ದೈಹಿಕ ಸುಖ ನೀಡಲು ಒಪ್ಪದ ಮನೆ ಕೆಲಸದಾಕೆಯ ಕೊ*ಲೆ ಮಾಡಿದ ಕಿರುತೆರೆ ನಟ ?
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ದಿನನಿತ್ಯ ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ ಮತ್ತು ಲೈಂ*ಗಿಕ ಹಿಂಸೆ ಅನುಭವಿಸಿದ್ದಾರೆ. ಇನ್ನೂ ಅನುಭವಿಸುತ್ತಲೇ ಇದ್ದಾರೆ. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಇಲ್ಲಿಯೂ ಹೆಣ್ಣಿಗೆ ಕಿರುಕುಳ ನೀಡುವವರ ಸಂಖ್ಯೆ ಹೆಚ್ಚಿದೆ. ಇದಕ್ಕೆ ಇನ್ನೊಂದು ಉದಾಹರಣೆಯೇ ಆಶಿಶ್ ಮೆಶ್ರಮ್ ಪ್ರಕರಣ.
ಹೌದು, ಆಶಿಶ್ ಮೆಶ್ರಮ್.. ಹಿಂದಿ ಕಿರುತೆರೆಯ ಚೆಲುವ. 41 ವರ್ಷದ ಕಿರಾತಕ ವ್ಯಕ್ತಿ. ''ಕ್ರೈಂ ಪೆಟ್ರೋಲ್''.. ''ಸಾವಧಾನ್ ಇಂಡಿಯಾ''.. ಅಂತಹ ಸರಣಿಗಳಲ್ಲಿ ಪಾತ್ರಗಳನ್ನು ಮಾಡಿದ್ದ ಆಶಿಶ್ ಮೆಶ್ರಮ್, ಮುಂಬೈನ ಮೀರಾರೋಡ್‌ನಲ್ಲಿ ಸಾಯಿಬಾಬಾ ನಗರದ ಚಂದ್ರೇಶ್ ಅಕಾರ್ಡ್ಸ್ ಕಟ್ಟಡದ ಫ್ಲ್ಯಾಟ್‌ನಲ್ಲಿ ತನ್ನ ಸಹೋದರನ ಜೊತೆ ವಾಸ ಮಾಡುತ್ತಿದ್ದರು.

ಕಾಶಿಮೀರಾದಲ್ಲಿ ವಾಸ ಮಾಡುತ್ತಿದ್ದ 37 ವರ್ಷದ ಸುಮನ್ ಕಾಂಬ್ಳೆ ಜೀವನೋಪಾಯಕ್ಕೆ ಮನೆ ಕೆಲಸ ಮಾಡುತ್ತಿದ್ದರು. ನಾಲ್ಕು ಮಕ್ಕಳ ತಾಯಿಯಾಗಿದ್ದ ಸುಮನ್ ಈ ಮನೆಯಲ್ಲದೇ ಇನ್ನೂ 8-9 ಮನೆಯಲ್ಲಿ ಕೆಲಸ ಮಾಡಿ ತಮ್ಮ ಕುಟುಂಬಕ್ಕೆ ಆಸರೆಯಾಗಿದ್ದರು. ಇವರ ಪತಿ ಚಮ್ಮಾರನ ಕೆಲಸ ಮಾಡುತ್ತಿದ್ದರು.
ಸದ್ಯ ಕಂಬಿಯ ಹಿಂದೆ ಹೋದ ಕೊಲೆ ಆರೋಪಿ ಆಶಿಶ್ ಮನೆಯಲ್ಲಿ, ಮೂರು ವರ್ಷಗಳಿಂದ ಸುಮನ್ ಕಾಂಬ್ಳೆ ಕೆಲಸ ಮಾಡುತ್ತಿದ್ದರು. ಆದರೆ.. ಈ ಮೊದಲು ಮನೆಯಲ್ಲಿ ಕೇವಲ ಆಶಿಶ್ ಸಹೋದರ ಮಾತ್ರ ವಾಸವಾಗಿದ್ದರು. ಕಳೆದ ಒಂದೂವರೆ ವರ್ಷಗಳಿಂದ ಈ ಮನೆಗೆ ಆಶಿಶ್ ಬಂದು ಸೇರಿಕೊಂಡಿದ್ದರು.
