Siddumoolimane: ರವಿಷ್ಕಾ ಜೊತೆಗೆ ರೊಮ್ಯಾಂಟಿಕ್ ಮೂಡ್‌ನಲ್ಲಿ ಸಿದ್ದು ಮೂಲಿಮನೆ
ಕಿರುತೆರೆಯಿಂದ ಹಿರಿತೆರೆಗೆ ಬಂದ ಸಾಕಷ್ಟು ಕಲಾವಿದರಿದ್ದಾರೆ. ಸೀರಿಯಲ್ ಮೂಲಕ ಎಂಟ್ರಿಕೊಟ್ಟ ಅದೆಷ್ಟೋ ಕಲಾವಿದರು ಇಂದು ದೊಡ್ಡ ದೊಡ್ಡ ಸ್ಟಾರ್ ಆಗಿ ಬೆಳೆದಿದ್ದಾರೆ. ಈಗಂತು ಸೀರಿಯಲ್, ಸಿನಿಮಾ ಬರುವವರಿಗೆ ಆರಂಭದ ವೇದಿಕೆಯಾಗಿದೆ. ಅದರಲ್ಲಿ ಸಿದ್ದು ಮೂಲಿಮನೆ ಕೂಡ ಈಗ ಸಿನಿಮಾ ಕಡೆಗೆ ಬಂದಿದ್ದಾರೆ.
ಸಿದ್ದು ಮೂಲಿಮನೆ 'ಪಾರು' ಧಾರಾವಾಹಿ ಮೂಲಕ ಕಿರುತೆರೆ ಪ್ರಿಯರ ಮನಸ್ಸು ಗೆದ್ದವರು. ಪಾರು ಭಾಮೈದನಾಗಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದರು. ಇದೀಗ ಸೀರಿಯಲ್ ಬಿಟ್ಟು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಅಭಿನಯದ ಸೀಟ್ ಎಡ್ಜ್ ಸಿನಿಮಾ ರೆಡಿಯಾಗಿದ್ದು, ಶೀಘ್ರದಲ್ಲಿಯೇ ರಿಲೀಸ್ ಆಗಲಿದೆ. ಇದೀಗ ಸಿನಿಮಾ ತಂಡದಿಂದ ಹಾಡೊಂದನ್ನ ಬಿಡುಗಡೆ ಮಾಡಲಾಗಿದೆ.

'ಸೀಟ್ ಎಡ್ಜ್' ಸಾಂಗ್ ರಿಲೀಸ್
ಚೇತನ್ ಶೆಟ್ಟಿ ನಿರ್ದೇಶನದ ಚೊಚ್ಚಲ ಸಿನಿಮಾ ಇದು. ಎನ್ ಆರ್ ಸಿನಿಮಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಗಿರಿಧರ್ .ಟಿ ಅವರು ನಿರ್ಮಾಣ ಮಾಡಿರುವ 'ಸೀಟ್ ಎಡ್ಜ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಸದ್ಯ ಪ್ರಚಾರ ಶುರು ಮಾಡಿದ್ದು ಅದರ ಭಾಗವಾಗಿ ಹಾಡೊಂದನ್ನ ರಿಲೀಸ್ ಮಾಡಿದೆ. 'ಸಾರಿ ಹೇಳುವೆ' ಎಂಬ ಹಾಡು ಇದಾಗಿದೆ. ಸಿದ್ದು ಕೋಡಿಪುರ ಬರೆದಿರುವ ಸಾಹಿತ್ಯಕ್ಕೆ ಅರ್ಮಾನ್ ಮಲ್ಲಿಕ್ ಧ್ವನಿಯಾಗಿದ್ದಾರೆ. ಆಕಾಶ್ ಪರ್ವ ಅವರು ಸಂಗೀತ ನೀಡಿದ್ದಾರೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಉತ್ತಮ ರೆಸ್ಪಾನ್ಸ್ ಪಡೆದಿದ್ದು, ರೀಚ್ ಆಗಿದೆ.
ಸಿದ್ದು ನಟನೆಗೆ ಫ್ಯಾನ್ಸ್ ಫಿದಾ
ಇನ್ನು ಸಿದ್ದು ಮೂಲಿಮನಿ ಈ ಹಾಡಿನಲ್ಲಿ ಫುಲ್ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ. ನಟಿ ರವಿಷ್ಕಾ ಶೆಟ್ಟಿ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಸಿದ್ದು ಮೂಲಿಮನಿ ಅಭಿಮಾನಿಗಳಂತು ಹಾಡು ನೋಡಿ ಖುಷಿಯಾಗಿದ್ದಾರೆ. ಸೈಲೆಂಟ್ ಆಗಿರ್ತಾ ಇದ್ದ ಸಿದ್ದು, ಇಷ್ಟೊಂದು ರೊಮ್ಯಾಂಟಿಕ್ ಹ ಅಂತ ಮಹಿಳಾ ಅಭಿಮಾನಿಗಳು ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಸಿನಿಮಾದ ಮೇಲೆ ಸಿದ್ದು ಕೂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಯಾಕಂದ್ರೆ ಯಾರಿಗೆ ಆಗಲಿ ಸಿನಿಮಾಗೆ ಬಂದ ಮೇಲೆ ಇಲ್ಲಿಯೂ ಬೆಳೆಯಬೇಕೆಂಬ ಆಸೆಯನ್ನ ಇಟ್ಟುಕೊಂಡಿರುತ್ತಾರೆ. ಯಶಸ್ಸು ಸಿಕ್ಕಾಗಲೇ ಮತ್ತಷ್ಟು ಪ್ರಾಜೆಕ್ಟ್ ಗಳು ಹುಡುಕಿ ಬರುವುದು.

