For Quick Alerts
  ALLOW NOTIFICATIONS  
  For Daily Alerts

  ಹೆಣ್ಣು ಮಗುವಿನ ಪೋಷಕರಾದ ಚಂದು-ಶಾಲಿನಿ!

  |

  ನಟನೆ ಬಗ್ಗೆ ಆಸಕ್ತಿ ಹೊಂದಿದ್ದ ಚಂದು ಗೌಡ, ಗೃಹಲಕ್ಷ್ಮೀ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಗೃಹಲಕ್ಷ್ಮೀ ಧಾರಾವಾಹಿಯಲ್ಲಿ ಮನೆಯ ಯಜಮಾನನಾಗಿ, ಮಡದಿಯ ಮುದ್ದಿನ ಪತಿಯಾಗಿ ಎಲ್ಲರ ಗಮನ ಸೆಳೆದಿದ್ದರು. ಅದಾದ ಮೇಲೆ ಲಕ್ಷ್ಮೀ ಬಾರಮ್ಮ ಧಾರಾವಾಹಿ ಕೂಡ ಅಷ್ಟೇ ಖ್ಯಾತಿಯನ್ನು ತಂದುಕೊಟ್ಟಿತ್ತು.

  ಇದೀಗ ಧಾರಾವಾಹಿ ಮತ್ತು ಸಿನಿಮಾ ಎರಡನ್ನು ಬ್ಯಾಲೆನ್ಸ್ ಮಾಡುತ್ತಿದ್ದಾರೆ. ತೆಲುಗು ಧಾರಾವಾಹಿ ತ್ರಿನಯನಿಯಲ್ಲಿ ಚಂದು ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಆ ಧಾರಾವಾಹಿ ಈಗ ಕನ್ನಡದಲ್ಲೂ ಎಲ್ಲರ ಇಷ್ಟದ ಲೀಸ್ಟ್ ಗೆ ಸೇರಿಕೊಂಡಿದೆ. ನಯನಿ ಮತ್ತು ಚಂದು ಆಗಾಗ ಮಾಡುವ ರೋಮ್ಯಾನ್ಸ್, ತುಂಟಾಟ ನೋಡುಗರಿಗೆ ಖುಷಿ ನೀಡುತ್ತಿದೆ.

  ಶೋನಲ್ಲಿ ಬಾಡಿ ಶೇಮಿಂಗ್, ಮಂಗಾಟ ನನಗೆ ಇಷ್ಟವಾಗಲಿಲ್ಲ: ಅನಸೂಯಾಶೋನಲ್ಲಿ ಬಾಡಿ ಶೇಮಿಂಗ್, ಮಂಗಾಟ ನನಗೆ ಇಷ್ಟವಾಗಲಿಲ್ಲ: ಅನಸೂಯಾ

  ತೆರೆಯ ಮೇಲೆ ಮಿಂಚುವ ಈ ಚಂದು ಅವ್ರ ವೈಯಕ್ತಿಕ ಜೀವನದ ಬಗ್ಗೆ ನಿಮಗೆಷ್ಟು ಗೊತ್ತು? ಚಂದು ಅವರ ಮದುವೆಯ ಜೀವನ ಹಾಗು ಕಿರುತೆರೆ ಪಯಣ ಮತ್ತು ಅವರ ಬದುಕಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದೆ ಓದಿ...

  ಸೀರಿಯಲ್‌ನಲ್ಲಿ ನಟಿರೋದು ಇಷ್ಟ!

  ಸೀರಿಯಲ್‌ನಲ್ಲಿ ನಟಿರೋದು ಇಷ್ಟ!

  ನಟ ಚಂದು ಅವರಿಗೆ ನಟನೆ ಎಂದರೆ ತುಂಬಾ ಇಷ್ಟ ಹಾಗಾಗಿ ಗೃಹಲಕ್ಷ್ಮೀ, ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಅಲ್ಲಿಂದ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಚಂದು ಪಾತ್ರದಲ್ಲಿ ಮಿಂಚಿದರು. ಇದಾದ ಬಳಿಕ ಒಂದೊಂದೇ ಸೀರಿಯಲ್‌ಗಳಲ್ಲಿ ಕಾಣಿಸಿಕೊಂಡ ಚಂದು ಅವರು, ಸದ್ಯ ತ್ರಿನಯನಿ ಧಾರಾವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆ ಜೊತೆಗೆ ಸಿನಿಮಾಗಳಲ್ಲೂ ಚಂದು ಮಿಂಚಿದ್ದಾರೆ. ಬೇರೆ ಭಾಷೆಯಲ್ಲೂ ಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಚಾಟ್ ಕಾರ್ನರ್ ಎಂಬ ಟಾಕಿಂಗ್ ಶೋ ಮೂಲಕ ನಿರೂಪಕರಾಗಿ ಕಾಣಿಸಿಕೊಂಡಿದ್ದರು.

