆ.

ಮೇಷ್ಟ್ರು ಬೈದಿದ್ದನ್ನು ಗಂಭೀರವಾಗಿ ಪರಿಗಣಿಸಿ ಅವರು ಹೇಳಿದ ಹಾಗೆಯೇ ಅಂದು ಹುಚ್ಚನ ಪಾತ್ರದಲ್ಲಿ ನಾಟಕ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿಕೊಂಡರಂತೆ. ಅಂದು ಮೇಷ್ಟ್ರ ಮಾತಿಗೆ ನೊಂದು ಸುಮ್ಮನೆ ಕುಳಿತಿದ್ದರೇ ಇಂದು ಕಂಡಿತವಾಗಿಯೂ ಏನು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬುವುದು ಅರವಿಂದ್ ಬೋಳಾರ್ ಮಾತು.

ಅರವಿಂದ್ ರಂಗ ಭೂಮಿಯ ಒಡನಾಟ ಹೇಗಿತ್ತು ಗೊತ್ತಾ?

ಅರವಿಂದ್ ರಂಗ ಭೂಮಿಯ ಒಡನಾಟ ಹೇಗಿತ್ತು ಗೊತ್ತಾ?

ಬಾಲನಟನಾಗಿ ಅರವಿಂದ್ ಬೋಳಾರ್ ತುಳು ರಂಗಭೂಮಿ ಪ್ರವೇಶಿಸಿದರು. ಆ ಬಳಿಕ ನಾಟಕ ರಂಗದಲ್ಲಿ ಎಲ್ಲರ ಪರಿಚಯವಾಗಲೂ ಶುರುವಾಯಿತು. ಬಳಿಕ ವಿದ್ಯಾಭ್ಯಾಸದತ್ತ ಅರವಿಂದ್ ಚಿತ್ತ ಹರಿಸಿದರು. ಬಳಿಕ ಯಕ್ಷಗಾನದ ತಾಲಮದ್ದಳೆ ಕೇಳುವ ಹವ್ಯಾಸವನ್ನು ಬೆಳೆಸಿಕೊಂಡರು. ಕಮಲಾಕ್ಷ ಎಂಬವರ ಸಾರಥ್ಯದಲ್ಲಿ 'ಮಣ್ಣ್‌ದ ಮಡಿಕೆ' ಎಂಬ ನಾಟಕದ ಮೂಲಕ ಪುನಃ ನಾಟಕ ರಂಗಕ್ಕೆ ಎಂಟ್ರಿ ನೀಡಿದರು. ಬಳಿಕ ಪೌರಾಣಿಕ ನಾಟಕಗಳನ್ನು, ಜಾನಪದ ನಾಟಕದಲ್ಲಿ ಅಭಿನಯಿಸುತ್ತಿದ್ದರು. ದೇವಸ್ಥಾನಗಳಲ್ಲಿ ನಾಟಕದ ಪ್ರದರ್ಶನ ನೀಡುತ್ತಿದ್ದರು. ಹೀಗೆ ನಟನಾಗಿ ಮಾಗಿದರು.

'ಏರ್‌ ತೂಯಿನಿ' ನಾಟಕದಲ್ಲಿ ಅಭಿನಯ

'ಏರ್‌ ತೂಯಿನಿ' ನಾಟಕದಲ್ಲಿ ಅಭಿನಯ

ಜಗನ್‌ರವರ ತಂಡದಲ್ಲಿ ಏರ್‌ತೂಯಿನಿ ನಾಟಕದಲ್ಲಿ ಅಭಿನಯ ಮಾಡುತ್ತಿದ್ದರು. ಅರವಿಂದ್ ಬೋಳಾರ್‌ವರವರು ಸಣ್ಣ ವಯಸ್ಸಿನಲ್ಲಿ ತಂದೆಯ ಪ್ರೀತಿಯಿಂದ ವಂಚಿತರಾಗಿದ್ದರು. ಸಣ್ಣ ವಯಸ್ಸಿನಲ್ಲಿ ಅವರು ತಾಯಿಯನ್ನು ಬಿಟ್ಟು ದೂರ ಹೋಗುತ್ತಾರೆ. ಬಳಿಕ ಅರವಿಂದ್ ತಾಯಿ ಬಹಳ ಕಷ್ಟದಿಂದ ಮಕ್ಕಳನ್ನು ಸಾಕಿ ಶಿಕ್ಷಣವನ್ನು ನೀಡಲು ಶಾಲೆಗೆ ಕಳುಹಿಸುತ್ತಾರೆ. ಆದರೆ ಅರವಿಂದ್ ಅವರಿಗೆ ವಿದ್ಯೆ ಅಷ್ಟಾಗಿ ತಲೆಗೆ ಹತ್ತಲಿಲ್ಲ. ಅರವಿಂದ್ ಬೋಳಾರ್ ತಾಯಿಗೆ 11 ಮಕ್ಕಳು. ಆದರೆ ಉಳಿದಿದ್ದು ಮಾತ್ರ ನಾಲ್ಕು ಮಕ್ಕಳು. ಬೇರೆಯವರ ಮನೆ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದರು ಅರವಿಂದ್ ತಾಯಿ.