ಸಿದ್ದು ಸಿನಿಮಾದಲ್ಲಿ ಬ್ಯುಸಿ
ಸಿದ್ದು 'ಸೀಟ್ ಎಡ್ಜ್' ಸಿನಿಮಾ ಮಾಡುವುದಕ್ಕೂ ಮುನ್ನವೇ ಹಲವು ಸೀರಿಯಲ್ ಸಿನಿಮಾದಲ್ಲಿ ಅಭಿನಯಿಸಿದ್ದರು. ಸಿದ್ದು ಮೊದಲು ಬಂದದ್ದು ಉದಯ ಟಿವಿಯ 'ಬಣ್ಣದ ಬುಗುರಿ' ಧಾರಾವಾಹಿ ಮೂಲಕ. ಬಳಿಕ ಹಲವು ಧಾರಾವಾಹಿಗಳಲ್ಲಿ ನಟಿಸಿದರು. ಪಾರು ಧಾರಾವಾಹಿ ಒಳ್ಳೆಯ ಹೆಸರನ್ನು ತಂದುಕೊಟ್ಟಂತ ಧಾರಾವಾಹಿ. ಬಳಿಕ ಸಿನಿಮಾದ ಜರ್ನಿಯನ್ನು ಶುರು ಮಾಡಿದರು. 'ವಿಕ್ರಾಂತ್ ರೋಣ' ಸಿನಿಮಾದಲ್ಲೂ ಒಂದೊಳ್ಳೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ 'ಸೀಟ್ ಎಡ್ಜ್' ಸಿನಿಮಾದಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಿಯಾ-ಸಿದ್ದು ಜೋಡಿಗೆ ಫ್ಯಾನ್ಸ್
ಪ್ರಿಯಾ 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಸಿದ್ದು 'ಪಾರು' ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಇಬ್ಬರು ಒಬ್ಬರಿಗೊಬ್ಬರು ಪ್ರೀತಿಸಿ, ಅದ್ದೂರಿಯಾಗಿ ಮದುವೆಯೂ ಆದ್ರು. ಈಗ ಇಬ್ಬರು ಕೂಡ ತಮ್ಮ ತಮ್ಮ ನಟನಾ ಬದುಕಲ್ಲಿ ಬ್ಯುಸಿಯಾಗಿದ್ದಾರೆ. ಪ್ರಿಯಾ ಸೀರಿಯಲ್ ಮಾಡ್ತಾ ಇದ್ರೆ ಸಿದ್ದು ಸಿನಿಮಾ ಮಾಡ್ತಾ ಇದ್ದಾರೆ. ಈ ಕ್ಯೂಟ್ ಜೋಡಿಗೆ ಕ್ಯೂಟ್ ಕ್ಯೂಟ್ ಅಭಿಮಾನಿಗಳಿದ್ದಾರೆ.


Click it and Unblock the Notifications