ಸಹೋದರನ ಮನೆಗೆ ಒಂದೂವರೆ ವರ್ಷದ ಹಿಂದೆ ಬಂದಿದ್ದ ಆಶಿಶ್ ಮೆಶ್ರಮ್, ಬಂದ ದಿನದಿಂದಲೇ ಸುಮನ್ ಕಾಂಬ್ಳೆ ಅವರ ಮೇಲೆ ಕಣ್ಣು ಹಾಕಿದ್ದರು. ದೈಹಿಕ ಸಂಬಂಧ ಬೆಳೆಸುವಂತೆ ಒತ್ತಾಯ ಮಾಡುತ್ತಿದ್ದರು. ಆದರೆ ಸುಮನ್ ಇದಕ್ಕೆ ಒಪ್ಪಿರಲಿಲ್ಲ. ಆಶಿಶ್ ಬೇಡಿಕೆಯನ್ನು ಈಡೇರಿಸಿರಲಿಲ್ಲ.
ಈ ಹಿನ್ನೆಲೆ ಕಳೆದ ಜನವರಿಯಲ್ಲಿ ಆಶಿಶ್ ಮೆಶ್ರಮ್, ಕಾಂಬ್ಳೆಯ ಎರಡನೇ ಮಗನಿಗೆ (ಪ್ರಕರಣದ ದೂರುದಾರ) ಕರೆ ಮಾಡಿ, ಲೈಂಗಿಕ ಬೇಡಿಕೆ ನಿರಾಕರಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು.
ಆಶಿಶ್ ಬೆದರಿಕೆ ಹಾಕಿದ ವಿಚಾರವನ್ನು ತಾಯಿ ಬಳಿ ಮಗ ವಿಚಾರಿಸಿದಾಗ, ಆಶಿಶ್ ತಮಗೆ ಲೈಂ*ಗಿಕ ಕಿರುಕುಳ ನೀಡುತ್ತಿರುವ ವಿಚಾರವನ್ನು ಸುಮನ್ ತಮ್ಮ ಮಗನ ಮುಂದೆ ಹೇಳಿದ್ದರು. ಹೀಗಾಗಿಯೇ ಅಲ್ಲಿ ಕೆಲಸ ಹೋಗುತ್ತಿಲ್ಲ ಎಂದು ತಿಳಿಸಿದ್ದರು. ತಾಯಿಯ ಮಾತುಗಳನ್ನು ಕೇಳಿ ಸಹಜವಾಗಿಯೇ ಕೆಂಡಾಮಂಡಲವಾಗಿದ್ದ ಸುಮನ್ ಅವರ ಮಗ ಆ ನಂತರ ಆಶಿಶ್ ಅವರನ್ನು ಹುಡುಕಿಕೊಂಡು ಹೋಗಿದ್ದರಾದರೂ ಆಶಿಶ್ ತಮ್ಮ ಫ್ಲಾಟ್‌ನಲ್ಲಿ ಸಿಕ್ಕಿರಲಿಲ್ಲ.
ಇದಾದ ಕೆಲ ದಿನಗಳ ನಂತರ ಮೀರಾ ರೋಡ್‌ನಲ್ಲಿ ಆಶಿಶ್ ಮೆಶ್ರಮ್ ಕಣ್ಣಿಗೆ ಬಿದ್ದಾಗ, ಸುಮನ್ ಕಾಂಬ್ಳೆ ಅವರ ಮಗ ಆಶಿಶ್‌ನ ನಡುರಸ್ತೆಯಲ್ಲಿ ಥಳಿಸಿದ್ದರು. ತಮ್ಮ ತಾಯಿಯಿಂದ ದೂರ ಇರುವಂತೆ ಎಚ್ಚರಿಕೆಯನ್ನು ನೀಡಿದ್ದರು.
