ಸ್ಕಂದನ ರಿಯಲ್ ಲವ್ ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು.?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನಟ ಸ್ಕಂದ ಅಶೋಕ್. 'ರಾಧಾ ರಮಣ' ಸೀರಿಯಲ್ ನಲ್ಲಿ ರಾಧಾ ಪತಿ ರಮಣ್ ಆಗಿ ಕಾಣಿಸಿಕೊಂಡಿರುವ ಸ್ಕಂದ ಅಶೋಕ್ ರವರ ನಿಜ ಜೀವನದ ಲವ್ ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು.?
ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಕಂದ ಅಶೋಕ್ ಮತ್ತು ಪತ್ನಿ ಶಿಕಾ ಇದೀಗ ಉದಯ ಟಿವಿಯ ಜನಪ್ರಿಯ ಕಾರ್ಯಕ್ರಮ 'ತುತ್ತಾ ಮುತ್ತಾ'ದಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ.
ಸ್ಕಂದ ಮತ್ತು ಶಿಕಾ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ ಮತ್ತು ಸ್ಕಂದ ರಿಯಲ್ ಲೈಫ್ ಸ್ಟೈಲ್ ಬಗ್ಗೆ 'ತುತ್ತಾ ಮುತ್ತಾ' ಕಾರ್ಯಕ್ರಮದಲ್ಲಿ ಅನಾವರಣ ಆಗಲಿದೆ. ಮುಂದೆ ಓದಿರಿ...

ಈ ವಾರದ ಅತಿಥಿ
ಕಿರುತೆರೆಯಲ್ಲಿ ಎಲ್ಲರ ಮನ ಗೆದ್ದಿರುವ ಸ್ಕಂದ ಅಶೋಕ್ ಉದಯ ವಾಹಿನಿಯಲ್ಲಿ ಪ್ರಸಾರವಾಗುವ ಸೂಪರ್ ಹಿಟ್ ಶೋ 'ತುತ್ತಾ ಮುತ್ತಾ'ದ ಈ ವಾರದ ಸಂಚಿಕೆಯಲ್ಲಿ ಅತಿಥಿಯಾಗಿ ಬರಲಿದ್ದಾರೆ. 19ನೇ ವಯಸ್ಸಿನಲ್ಲಿ ಮಲಯಾಳಂ ಭಾಷೆಯ ಸಿನಿಮಾದಲ್ಲಿ ನಟಿಸಿದ್ದ ಸ್ಕಂದನಿಗೆ, ಅಂದಿನಿಂದಲೂ ಫೀಮೇಲ್ ಫ್ಯಾನ್ಸ್ ಜಾಸ್ತಿ.

ಸ್ಕಂದ ಬಗ್ಗೆ ತಾಯಿ ಏನಂತಾರೆ.?
''ಚಿಕ್ಕಂದಿನಿಂದಲೇ ತುಂಟನಾದರೂ ಸ್ಕಂದ ಗೆ ಕ್ರೀಡೆ ಹಾಗೂ ಕಾರು ಸವಾರಿಯ ಹುಚ್ಚಿತ್ತು. ಯಾರ ಸಹಾಯವಿಲ್ಲದೆ ಕಾರು ಓಡಿಸಲು ಕಲಿತ ಸ್ಕಂದನಿಗೆ ಜೀವನದ ದಾರಿ ಕೂಡ ಒಂದು ಒಳ್ಳೆಯ ಸಂಚಾರವಾಗಿಯೇ ತಮ್ಮ ಗುರಿಯನ್ನು ಮುಟ್ಟಿಸಿದೆ'' ಎನ್ನುತ್ತಾರೆ ಸ್ಕಂದ ಅವರ ತಾಯಿ.

ಲವ್ ಸ್ಟೋರಿ ಬಗ್ಗೆ ಮಾತು
ಬಹಳಷ್ಟು ಹೆಣ್ಣು ಮಕ್ಕಳ ಪ್ರೀತಿಯನ್ನು ಪಡೆದ ಸ್ಕಂದನಿಗೆ, ತನ್ನ ಹೆಂಡತಿಯ ಮೇಲೆ ಅಪಾರ ಪ್ರೀತಿ. ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಭೇಟಿಯಾದ ಇಬ್ಬರ ಲವ್ ಸ್ಟೋರಿ ಐದು ವರ್ಷ ನಡೆದು, ಮದುವೆಯತ್ತ ನಡೆದದ್ದು ಹೇಗೆ ಎಂಬುದರ ಬಗ್ಗೆ ಅವರ ಪತ್ನಿ ಶಿಕಾ ಹಂಚಿಕೊಂಡಿದ್ದಾರೆ.

ಪ್ರಸಾರ ಯಾವಾಗ.?
ಸ್ಕಂದ-ಶಿಕಾ ಅಂತಹ ಸುಂದರ ದಂಪತಿಯ ಬಗ್ಗೆ ಹೆಚ್ಚು ತಿಳಿಯಲು ಈ ವಾರದ ತುತ್ತಾ ಮುತ್ತಾ ಸಂಚಿಕೆಯನ್ನು ಇದೇ ಶನಿವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ವೀಕ್ಷಿಸಿ.


Click it and Unblock the Notifications











