For Quick Alerts
  ALLOW NOTIFICATIONS  
  For Daily Alerts

  ಪತ್ನಿ ಖಾತೆಯಿಂದ ಕೋಟಿ ರುಪಾಯಿ ಹಣ ಎಗರಿಸಿದ ಟಿವಿ ನಟ

  |

  ಟಿವಿ ಧಾರಾವಾಹಿಗಳಲ್ಲಿ ನಟಿಸುವ ನಟ ಕರಣ್ ಮೆಹ್ರಾ ತನ್ನ ಪತ್ನಿಯ ಖಾತೆಗೆ ಕನ್ನ ಹಾಕಿ ಕೋಟಿ ರುಪಾಯಿಗೂ ಹೆಚ್ಚಿನ ಹಣ ಎಗರಿಸಿದ್ದಾನೆ.

  ಕರಣ್ ಮೆಹ್ರಾ ಹಾಗೂ ನಿಶಾ ಮದುವೆಯಾಗಿ ಕೆಲ ಕಾಲವಾಗಿದೆ. ಆದರೆ ಇತ್ತೀಚೆಗೆ ಇಬ್ಬರ ನಡುವೆ ಕಲಹ ಏರ್ಪಟ್ಟಿದೆ. ಮೇ 31 ರಂದು ನಿಶಾ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಕರಣ್ ಮೆಹ್ರಾ ಅನ್ನು ಗುರುಗ್ರಾಮ ಪೊಲೀಸರು ಬಂಧಿಸಿದ್ದರು.

  ತನ್ನ ಮೇಲೆ ದೂರು ನೀಡಿ ಪೊಲೀಸರು ಬಂಧಿಸುವಂತೆ ಮಾಡಿದ ಪತ್ನಿ ನಿಶಾಗೆ ಬುದ್ಧಿ ಕಲಿಸಲೆಂದೇ ಆಕೆಯ ಖಾತೆಯಿಂದ 1 ಕೋಟಿ ರು ಹಣ ಎಗರಿಸಿದ್ದಾನೆ ಕರಣ್ ಮೆಹ್ರಾ. ಹಣ ಕಳೆದುಕೊಂಡಿರುವ ನಿಶಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಕರಣ್ ಸೇರಿದಂತೆ ಅವರ ಕುಟುಂಬದ ಇನ್ನೂ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

  ಈ ಹಿಂದೆ ಕರಣ್ ಮೇಲೆ ನಿಶಾ ದೂರು ನೀಡಿದ್ದಾಗ ಮಾಧ್ಯಮದೊಟ್ಟಿಗೆ ಮಾತನಾಡಿದ್ದ ಕರಣ್, ''ನನ್ನ ಪತ್ನಿ ನಿಶಾ ಬಹಳ ಆಕ್ರಮಣಕಾರಿ ಸ್ವಭಾವದವಳು, ವಾಚಾಳಿ, ಬೈಯುವುದು ಅವಳ ಹವ್ಯಾಸ ಜೊತೆಗೆ ದೈಹಿಕ ಹಲ್ಲೆ ಸಹ ಮಾಡುತ್ತಾಳೆ'' ಎಂದು ಕಣ್ಣೀರು ಹಾಕಿದ್ದರು.

  ''ಆಕೆಗೆ ಮಾನಸಿಕ ಸಮಸ್ಯೆ ಇದೆ. ಆಕೆಗೆ ಎರಡು ವ್ಯಕ್ತಿತ್ವಗಳಿವೆ. ಅಷ್ಟೆ ಅಲ್ಲ ಆಕೆಯ ನಡುವಳಿಕೆ ಸಹ ಸರಿಯಿಲ್ಲ. ಮಾನಸಿಕವಾಗಿ ಹಾಗೂ ದೈಹಿಕವಾಗಿ ನನಗೆ ಸಾಕಷ್ಟು ಹಿಂಸೆ ನೀಡಿದ್ದಾಳೆ ನಾನು ಆತ್ಮಹತ್ಯೆಗೆ ಸಹ ಯತ್ನಿಸಿದ್ದೆ'' ಎಂದಿದ್ದರು ಕರಣ್.

  ಕರಣ್ ಹಾಗೂ ನಿಶಾ ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದರು. ಅವರಿಗೆ ನಾಲ್ಕು ವರ್ಷದ ಮಗನಿದ್ದಾನೆ.

  English summary
  Tv Actor Karan Mehra booked for taking 1 crore rs money from his wife Nisha's account.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X