ಡಿಸೆಂಬರ್ 15 ಕ್ಕೆ 'ಜೈ ಮಾರುತಿ ಯುವಕ ಮಂಡಲ (ರಿ)' ತುಳು ಸಿನಿಮಾ ಮುಹೂರ್ತ

By Harshitha

ಮಂಗಳೂರು : ರೀವನ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ತಯಾರಾಗುತ್ತಿರುವ ಚೊಚ್ಚಲ ತುಳು ಚಿತ್ರ 'ಜೈ ಮಾರುತಿ ಯುವಕ ಮಂಡಲ (ರಿ)' ಮುಹೂರ್ತ ಸಮಾರಂಭ ಡಿಸೆಂಬರ್ 15, 2017ನೇ ಶುಕ್ರವಾರ ಬೆಳಗ್ಗೆ 9ಕ್ಕೆ ಹಳೆಕೋಟೆ ಶ್ರೀ ಮುಖ್ಯಪ್ರಾಣ ದೇವಸ್ಥಾನ, ಬೋಳಾರ, ಮಂಗಳೂರಿನಲ್ಲಿ ನಡೆಯಲಿದೆ.

'ಜೈ ಮಾರುತಿ ಯುವಕ ಮಂಡಲ (ರಿ)' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಪ್ರಜ್ವಲ್ ಕುಮಾರ್ ಅತ್ತಾವರ. ಇವರು ಈ ಹಿಂದೆ 'ತೊಟ್ಟಿಲ್' ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದರು. 'ಕೋಳಿ ಕಳ್ರು' ಎಂಬ ಚಿತ್ರಕ್ಕೆ ನಿರ್ಮಾಪಕರಾಗಿದ್ದ ರಿಚರ್ಡ್ ಕಾರ್ಕಳ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಸಸಿಹಿತ್ಲು ಬಳಿ 25 ದಿನಗಳಲ್ಲಿ ಒಂದೇ ಹಂತದಲ್ಲಿ ನಡೆಯಲಿದ್ಯಂತೆ.

Tulu Movie Jai Maruthi Yuvaka Mandala Muhoortha on December 15th

ಯುವಕ ಮಂಡಲವೊಂದರಲ್ಲಿ ನಡೆಯುವ ಸನ್ನಿವೇಶಗಳೇ ಈ ಚಿತ್ರದ ಹೂರಣ. ಉತ್ತಮ ಸಂದೇಶದೊಂದಿಗೆ ಈ ಚಿತ್ರ ಪ್ರೇಕ್ಷಕರಿಗೆ ಹಾಸ್ಯದ ಕಚಗುಳಿ ನೀಡಲಿದೆ ಎನ್ನುತ್ತಾರೆ ನಟ ಅರವಿಂದ್ ಬೋಳಾರ್.

ಚಿತ್ರದಲ್ಲಿ ನಾಯಕ ನಟನಾಗಿ ಸ್ವರಾಜ್ ಶೆಟ್ಟಿ, ನಾಯಕಿಯಾಗಿ ಶಿಲ್ಪಾ ಶೆಟ್ಟಿ ಹಾಗೂ ಪ್ರಮುಖ ಹಾಸ್ಯ ಪಾತ್ರಗಳಲ್ಲಿ ಅರವಿಂದ ಬೋಳಾರ್, ದೀಪಕ್ ರೈ, ಉಮೇಶ್ ಮಿಜಾರ್, ಸುನಿಲ್ ನೆಲ್ಲಿಗುಡ್ಡೆ, ಜೆ.ಪಿ ತೂಮಿನಾಡ್, ಮನೋಜ್ ಕಾರ್ಕಳ, ಪ್ರಕಾಶ್ ತೂಮಿನಾಡ್ ಸೇರಿದಂತೆ ಹಲವರು ಅಭಿನಯಿಸಲಿದ್ದಾರೆ.

More from Filmibeat

English summary
Tulu Movie 'Jai Maruthi Yuvaka Mandala' to go on floors from December 15th. Muhoortha will be held at Halekote Sri Mukhyaprana Temple, Bolar, Mangalore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X