For Quick Alerts
  ALLOW NOTIFICATIONS  
  For Daily Alerts

  ಕಿರುತೆರೆ ನಟ ಅನಿರುದ್ಧ್ ಆರೋಗ್ಯ ಸ್ಥಿತಿ ಗಂಭೀರ: ಶೀಘ್ರ ಚೇತರಿಕೆಗೆ ಹಾರೈಸಿ ಎಂದ ಪತ್ನಿ

  |

  ಹಿಂದಿ ಕಿರುತೆರೆಯ ಖ್ಯಾತ ನಟ ಅನಿರುದ್ಧ್ ದೇವ್ ಗೆ ಕೊರೊನಾ ಪಾಸಿಟಿವ್ ಬಂದ ಬೆನ್ನಲ್ಲೇ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಪತಿ ಶೀಘ್ರ ಚೇತರಿಕೆ ಹಾರೈಸಿ ಎಂದು ಪತ್ನಿ ಶುಭಿ ಅಹುಜಾ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದಾರೆ.

  ಪತಿ ಅನುರುದ್ಧ್ ಭೋಪಾಲ್ ಆಸ್ಪತ್ರೆಗೆ ಅನಿರುದ್ಧ ದಾಖಲಾಗಿದ್ದು, ತುಂಬಾ ಗಂಭೀರ ಸ್ಥಿತಿಯಲ್ಲಿದ್ದಾರೆಂದು ಅಹುಜಾ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ನಾನು ನನ್ನ 2 ತಿಂಗಳ ಮಗುವನ್ನು ಮನೆಯಲ್ಲೇ ಬಿಟ್ಟು ನಾನು ನನ್ನ ಗಂಡನನ್ನು ನೋಡಲು ಹೋಗುತ್ತಿದ್ದೀನಿ. ಇದು ನನ್ನ ದೊಡ್ಡ ಸವಾಲು ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

  ಕೊರೊನಾ ಲಸಿಕೆ ಬಗ್ಗೆ ತಪ್ಪು ಮಾಹಿತಿ ಹಬ್ಬಿಸಿದ ನಟನಿಗೆ 2 ಲಕ್ಷ ರೂ.ದಂಡ

  ಒಂದು ಕಡೆ ಆಸ್ಪತ್ರೆಯಲ್ಲಿ ಕೊರೊನಾದಿಂದ ಬಳಲುತ್ತಿರುವ ನನ್ನ ಪತ್ನಿಯ ಪಾಲಿನೆ ಮುಖ್ಯವಾದರೆ, ಇನ್ನೊಂದೆಡೆ 2 ತಿಂಗಳ ಮಗುವಿನ ಪೋಷಣೆಯನ್ನು ಮಾಡಬೇಕಿದೆ. ಇದು ನನ್ನ ಜೀವನದ ಅತಿ ದೊಡ್ಡ ಸವಾಲಿನ ಕೆಲಸವಾಗಿದೆ. ದಯವಿಟ್ಟು ನನ್ನ ಪತಿಯ ಆರೋಗ್ಯಕ್ಕಾಗಿ ಎಲ್ಲರೂ ಪ್ರಾರ್ಥಿಸಿ. ಈ ಸಮಯದಲ್ಲಿ ನನ್ನ ಪತಿಗೆ ಇದು ಮುಖ್ಯವಾಗಿದೆ.

  'ಅನಿರುದ್ಧ ಅವರನ್ನು ಇನ್ನು ಎರಡು ದಿನಗಳು ವೀಕ್ಷಣೆಯಲ್ಲಿಟ್ಟಿದ್ದಾರೆ. ದಯವಿಟ್ಟು ಎಲ್ಲರೂ ಪ್ರಾರ್ಥಿಸುತ್ತೀರಿ' ಎಂದು ಹೇಳಿದ್ದಾರೆ. ಅನಿರುದ್ಧ್ ಬೇಗ ಗುಣಮುಖರಾಗಲಿ ಎಂದು ಕಿರುತೆರೆ ಕಲಾವಿದರು ಮತ್ತು ಅಭಿಮಾನಿಗಳು ಹಾರೈಸುತ್ತಿದ್ದಾರೆ.

  English summary
  TV Actor Anirudh Dave tests positive for corona. His wife Shubhi Ahuja pen emotional letter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X