'ಗಣೇಶ ಚತುರ್ಥಿ' ವಿಶೇಷವಾಗಿ ಹೊಸ ತಿರುವು ಪಡೆದುಕೊಂಡ ಧಾರಾವಾಹಿಗಳು

ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಿ ಜನರಿಗೆ ತೋರಿಸುವುದು ಸರ್ವೇಸಾಮಾನ್ಯ. ಆದರೆ ಉದಯ ಟಿವಿಯಲ್ಲಿ ಈ ಸಲದ ಗಣೇಶ ಹಬ್ಬ ಬಹಳ ವಿಶೇಷವಾಗಿದೆ. ಅಂದರೆ ಗಣೇಶ ಚತುರ್ಥಿ ಧಾರಾವಾಹಿಗಳ ಕಥೆಯ ತಿರುವಿಗೆ ಕಾರಣವಾಗಿದೆ. ವಿನಾಯಕ, ಮುಂಬರುವ ಕಥೆಗಳ ತಿರುವಿಗೆ ಕಾರಣಿಕರ್ತನಾಗಿದ್ದಾನೆ. ಅವರಿಗಳಿಗಿರುವ ಸಂಕಷ್ಟಗಳಿಗೆ ವಿಘ್ನರಾಜ ಸಂಕಷ್ಟಹರನಾಗಿದ್ದಾನೆ. ಇದೇ ಸೊಮವಾರದಿಂದ ವಕ್ರತುಂಡನ ವಿಶೇಷ ಸಂಚಿಕೆಗಳು ಉದಯ ಟಿವಿಯಲ್ಲಿ ಪ್ರಸಾರವಾಗುತ್ತವೆ.

ದೇವಯಾನಿ ಧಾರಾವಾಹಿಯಲ್ಲಿ ಗಣೇಶ ಹಬ್ಬದ ವಿಶೇಷ ಸಂಚಿಕೆಗಳು ಪ್ರಸಾರವಾಗುತ್ತಿದೆ. ಕಥಾನಾಯಕ ಶ್ರೀಗೆ ಕೆಲವು ದಿನಗಳ ಹಿಂದೆ ಅಪಘಾತವಾಗಿ ಅವನನ್ನು ಕಾಡು ಜನಗಳು ಕಾಪಾಡಿರುತ್ತಾರೆ. ಅದರಲ್ಲಿ ಚೆಲ್ವಿ ಎನ್ನುವವಳು ಶ್ರೀನನ್ನು ಅತ್ಯಂತ ಕಾಳಜಿಯಿಂದ ನೋಡಿಕೊಂಡು ಅವನು ಬೇಗ ಗುಣಮುಖನಾಗಲು ಕಾರಣವಾಗಿರುತ್ತಾಳೆ. ಒಂದರ್ಥದಲ್ಲಿ ಶ್ರೀ ಇಂದು ಬದುಕಿರುವುದೇ ಚೆಲ್ವಿಯಿಂದ ಎಂಬಂತಾಗಿರುತ್ತದೆ.

Turns and Twist In Udaya Tv Serials For Ganesh Chaturthi Special

ಶ್ರೀ ಕೂಡ ಅವಳನ್ನು ಅತ್ಯಂತ ಗೌರವದಿಂದ ಕಾಣುತ್ತಿರುತ್ತಾನೆ. ಆದರೆ ಚೆಲ್ವಿಗೆ ಶ್ರೀ ಮೇಲೆ ಮನಸಾಗಿರುತ್ತದೆ ಆದರೆ ಶ್ರೀಯಲ್ಲಿ ಹೇಳಿಕೊಂಡಿರುವುದಿಲ್ಲ. ಗಣೇಶ ಹಬ್ಬದ ಸಂದರ್ಭದಲ್ಲಿ ಒಂದೆಡೆ ದೇವಯಾನಿ ಶ್ರೀ ಬದುಕಿದ್ದಾನೆಂದು, ಗಣೇಶ ಹಬ್ಬವನ್ನು ಆಚರಿಸಲೇಬೇಕೆಂದು ಪಟ್ಟು ಹಿಡಿದು ಗಣೇಶನ ಪೂಜೆಯನ್ನು ಮನೆಯಲ್ಲಿ ಏರ್ಪಾಡು ಮಾಡಿಕೊಂಡಿರುತ್ತಾಳೆ.