ರಾತ್ರಿ ನಾಟಕಗಳ ಪ್ರದರ್ಶನ ನೀಡುತ್ತಿದ್ದ ಅರವಿಂದ್

ರಾತ್ರಿ ನಾಟಕಗಳ ಪ್ರದರ್ಶನ ನೀಡುತ್ತಿದ್ದ ಅರವಿಂದ್

6ನೇ ತರಗತಿಗೆ ವಿಧ್ಯಾಭ್ಯಾಸ ಮೊಟಕುಗೊಳಿಸಿದ ಅರವಿಂದ್ ಬಳಿಕ ರಾತ್ರಿ ನಾಟಕಗಳ ಪ್ರದರ್ಶನ ನೀಡುತ್ತಿದ್ದರು, ಬೆಳಗ್ಗೆ ಕೆಲಸ ಮಾಡುತ್ತಿದ್ದರು. ವಿವಿಧ ಕೂಲಿ ಕೆಲಸಗಳನ್ನು ಮಾಡುತ್ತಾ ಬೆಳೆದವರು ಅರವಿಂದ್ ಬೋಳಾರ್. ದೇವದಾಸ್ ಕಾಪಿಕಾಡ್ ನಾಟಕ ತಂಡದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದರು ಅರವಿಂದ್. ದೇವದಾಸ್ ಕಾಪಿಕಾಡ್ ನೇತೃತ್ವದಲ್ಲಿ ಹಲವು ನಾಟಕಗಳಲ್ಲಿ ಅರವಿಂದ್ ಬೋಳಾರ್ ಅಭಿನಯ ಮಾಡಿದ್ದಾರೆ. ಮೊದ ಮೊದಲು ನಾಟಕ ಪ್ರದರ್ಶನ ಮಾಡಿರುವುದಕ್ಕೆ ಸಂಭಾವನೆಯೇ ಸಿಗುತ್ತಿರಲಿಲ್ಲವಂತೆ. ಒಂದು ಥಾಂಕ್ಸ್ ಶಹಭಾಷ್‌ಗಿರಿ ಸಿಕ್ಕರೆ ಅದುವೇ ಪೇಮೆಂಟ್.

ಅರವಿಂದ್ ಬೋಳಾರ್ ಕನ್ನಡ ಸಿನಿಮಾ ರಂಗಕ್ಕೂ ಎಂಟ್ರಿ

ಅರವಿಂದ್ ಬೋಳಾರ್ ಕನ್ನಡ ಸಿನಿಮಾ ರಂಗಕ್ಕೂ ಎಂಟ್ರಿ

13 ವರ್ಷದ ಹಿಂದೆ ನಾಟಕ ಮಾಡಿದರೆ 100ರೂ ಹೀಗೆ ಸಂಭಾವನೆ ದೊರೆಯುತ್ತಾ ಹೋಯಿತು. ಬಳಿಕ ಕೋಸ್ಟಲ್ ವುಡ್‌ಗೆ ಎಂಟ್ರಿ ನೀಡುತ್ತಾರೆ 'ಚಾಲಿಪೋಲಿಲು', 'ಏಸಾ', 'ದಬಕ ದಬ ಐಸಾ' ಹೀಗೆ ಅನೇಕ ಸಿನಿಮಾದಲ್ಲಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರವಾಗುತ್ತಾರೆ. ಅರವಿಂದ್ ಬೋಳಾರ್ ಎಂದರೆ ಒಂದು ದೊಡ್ಡ ಅಭಿಮಾನಿ ಬಳಗ ಕರಾವಳಿಯಲ್ಲಿ ಇದೆ. ಇದೀಗ ಅರವಿಂದ್ ಬೋಳಾರ್ ಕನ್ನಡ ಸಿನಿಮಾ ರಂಗಕ್ಕೂ ಇವರು ಎಂಟ್ರಿ ನೀಡಿದ್ದಾರೆ.

More from Filmibeat

English summary
Tulu Movie Artist Aravind Bolar. He acted in many Tulu dramas also. Here is the life journey of Arvind Bolar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X