  ಸಿನಿಮಾಗಳಲ್ಲಿ ಚಂದು ನಟನೆ!

  ಸಿನಿಮಾಗಳಲ್ಲಿ ಚಂದು ನಟನೆ!

  ಧಾರಾವಾಹಿ ಮಾತ್ರವಲ್ಲದೆ ಬೆಳ್ಳಿ ಪರದೆಮೇಲೂ ಮಿಂಚಿದ್ದಾರೆ. ಅಲ್ಲದೇ, ದರ್ಶನ್ ನಟನೆಯ ರಾಬರ್ಟ್ ಸಿನಿಮಾದಲ್ಲಿ ಚಂದು ಅಭಿನಯಿಸಿದ್ದರು. ಮೊದಲ ಬಾರಿಗೆ ಚಂದು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಚಂದು, ಕುಷ್ಕ, ಜಾಕ್ ಪಾಟ್, ಕಮರೊಟ್ಟು ಚಕ್ ಪೋಸ್ಟ್, ಶ್ರೀ, ದ್ವಿಪಾತ್ರ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಲ್ಲಿ ನಟಿಸುವ ಆಫರ್‌ಗಳು ಬರುತ್ತಿವೆ. ಆದರೆ ಚಂದುಗೆ ಸಿನಿಮಾಗಿಂತಲೂ ಕಿರುತೆರೆಯಲ್ಲಿರುವುದೇ ಇಷ್ಟವಂತೆ. ಇನ್ನು ಚಂದುಗೆ ನಟನೆಗೆ ಬರುವುದಕ್ಕೂ ಮುಂಚೆಯಿಂದಲೂ ಚಂದು ಬೈಕ್ ಓಡಿಸುತ್ತಾರೆ, ರೇಸ್ ಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಹಾರ್ಡ್ ಕೋರ್ ಬೈಕ್ ರೇಸರ್ ಕೂಡ. ಆಗಾಗ ಬೈಕ್ ರೇಸ್ ಗಳಲ್ಲಿ ಭಾಗವಹಿಸುತ್ತಾರೆ. ಅವರ ಬಳಿ ಬೈಕು, ಕಾರುಗಳೇ ಹೆಚ್ಚಿವೆ.

  ಶಾಲಿನಿಯನ್ನು ಮದುವೆಯಾದ ಚಂದು!

  ಶಾಲಿನಿಯನ್ನು ಮದುವೆಯಾದ ಚಂದು!

  ಚಂದು ಗೌಡ ಬಹುಕಾಲದ ಗೆಳತಿ ಶಾಲಿನಿ ಜೊತೆಗೆ ವಿವಾಹವಾಗಿದ್ದಾರೆ. ಅಕ್ಟೋಬರ್ 29, 2020ರಲ್ಲಿ ನಟ ಚಂದು ಗೆಳತಿ ಶಾಲಿನಿ ಕೊರಳಿಗೆ ಮಾಂಗಲ್ಯಧಾರಣೆ ಮಾಡಿದ್ದರು. ಚಂದು ಮತ್ತು ಶಾಲಿನಿ ಸರಳವಾಗಿ, ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದರು. ಇಬ್ಬರ ಮದುವೆ ಸಮಾರಂಭಕ್ಕೆ ಕುಟುಂಬದವರು, ಸ್ನೇಹಿತರು ಮತ್ತು ತೀರಾ ಆಪ್ತರು ಮಾತ್ರ ಹಾಜರಾಗಿ ನವಜೋಡಿಗೆ ಶುಭಹಾರೈಸಿದ್ದರು. ಅಂದ್ಹಾಗೆ ಶಾಲಿನಿ ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇಬ್ಬರದ್ದು 4 ವರ್ಷದ ಪ್ರೀತಿ.

  ತಂದೆಯದ ಚಮದು ಗೌಡ!

  ತಂದೆಯದ ಚಮದು ಗೌಡ!

  ಇತ್ತೀಚೆಗಷ್ಟೇ ಅಂದರೆ ಜೂನ್‌ ತಿಂಗಳಲ್ಲಿ ಚಂದು ಶಾಲಿನಿ ಸೀಮಂತವನ್ನು ಅದ್ಧೂರಿಯಾಗಿ ಆಚರಿಸಿದ್ದರು. ಇದರ ಫೋಟೋಗಳು ವೈರಲ್ ಆಗಿದ್ದವು. ಇದೀಗ ಈ ಜೋಡಿ ತಂದೆ, ತಾಯೊಯಾಗಿ ಬಡ್ತಿ ಹೊಂದಿದ್ದಾರೆ. ಶಾಲಿನಿ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪೋಷಕರಾದ ಖುಷಿಯಲ್ಲಿ ದಂಪತಿಗಳಿದ್ದಾರೆ.

  English summary
  Tv Actor Chandu Gowda and Shalini Blessed With Baby Girl,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X