ಇನ್ನೊಂದೆಡೆ ಕಾಡಿನಲ್ಲಿ ದೇವರ ಮುಂದೆ ಒಂದು ವಿಶೇಷ ಆಚರಣೆ ಮಾಡುವುದಿರುತ್ತದೆ. ಗಂಡ ಹೆಂಡತಿಗೆ ಅಥವಾ ಗಂಡು ಸ್ನೇಹಿತೆಯಂತಿರುವ ತನ್ನ ಗೆಳತಿಗೆ ಕಂಕಣ ಕಟ್ಟುವ ಶಾಸ್ತ್ರವಿರುತ್ತದೆ. ಅಲ್ಲಿ ಹತ್ತಾರು ಜನರ ಮುಂದೆ, ಶ್ರೀ ಚೆಲ್ವಿಗೆ ಕಂಕಣ ಕಟ್ಟಿಬಿಡುತ್ತಾನೆ. ಇದನ್ನು ಕಂಡ ಚೆಲ್ವಿಗೆ ಶ್ರೀ ತನ್ನ ಜೊತೆಗಾರನಾಗಿಬಿಡುತ್ತಾನೆಂಬ ಆಸೆ ಚಿಗುರುತ್ತದೆ. ಗಂಡನನ್ನು ಉಳಿಸಿಕೊಳ್ಳಲು ಗಣೇಶನ ಮೊರೆ ಹೋಗಿರುವ ದೇವಯಾನಿ ಒಂದೆಡೆಯಾದರೆ, ಕಾಡು ಗಣೇಶನ ಸನ್ನಿಧಿಯಲ್ಲಿ ಹೆಂಡತಿಯ ನೆನಪೇ ಇಲ್ಲದೆ, ಶ್ರೀ ಇನ್ನೊಬ್ಬಳ ಬದುಕಿಗೆ ಪ್ರವೇಶಿಸಿಬಿಡುತ್ತಾನಾ ಎಂಬುದೇ ಕುತೂಹಲ.

Turns and Twist In Udaya Tv Serials For Ganesh Chaturthi Special

ವಿಶೇಷ ದಿನಗಳಲ್ಲಿ ಸದಾ ಹೊಸತನದೊಂದಿಗೆ ಬರುವ ಸೇವಂತಿ ಧಾರಾವಾಹಿ, ಇದೀಗ ಗಣೇಶ ಹಬ್ಬದ ಪ್ರಯುಕ್ತ ವಿಶೇಷ ಸಂಚಿಕೆಯನ್ನ ಹೊತ್ತು ತಂದಿದೆ. ತನ್ನ ಸಾಕುತಂದೆಯನ್ನ ಜೈಲಿನಿಂದ ಬಿಡಿಸುವ ಸಲುವಾಗಿ ನಾಯಕಿ ಸೇವಂತಿ, ಲಾಯರ್ ಅರ್ಜುನನ ಮೊರೆ ಹೋಗುತ್ತಾಳೆ. ಇದನ್ನೇ ತನ್ನ ಸ್ವಾರ್ಥಕ್ಕಾಗಿ ಬಳಸುವ ಅರ್ಜುನ್ ಅವಳನ್ನೇ ಒಪ್ಪಂದದ ಮದ್ವೆಯಾಗಿ ಮನೆಗೆ ಕರೆದುಕೊಂಡು ಬಂದಿದ್ದಾನೆ.

ಹೀಗೆ ಸುಳ್ಳಿನ ಸುಳಿಯಲ್ಲಿ ಬಂಧಿಯಾಗಿರೋ ಈ ಜೋಡಿ ಮೇಲೆ ಮನೆಯವರ ಸಂಶಯ ಹೆಚ್ಚಾಗಿದೆ. ಹೀಗಾಗಿ ಮನೆಯವರ ವಿಶ್ವಾಸ ಗಳಿಸಲು ತಾನೇ ಸೇವಂತಿಯನ್ನ ಅನಾಥಾಶ್ರಮಕ್ಕೆ ಕರೆದುಕೊಂಡು ಬಂದು, ಅಲ್ಲೇ ಗಣಪನ ಹಬ್ಬ ಆಚರಿಸುತ್ತಾನೆ. ಆದರೆ ಇವೆಲ್ಲವನ್ನ ಸಹಿಸದ ಪ್ರಿಯಾ ಇಲ್ಲೂ ತನ್ನ ಕುತಂತ್ರ ಬುದ್ಧಿಯನ್ನ ತೋರಿಸುತ್ತಾಳೆ. ಒಂದಷ್ಟು ಡ್ಯಾನ್ಸ್, ಆಟಗಳು ಎಲ್ಲವೂ ಸೇರಿ ಇದೇ ಸೆಪ್ಟಂಬರ್ 3 ಮತ್ತು 4 ರಂದು ಫುಲ್ ಪ್ಯಾಕ್ ಎಂಟರ್‍ಟೈನ್ಮಂಟ್ ಕೊಡೋಕೆ ಸೇವಂತಿ ತಂಡ ಈಗಾಗಲೇ ಸಜ್ಜಾಗಿದೆ.

