For Quick Alerts
  ALLOW NOTIFICATIONS  
  For Daily Alerts

  36 ದಿನಗಳಿಂದ ಕೋವಿಡ್‌ ಜೊತೆ ಹೋರಾಡುತ್ತಿರುವ ನಟ

  |

  ಕೋವಿಡ್ ಒಬ್ಬೊಬ್ಬರನ್ನು ಒಂದೊಂದು ರೀತಿ ಕಾಡಿಸುತ್ತದೆ. ಕೆಲವರಿಗೆ ಏನೂ ಹಾನಿ ಮಾಡದೆ ಹೊರಟು ಹೋದರೆ, ಕೆಲವರಿಗೆ ಜ್ವರ, ನೆಗಡಿಗೆ ಸೀಮಿತ. ಇನ್ನು ಕೆಲವರಿಗೆ ಉಸಿರಾಟಕ್ಕೆ ಸಮಸ್ಯೆ ನೀಡಿ ವಿಪರೀತ ಕಾಡಿಸಿ ಜೀವವೂ ತೆಗೆಯುತ್ತದೆ.

  ಹಿಂದಿ ಧಾರಾವಾಹಿಗಳಲ್ಲಿ ನಟಿಸುತ್ತಿರುವ ಜನಪ್ರಿಯ ನಟ ಅನಿರುದ್ಧ ದವೆ ಕಳೆದ 36 ದಿನಗಳಿಂದ ಸತತವಾಗಿ ಕೋವಿಡ್‌ ನೊಂದಿಗೆ ಹೋರಾಡುತ್ತಲೇ ಇದ್ದಾರೆ. ಜೀವವೇ ಹೋಯ್ತು ಒಂದುಕೊಳ್ಳುವ ಸ್ಥಿತಿಯನ್ನು ತಲುಪಿ ಅದರಿಂದ ದಾಟಿ ಬಂದಿದ್ದಾರೆ ಆದರೆ ಈಗಲೂ ಹೋರಾಟ ಜಾರಿಯಲ್ಲಿದೆ.

  ಈಗಲೂ ಆಮ್ಲಜನಕದ ಬೆಂಬಲದಲ್ಲಿಯೇ ಇರುವ ಅನಿರುದ್ಧ ಆಸ್ತತ್ರೆಯಲ್ಲಿಯೇ ಇದ್ದಾರೆ. ಅಲ್ಲಿಂದಲೇ ತಮ್ಮ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟ 36 ದಿನಗಳಿಂದ ಕೋವಿಡ್‌ನೊಂದಿಗೆ ಹೋರಾಡುತ್ತಿದ್ದೇನೆ ಎಂದಿದ್ದಾರೆ.

  ಸತತ 22 ದಿನಗಳು ಐಸಿಯುನಲ್ಲಿದ್ದ ಅನಿರುದ್ಧಗೆ ಆಮ್ಲಜನಕ ಪ್ರಮಾಣ ತೀವ್ರವಾಗಿ ಕುಸಿದಿತ್ತು. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆದುಕೊಂಡ ಅವರಿಗೆ ಶ್ವಾಸಕೋಶಗಳಿಗೆ ತೀವ್ರ ಹಾನಿಯನ್ನು ಕೋವಿಡ್ ಮಾಡಿತ್ತು. ಈಗಲೂ ಆಮ್ಲಜನಕ ನಳಿಕೆಯನ್ನು ತೆಗೆಯುವ ಸ್ಥಿತಿಯಲ್ಲಿಲ್ಲ ಆದರೆ ತಮ್ಮ ಆರೋಗ್ಯ ತುಸು ಸುಧಾರಿಸಿದೆ ಎಂದಿದ್ದಾರೆ.

  ಏಪ್ರಿಲ್ 23ರಂದು ಅನಿರುದ್ಧಗೆ ಪಾಸಿಟಿವ್ ಆಗಿತ್ತು ಕೆಲವು ದಿನ ಮನೆಯಲ್ಲಿಯೇ ಐಸೋಲೇಷಜನ್‌ಗೆ ಒಳಪಟ್ಟಿದ್ದ ಅವರು ನಂತರ ಆಸ್ಪತ್ರೆಗೆ ದಾಖಲಾದರು. ನಂತರ ಕೂಡಲೇ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಅನಿರುದ್ಧ ಅವರೇ ಹೇಳಿಕೊಂಡಿರುವಂತೆ ಅವರ ಶ್ವಾಸಕೋಶಗಳಿಗೆ 85% ಹಾನಿಯಾಗಿತ್ತು. ಅವರಿಗೆ ಈಗಲೂ ಸ್ವಪ್ರಯತ್ನದಿಂದ ಉಸಿರು ಎಳೆದುಕೊಳ್ಳಲು ಆಗುತ್ತಿಲ್ಲವಾದ್ದರಿಂದ ನಳಿಕೆ ಮೂಲಕ ಆಮ್ಲಜನಕ ನೀಡಲಾಗುತ್ತಿದೆ.

  2008ರಿಂದಲೂ ಹಿಂದಿ ಧಾರಾವಾಹಿಗಳಲ್ಲಿ ನಟಿಸುತ್ತಿರುವ ಅನಿರುದ್ಧ ದೇವ್ ನಾಲ್ಕು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಹಿಂದಿ ಧಾರಾವಾಹಿ ರಂಗದಲ್ಲಿ ಅನಿರುದ್ಧ ದವೆ ಜನಪ್ರಿಯ ನಟ.

  English summary
  Hindi serial famous actor Anirudh Dave battling COVID 19 from last 36 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X