ಐಷಾರಾಮಿ ಕಾರಿಗೆ ಒಡೆಯನಾದ 'ಪುಟ್ಟಗೌರಿ', 'ಗಟ್ಟಿಮೇಳ' ಹುಡುಗ ರಕ್ಷ್.!
ಸತತ ಏಳು ವರ್ಷಗಳ ಕಾಲ ಕನ್ನಡ ಕಿರುತೆರೆ ವೀಕ್ಷಕರನ್ನು ಮನರಂಜಿಸಿದ ಧಾರಾವಾಹಿ 'ಪುಟ್ಟಗೌರಿ ಮದುವೆ'. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಈ ಸೀರಿಯಲ್ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲೂ ಜನಪ್ರಿಯತೆ ಪಡೆದವರು ನಟ ರಕ್ಷಿತ್ ಗೌಡ ಅಲಿಯಾಸ್ ರಕ್ಷ್.
'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಮಹೇಶ (ಮಹಿ) ಪಾತ್ರ ನಿರ್ವಹಿಸಿದ್ದ ರಕ್ಷಿತ್ ಗೌಡ ಕಿರುತೆರೆಯಲ್ಲೀಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೊಂದಿದ್ದಾರೆ. ಸದ್ಯ ರಕ್ಷಿತ್ ಗೌಡ ಅಲಿಯಾಸ್ ರಕ್ಷ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಸೀರಿಯಲ್ ನ ಲೀಡ್ ರೋಲ್ ನಲ್ಲಿ ಮಿಂಚುತ್ತಿದ್ದಾರೆ.
ಹೀಗಿರುವಾಗಲೇ, ನಟ ರಕ್ಷ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಅದು ಅಂತಿಂಥ ಅತಿಥಿಯಲ್ಲ. ಅರ್ಧ ಕೋಟಿ ರೂಪಾಯಿ ಮೌಲ್ಯದ ಅತಿಥಿ. ಹೌದು, ದುಬಾರಿಯ ಬೆಲೆಯ ಐಷಾರಾಮಿ ಕಾರಿಗೆ ನಟ ರಕ್ಷ್ ಒಡೆಯನಾಗಿದ್ದಾರೆ. ಮುಂದೆ ಓದಿರಿ...

ಆಡಿ ಖರೀದಿ ಮಾಡಿದ ರಕ್ಷ್
ಕಿರುತೆರೆಯ ಖ್ಯಾತ ನಟ ರಕ್ಷ್ ದುಬಾರಿ ಬೆಲೆಯ ಆಡಿ ಎ5 ಸ್ಟೋರ್ಟ್ ಬ್ಯಾಕ್ ಕಾರನ್ನು ಖರೀದಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಈ ಮಾಡೆಲ್ ಕಾರು ತೀರಾ ಅಪರೂಪ. ಈ ಕಾರಿನ ಆನ್ ರೋಡ್ ಬೆಲೆ ಅಂದಾಜು 65-70 ಲಕ್ಷ ರೂಪಾಯಿ.

ಹುಟ್ಟುಹಬ್ಬದಂದು ಕಾರು ಖರೀದಿ ಮಾಡಿದ ರಕ್ಷ್
ತಮ್ಮ ಹುಟ್ಟುಹಬ್ಬದ ಪ್ರಯುಕ್ತ ನಟ ರಕ್ಷ್ ಆಡಿ ಎ5 ಸ್ಟೋರ್ಟ್ ಬ್ಯಾಕ್ ಖರೀದಿ ಮಾಡಿದ್ದಾರೆ. ಕಿರುತೆರೆ ಲೋಕದಲ್ಲಿ ಹತ್ತು ವರ್ಷಗಳಿಂದ ಶ್ರಮ ಪಟ್ಟಿರುವ ರಕ್ಷ್ ಇದೀಗ ಐಷಾರಾಮಿ ಕಾರು ಕೊಂಡುಕೊಂಡಿದ್ದಾರೆ.

ಕರುನಾಡ ಜನತೆಗೆ ಧನ್ಯವಾದ ತಿಳಿಸಿದ ರಕ್ಷ್
ಹೊಸ ಕಾರಿನ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು ನಟ ರಕ್ಷ್ ಸಂತಸ ವ್ಯಕ್ತಪಡಿಸಿದ್ದಾರೆ. ''ಶ್ರಮ ನನ್ನದೇ ಆದರೂ, ಈ ಕಾರನ್ನು ನಾನು ಖರೀದಿ ಮಾಡಲು ಸಾಧ್ಯವಾಗಿಸಿದ್ದು ಕರುನಾಡ ಜನತೆಯ ಆಶೀರ್ವಾದ ಹಾಗೂ ಪ್ರೀತಿ. ಹೀಗಾಗಿ, ಎಲ್ಲಾ ಕ್ರೆಡಿಟ್ ಕರ್ನಾಟಕ ಜನತೆಗೆ ಸಲ್ಲಬೇಕು'' ಎಂದು ನಟ ರಕ್ಷ್ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ಸ್ಟೂಡೆಂಟ್ ಬಸ್ ಪಾಸ್ ನಿಂದ ಇಲ್ಲಿಯವರೆಗೆ.!
''ಬಿಎಂಟಿಸಿ ಸ್ಟೂಡೆಂಟ್ ಬಸ್ ಪಾಸ್ ನಿಂದ ಇಲ್ಲಿಯವರೆಗೆ ಬಂದಿದ್ದೇನೆ. ನಿಮ್ಮೆಲ್ಲರ ಆಶೀರ್ವಾದಕ್ಕೆ ನನ್ನ ಧನ್ಯವಾದ. ನಿಮ್ಮ ಪ್ರೀತಿ ಇಲ್ಲದೇ ಹೋಗಿದ್ರೆ, ಇದು ಸಾಧ್ಯವಾಗುತ್ತಿರಲಿಲ್ಲ. ನಿಮ್ಮ ಸ್ವಂತ ದುಡ್ಡಿನಿಂದ ಕಾರು ಖರೀದಿ ಮಾಡಿದ್ರೆ, ಅದರಲ್ಲಿನ ಡ್ರೈವ್ ವರ್ಣಿಸಲಸಾಧ್ಯ'' ಎಂದು ಬರೆದುಕೊಂಡಿದ್ದಾರೆ ನಟ ರಕ್ಷ್.


Click it and Unblock the Notifications











