ನಟನೆಯ ಜೊತೆಗೆ ಮೇಕಪ್ ಆರ್ಟಿಸ್ಟ್ ಆದ ಧನ್ಯಾ; ಚೈತ್ರಾ ಅಂದ ಹೆಚ್ಚಿಸಿದ ದೀಪಿಕಾ

By ಪ್ರಿಯಾ ದೊರೆ

'ಕುಲವಧು' ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿಕೊಟ್ಟ ನಟಿ ಧನ್ಯಾ ದೀಪಿಕಾ ಈಗ ಕೇವಲ ನಟಿ ಮಾತ್ರ ಅಲ್ಲ. ಅವರು ಈಗ ಮೇಕಪ್ ಆರ್ಟಿಸ್ಟ್ ಎಂಬುದು ಕೂಡ ರಿವೀಲ್ ಆಗಿದೆ. ಹೌದು, ಬಿಗ್ ಬಾಸ್ ಸೀಸನ್ 11ರಲ್ಲಿ ಭಾಗವಹಿಸಿದ ಚೈತ್ರಾ ಕುಂದಾಪುರ ಅವರಿಗೆ ಹೊಸ ಲುಕ್ ಕೊಟ್ಟಿದ್ದಾರೆ. ಇತ್ತೀಚೆಗೆ ಚೈತ್ರಾ ಕುಂದಾಪುರ ಅವರು ವಿತ್ ಮೇಕಪ್ ಕ್ಯಾಮರಾ ಎದುರು ಬರಲು ನಟಿ ಧನ್ಯಾ ದೀಪಿಕಾ ಎಂಬುದು ಎಲ್ಲರಿಗೂ ಗೊತ್ತಾಗಿದೆ.

ಮೈಕ್ ಹಿಡಿದು ಉದ್ದುದ್ದ ಸಾಲುಗಳಲ್ಲಿ ಭಾಷಣ ಮಾಡುತ್ತಿದ್ದ ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಮೇಕಪ್ ಹಚ್ಚಿ ಕ್ಯಾಮರಾ ಮುಂದೆ ಮಿನುಗುತ್ತಿದ್ದಾರೆ.

Tv Actress actress dhanya deepika become make up artist

ಸೀರೆ, ಒಡವೆಗಳ ಜಾಹೀರಾತು ಶೂಟ್‌ಗಳಲ್ಲಿ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಹೀಗೆ ಚೈತ್ರಾ ಕುಂದಾಪುರ ಅವರು ಮಿನುಗಲು ಯಾವ ಮೇಕಪ್ ಆರ್ಟ್ಸ್ ಕಾರಣ ಎಂಬುದು ಇದೀಗ ಎಲ್ಲರಿಗೂ ಗೊತ್ತಾಗಿದೆ.

ನಟನೆ ಜೊತೆಗೆ ಮೇಕಪ್ ಆರ್ಟಿಸ್ಟ್

ನಟಿ ಧನ್ಯಾ ದೀಪಿಕಾ ಅವರು ಕಿರುತೆರೆಯಲ್ಲಿ ನಟನೆ ಮಾಡುವುದಲ್ಲದೇ, ಮೇಕಪ್ ಹಾಕದೇ ಇದ್ದ ಹಾಗೆಯೇ ಕ್ಯಾಮಾರಾ ಎದುರಿಸುತ್ತಿದ್ದ ಚೈತ್ರಾ ಅವರಿಗೆ ಹೊಸ ಲುಕ್ ಕೂಡ ಕೊಟ್ಟಿದ್ದಾರೆ. ಹೌದು, ನಟಿ ಧನ್ಯಾ ದೀಪಿಕಾ ಅವರು ಚೈತ್ರಾ ಕುಂದಾಪುರ ಅವರಿಗೆ ಮೇಕಪ್ ಮಾಡಿದ್ದಾರೆ. ಇದರ ವೀಡಿಯೋವನ್ನು ಚೈತ್ರಾ ಕುಂದಾಪುರ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವೀಡಿಯೋ ನಟಿ ಧನ್ಯಾ ದೀಪಿಕಾ ಅವರು ಮೇಕಪ್ ಆರ್ಟಿಸ್ಟ್ ಎಂಬುದನ್ನು ಬಯಲು ಮಾಡಿದೆ. ನಟಿ ಧನ್ಯಾ ದೀಪಿಕಾ ಯಾರು ಎಂದು ಗೆಸ್ ಮಾಡುತ್ತಿದ್ದೀರಾ..? ಮತ್ಯಾರೂ ಅಲ್ಲ ರೀ.. ಕುಲವಧು ಧಾರಾವಾಹಿ ಧನ್ಯಾ.

