»   » ವಿವಾಹಿತೆಗೆ ನಗ್ನ ಫೋಟೋ ಕಳುಹಿಸಿ ಸಿಕ್ಕಿಬಿದ್ದ ನಟ

ವಿವಾಹಿತೆಗೆ ನಗ್ನ ಫೋಟೋ ಕಳುಹಿಸಿ ಸಿಕ್ಕಿಬಿದ್ದ ನಟ

By: ರವಿಕಿಶೋರ್
Subscribe to Filmibeat Kannada
TV actor Sanil Sodhi
ವಿವಾಹಿತ ಮಹಿಳೆಯೊಬ್ಬರಿಗೆ ತನ್ನ ನಗ್ನ ಫೋಟೋಗಳನ್ನು ಕಳುಹಿಸಿದ ನಟನೊಬ್ಬ ಪೊಲೀಸರ ಅತಿಥಿಯಾದ ಘಟನೆ ಮುಂಬೈನಲ್ಲಿ ನಡೆದಿದೆ. ಈತ ತನ್ನದೇ ನಗ್ನ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ತನ್ನ ಬ್ಲ್ಯಾಕ್ ಬೆರಿ ಮೊಬೈಲ್ ನಲ್ಲಿ ವಿವಾಹಿತ ಮಹಿಳೆಗೆ ರವಾನಿಸಿದ್ದ.

ಈ ಸಂಬಂಧ ಆಕೆ ಪೊಲೀಸರ ಮೊರೆ ಹೋಗಿದ್ದರು. ಕಾರ್ಯಾಚರಣೆ ಇಳಿದ ಮುಂಬೈ ಪೊಲೀಸರು ಈತನ ಮೊಬೈಲ್ ಫೋನನ್ನು ಅನುಸರಿಸಿ ಭಾನುವಾರ ರಾತ್ರಿ ಈತನ ಮನೆ ಕದ ತಟ್ಟಿದ್ದಾರೆ. ಓಹೋ ಇನ್ನೇನು ತನ್ನ ಪ್ರಿಯತಮೆ ಬಂದೇ ಬಿಟ್ಟಳು ಎಂದು ಆತ ಬಾಗಿಲು ತೆರೆದರೆ ಪೊಲೀಸರ ಕೈಗೆ ಸಿಕ್ಕಿಬಿದ್ದಾನೆ.

ಈತನ ಹೆಸರು ಸನಿಲ್ ಸೋಧಿ. ವಿವಾಹಿತ ಮಹಿಳೆ ಈತನಿಗೆ ಪರಿಚಯದವರಂತೆ. ಕೆಲವೊಂದು ಹಿಂದಿ ಸೀರಿಯಲ್ ಗಳಲ್ಲೂ ಅಭಿನಯಿಸಿದ್ದಾನೆ. ಈತನನ್ನು ವಶಕ್ಕೆ ಪಡೆದಿರುವ ಪೊಲೀಸರು, ಮಾಹಿತಿ ತಂತ್ರಜ್ಞಾನ ಕಾಯಿದೆ ಉಲ್ಲಂಘಿಸಿ ಅಶ್ಲೀಲ ಮಾಹಿತಿಯನ್ನು ರವಾನಿಸಿದ ಎಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 509 ಹಾಗೂ ಸೆಕ್ಷನ್ 67ರಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಸನಿಲ್ ಸೋದಿ ಕೆಲವೊಂದು ಬಾಲಿವುಡ್ ಚಿತ್ರಗಳಲ್ಲೂ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸಿದ್ದ. ಈತನ ತಂದೆ ಮಾಜಿ ಐಎಎಸ್ ಅಧಿಕಾರಿ. ಜೀ ಟಿವಿಯ 'ರಿಸ್ತೆ', ಡಿಡಿ1ರ 'ಹಮ್' ಧಾರಾವಾಹಿಗಳಲ್ಲಿ ಈತ ಅಭಿನಯಿಸಿದ್ದಾನೆ. ಒಂದೆರಡು ದಿನಗಳಲ್ಲಿ ಈತನ ಪ್ರಕರಣ ಕೋರ್ಟ್ ಕಟಕಟೆಗೆ ಬರಲಿದೆ. ಗಂಭೀರ ಶಿಕ್ಷೆ ವಿಧಿಸುವ ಸಾಧ್ಯತೆಗಳಿವೆ ಎನ್ನುತ್ತಾರೆ ನಿಪುಣರು. (ಏಜೆನ್ಸೀಸ್)

English summary
Actor Sanil Sodhi, who has been part of television series like Rishte (on Zee TV), Hum (on DD1), Pintoo, and was also spotted in the Bollywood movie Hu Tu Tu (one that starred Tabu and Sunil Shetty) and Hazaar Chaurasi Ki Ma (that starred Jaya Bachchan, Anupam Kher and Seema Biswas), has been accused of sending 25 nude photos through his Blackberry messenger to a married lady who happens to be his friend.
Please Wait while comments are loading...