Turns and Twist In Udaya Tv Serials For Ganesh Chaturthi Special

ಕ್ಷಮಾಧಾರಾವಾಹಿಯಲ್ಲಿ, ಗಂಡ ಇಲ್ಲದಿದ್ದರೂ ಒಂಟಿಯಾಗಿ ಯಾರ ಮುಂದೆಯೂ ತಲೆ ಬಾಗದ ಕೈ ಚಾಚದ ಕ್ಷಮಾ ತನ್ನ ಸಂಸಾರವನ್ನು ಪ್ರಾಮಾಣಿಕವಾಗಿ ನಡೆಸುತ್ತಿರುವ ಹೆಣ್ಣು ಮಗಳು. ಕ್ಷಮಾ ಮಗಳಾದ ಜಾಹ್ನವಿ ತನ್ನ ತಂದೆಯನ್ನು ಹುಡುಕುವ ಭರದಲ್ಲಿ ತನ್ನ ಪ್ರಾಣಕ್ಕೆ ಕುತ್ತು ತಂದು ಕೊಟ್ಟಾಗ ಕ್ಷಮಾ ದಿಟ್ಟತನದಿಂದ ಹೋರಾಡಿ ಅವಳನ್ನು ಕಾಪಾಡುವಲ್ಲಿ ಸಫಲಳಾಗುತ್ತಾಳೆ. ಇದೇ ಕಾರಣಕ್ಕೆ ಗಣಪತಿಬಪ್ಪನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸುವ ಕ್ಷಮಾ ವಿಶೇಷವಾಗಿ ಗಣೇಶೋತ್ಸವವನ್ನು ಮಾಡುತ್ತಿದ್ದಾಳೆ. ಹಬ್ಬಕ್ಕೆ ತನ್ನ ಹಿತೈಷಿಗಳಾದ ರವಿಕಾಂತ್ ನನ್ನೂ ಕರೆಯುತ್ತಾಳೆ.

Turns and Twist In Udaya Tv Serials For Ganesh Chaturthi Special

ಆದರೆ ರವಿಕಾಂತ್ ಹೇಗಾದರೂ ಈಕೆಯನ್ನು ವಶ ಮಾಡಿಕೊಳ್ಳಬೇಕೆಂದಿರುವ ದುಷ್ಟ. ಇಂತಹವರಿಂದ ಕ್ಷಮಾ ತನ್ನನ್ನು ಹೇಗೆ ರಕ್ಷಿಸಿಕೊಳ್ಳುತ್ತಾಳೆ? ಎಂಬುದೇ ಮುಂದಿನ ಕಥಾಹಂದರ. ಗಣಪತಿ ಅರ್ಚನೆಯಿಂದ ಕ್ಷಮಾಳ ಬದುಕಲ್ಲಿರುವ ವಿಘ್ನಗಳೆಲ್ಲ ಪರಿಹಾರವಾಗಿ ಅವಳ ಜೀವನ ಸುಖಮಯವಾಗುತ್ತಾ? ಅವಳ ಹೋರಾಟದ ಬದುಕಿಗೆ ನ್ಯಾಯ ಸಿಗತ್ತಾ? ಕ್ಷಮಾದಲ್ಲಿ ಗಣೇಶೋತ್ಸವ ಸೋಮವಾರದಿಂದ ಶನಿವಾರ ರಾತ್ರಿ 9.30 ಕ್ಕೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

More from Filmibeat

English summary
Udaya tv Presenting some special episode of famous serials in the occasion of ganesh chaturthi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X