ಕುಲವಧು ಧನ್ಯಾ ನಟನಾ ಪಯಣ

ನಟಿ ದೀಪಿಕಾ ಅವರು ಕುಲವಧು ಧಾರಾವಾಹಿಯಲ್ಲಿ ನಟಿಸಿದ ಬಳಿಕ ಅವರ ಹೆಸರು ಕೂಡ ಧನ್ಯಾ ದೀಪಿಕಾ ಎಂದೇ ಬದಲಾಗಿ ಬಿಟ್ಟಿದೆ. ಸದ್ಯ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಸೇವಂತಿಯಲ್ಲಿ ನಾಯಕಿ ಸೇವಂತಿ ಆಗಿ ನಟಿ ದೀಪಿಕಾ ಅವರು ಅಭಿನಯಿಸುತ್ತಿದ್ದಾರೆ. ನಟಿ ದೀಪಿಕಾ ಅವರು ಆಕಸ್ಮಿಕವಾಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟವರು. ಕುಲವಧು ಧಾರಾವಾಹಿಯ ಮೂಲಕ ಕಿರುತೆರೆಗೆ ಪರಿಚಿತರಾದರು. ಅಲ್ಲಿಂದ ಶುರುವಾದ ಇವರ ನಟನೆಯ ಪಯಣ ಇಂದಿಗೂ ನಿಂತಿಲ್ಲ. ದೀಪಿಕಾ ಸದ್ಯ ಸೇವಂತಿಯಾಗಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಮೂಲತಃ ನೃತ್ಯಗಾರ್ತಿಯಾಗಿದ್ದ ದೀಪಿಕಾ ಶಾಸ್ತ್ರೋಕ್ತವಾಗಿ ನೃತ್ಯವನ್ನು ಕಲಿತಿದ್ದಾರೆ. ಹಲವಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದ ದೀಪಿಕಾ ಸ್ನೇಹಿತೆಯ ಒತ್ತಾಯದ ಮೇರೆಗೆ ಧಾರಾವಾಹಿಯ ಆಡಿಷನ್‌ಗೆ ಹೋಗಿದ್ದರು.

ಸೇವಂತಿಯಾಗಿರುವ ಧನ್ಯಾ

ಅಲ್ಲಿಂದ ಅವರ ಪಯಣದ ದಿಕ್ಕೇ ಬದಲಾಗಿತ್ತು. ಕುಲವಧು ಧಾರಾವಾಹಿಯ ಆಡಿಷನ್‌ನಲ್ಲಿ ಆಯ್ಕೆಯಾಗಿ, ಮೊದಲ ಧಾರಾವಾಹಿಗೆ ನಾಯಕಿಯಾಗಿ ನಟಿಸುವ ಅವಕಾಶ ದೊರಕಿತು. 'ಕುಲವಧು' ಧಾರಾವಾಹಿಯು 1500 ಸಂಚಿಕೆ ಪೂರೈಸಿ ದೀಪಿಕಾ ಅವರನ್ನು ಧನ್ಯಾ ಎಂದು ಬದಲಾಯಿಸಿತ್ತು. ಬರೋಬ್ಬರಿ ಐದಾರು ವರ್ಷಗಳ ಕಾಲ ಧನ್ಯಾ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ ದೀಪಿಕಾ ನಂತರ ಆರತಿಯಾಗಿ ಬಂದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ನಟಿಸಿದರು. ತದನಂತರ ಉದಯ ವಾಹಿನಿಯ ಸೇವಂತಿ ಧಾರಾವಾಹಿಯಲ್ಲಿ ಸೇವಂತಿಯಾಗಿ ನಟಿಸುತ್ತಿದ್ದು, ಈ ಧಾರಾವಾಹಿಯೂ ಬರೋಬ್ಬರಿ 1800ಕ್ಕೂ ಅಧಿಕ ಸಂಚಿಕೆಗಳನ್ನು ಪೂರೈಸಿದೆ. ಸೇವಂತಿ ಮತ್ತು ಅರ್ಜುನ್ ಪಾತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇನ್ನು ನಟಿ ಧನ್ಯಾ ದೀಪಿಕಾ ಅವರು 'ಇಂಟಿಕಿ ದೀಪಂ ಇಲ್ಲಾಲು' ಎಂಬ ತೆಲುಗು ಧಾರಾವಾಹಿಯಲ್ಲಿ ನಾಯಕಿ ನಟಿಸಿದ್ದಾರೆ. ಅಲ್ಲದೇ ಮೂರು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಚಿಟ್ಟೆ, ನನ್ ಮಗಳೇ ಹೀರೋಯಿನ್ ಎಂಬ ಎರಡು ಕನ್ನಡ ಚಿತ್ರಗಳು ಹಾಗೂ ಇಟ್ಲು ಎಂಬ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

More from Filmibeat

English summary
Kulavadhu serial fame actress dhanya deepika is also make-up artist;
Read more about: serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X