ಆದರೆ, ಇದಾದ ಕೆಲವೇ ದಿನಗಳಲ್ಲಿ ಆಶಿಶ್‌ನ ಅಣ್ಣ, ಇನ್ಮುಂದೆ ನನ್ನ ತಮ್ಮನಿಂದ ಯಾವ ಸಮಸ್ಯೆಯೂ ನಿಮಗೆ ಆಗದು ಎಂದು ಸುಮನ್ ಕಾಂಬ್ಳೆ ಅವರ ಮನವೊಲಿಸಿದ್ದರು. ಮನೆ ಕೆಲಸಕ್ಕೆ ಮರಳಿ ಬರುವಂತೆ ಕೇಳಿಕೊಂಡಿದ್ದರು. ಆಶಿಶ್ ಅಣ್ಣನ ಈ ಮಾತುಗಳನ್ನು ನಂಬಿ ಸುಮನ್ ಕಾಂಬ್ಳೆ ಮತ್ತೆ ಕೆಲಸಕ್ಕೆ ಹೋಗಲು ಶುರು ಮಾಡಿದ್ದರು.
ದುರದೃಷ್ಟವಶಾತ್, ಬುಧವಾರ (ಮಾರ್ಚ್ 25) ಸುಮನ್ ರಾತ್ರಿ ಕಾಂಬ್ಳೆ ಕೆಲಸಕ್ಕೆ ಫ್ಲಾಟ್‌ಗೆ ಹೋದಾಗ, ಆಶಿಶ್ ಮೆಶ್ರಮ್ ಒಳನುಗ್ಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಚಾಕುವಿನಿಂದ ಆಕೆಯ ಮೇಲೆ ಹಠಾತ್ ದಾಳಿ ನಡೆಸಿ ಆಶಿಶ್ ಪರಾರಿಯಾದರು ಎಂದು ಪೊಲೀಸರು ತಮ್ಮ ವರದಿಯಲ್ಲಿ ಉಲ್ಲೇಖ ಮಾಡಿದ್ದು, ಗಂಭೀರ ಗಾಯಗೊಂಡ ಸುಮನ ರಕ್ತಸ್ರಾವದಿಂದ ಒದ್ದಾಡುತ್ತಾ ಬಾಗಿಲವರೆಗೆ ಬಂದರು. ನೆರೆಹೊರೆಯವರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಿಸದೆ ಸುಮನ ಮೃತಪಟ್ಟರೆಂದು ವೈದ್ಯರು ಘೋಷಿಸಿದರು ಎಂದು ಹೇಳಿದ್ದಾರೆ.
ಕೊಲೆಯ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಘಟನೆ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಪ್ರಾಥಮಿಕ ತನಿಖೆಯಲ್ಲಿ, ಈ ಕೃತ್ಯದಲ್ಲಿ ಹಿರಿಯ ಸಹೋದರನ ಪಾತ್ರವಿಲ್ಲ. ಕಳೆದೆರಡು ದಿನ ಸಹೋದರರ ನಡುವೆ ಕರೆಗಳಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದು, ಹಿರಿಯ ಸಹೋದರನ ಹೇಳಿಕೆಯನ್ನು ದಾಖಲಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸದ್ಯ ಆಶಿಶ್ ಮೆಶ್ರಮ್ ಅವರನ್ನು ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಸದ್ಯ ಆಶಿಶ್ ಮೆಶ್ರಮ್ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು ಈ ಪ್ರಕರಣ ಮುಂದೆ ಯಾವ ಹಂತಕ್ಕೆ ತಲುಪುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











