ತೆಲುಗು ಕಿರುತೆರೆಗೆ ಎಂಟ್ರಿ ಕೊಟ್ಟ ಅಕ್ಷತಾ ದೇಶಪಾಂಡೆ : 'ನಿನ್ನುಕೋರಿ'ಯಲ್ಲಿ ಕನ್ನಡದ ನಟಿಯೇ ಹೈಲೆಟ್
ಸ್ಟಾರ್ ಸುವರ್ಣದಲ್ಲಿ 'ಕಥೆಯೊಂದು ಶುರುವಾಗಿದೆ' ಧಾರಾವಾಹಿ ಎಲ್ಲರ ಮನಗೆದ್ದಿತ್ತು. ಬಡತನದ ಕುಟುಂಬವಾದರೂ, ಸ್ವಾಭಿಮಾನದಿಂದ ಬದುಕಿದ್ದವರು. ಕೃತಿ ಮನೆಯ ಮಗಳಾಗಿ, ತನ್ನೆಲ್ಲಾ ಕೆಲಸಗಳನ್ನು ಮಾಡುತ್ತಾ, ಇಡೀ ಮನೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಳು. ತಂಗಿ ಮಾಡಿದ ತಪ್ಪಿಗೆ ಒಲ್ಲದ ಹುಡುಗನಿಗೆ ತಾನು ಕೊರಳೊಡ್ಡಿದ್ದಳು. ಸೀರಿಯಲ್ ಮುಗಿಯುವ ವೇಳೆಗೆ ಇಬ್ಬರಲ್ಲೂ ಪ್ರೀತಿಯಾಗಿತ್ತು.
'ಕಥೆಯೊಂದು ಶುರುವಾಗಿದೆ' ಮುಗಿದ ಮೇಲೆ ಕೃತಿ ಪಾತ್ರಧಾರಿ ಅಕ್ಷತಾ ದೇಶಪಾಂಡೆ ಇದೀಗ ತೆಲುಗು ಅಂಗಳಕ್ಕೆ ಕಾಲಿಟ್ಟಿದ್ದಾರೆ. ಅಲ್ಲಿನ ಅಭಿಮಾನಿಗಳ ಮನಸ್ಸನ್ನು ಗೆಲ್ಲುವ ಗಟ್ಟಿ ಹೆಣ್ಣಾಗಿ ಕಾಣಿಸಿದ್ದಾರೆ. ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದ್ದು, ಕನ್ನಡತಿಯೇ ಹೈಲೇಟ್ ಆಗಿರುವುದು ಕಾಣುತ್ತಿದೆ.

ತೆಲುಗು ಧಾರಾವಾಹಿಯಲ್ಲಿ ಅಕ್ಷತಾ
ಅಕ್ಷತಾ ದೇಶಪಾಂಡೆ ತೆಲುಗು ಸೀರಿಯಲ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದು, ಧಾರಾವಾಹಿಯ ಪ್ರೋಮೋ ರಿಲೀಸ್ ಮಾಡಿದ್ದಾರೆ. 'ನಿನ್ನುಕೋರಿ' ಧಾರಾವಾಹಿಯಲ್ಲಿ ಅಕ್ಷತಾ ಹೆಸರು ಚಂದ್ರಕಲಾ. ಅಪ್ಪನ ಮುದ್ದಿನ ಮಗಳು. ಗಿಡಗಳ ಜೊತೆಗೂ ಮಾತನಾಡುವ ಮುಗ್ದೆ. ಗಿಡಗಳ ಧ್ವನಿಯನ್ನು ಕೇಳಿಸಿಕೊಳ್ಳುವಷ್ಟು ಒಳ್ಳೆಯ ಮನಸ್ಸಿರುವಾಕೆ. ಈ ರೀತಿ ಒಬ್ಬೊಬ್ಬಳೆ ಮಾತನಾಡುವುದನ್ನು ಯಾರಾದರೂ ನೋಡಿದರೆ ಮೆಂಟಲ್ ಎನ್ನುತ್ತಾರೆ ಎಂದರೆ, ನಾವೂ ಗಿಡಗಳ ಜೊತೆಗೆ ಮಾತನಾಡಿದರೆ ಅವುಗಳು ಕುಇಡ ಮಾತನಾಡುತ್ತವೆ ಎಂಬ ನಂಬಿಕೆ ಇಟ್ಟವಳು ಎಂಬುದನ್ನೇ ವಾದ ಮಾಡಿದ್ದಾಳೆ.
ಚಂದ್ರಕಲಾ ಹೊಡೆತಕ್ಕೆ ಎದುರಾಳಿಗಳು ಔಟ್
ತಂದೆಯ ಮುದ್ದಿನ ಮಗಳು. ಚಂದ್ರಕಲಾ ತಂದೆ ಊರಿಗೆ ನ್ಯಾಯ ಹೇಳುವ ಸ್ಥಾನದಲ್ಲಿದ್ದಾರೆ. ಎರಡು ಊರುಗಳ ನಡುವೆ ಕಬ್ಬಡಿ ಪಂದ್ಯಾವಳಿ ಏರ್ಪಟ್ಟಿದೆ. ಅದಕ್ಕೆ ಅಪ್ಪ-ಮಗಳೇ ಚಾಲನೆ ನೀಡಿದ್ದಾರೆ. ಆದರೆ ಕಬ್ಬಡಿ ಆಟದಲ್ಲಿ ಚಂದ್ರಕಲಾ ಊರಿನವರೇ ಸೋಲು ಕಂಡಿದ್ದಾರೆ. ಇದರಿಂದ ತಂದೆ ಸಾಕಷ್ಟು ನೊಂದುಕೊಂಡಿದ್ದಾರೆ. ತಂದೆ ತಲೆ ತಗ್ಗಿಸುವುದಕ್ಕೆ ಚಂದ್ರಕಲಾ ಬಿಡುವುದಕ್ಕೆ ಸಾಧ್ಯವೇ ಇಲ್ಲ. ಅಖಾಡಕ್ಕೆ ಅವಳೇ ಇಳಿದಿದ್ದಾಳೆ. ಸೆರಗನ್ನು ಕಟ್ಟಿ, ಕೈಗೆ ಧೂಳು ಬಳಿದುಕೊಂಡು ಇಳಿದಾಗಲೇ ಎದುರಾಳಿಗಳು ಸೋತು ನೆಲ ಕಚ್ಚಿದರು. ಇದು ಗೌರವ ಉಳಿಸಿದ ಕೆಲಸವೇ ಆದರೂ ತಂದೆಗೆ ಮಗಳ ಸಾಹಸ ಅಷ್ಟೊಂದು ಖುಷಿ ತಂದಿಲ್ಲ. ಇದು ಪ್ರೋಮೋದಲ್ಲಿ ಕಂಡಿದೆ.
ಕನ್ನಡತಿಗೆ ಶುಭಾಶಯಗಳ ಸುರಿಮಳೆ
ಅಕ್ಷತಾ ದೇಶಪಾಂಡೆ ಬೇರೆ ಇಂಡಸ್ಟ್ರಿಗೆ ಹೋಗಿದ್ದರು, ಒಳ್ಳೆಯ ಪಾತ್ರಕ್ಕೆ ಹೋಗಿದ್ದಾರೆ. ಅವರಿಗೆ ತೂಕ ಇರುವಂತ, ಅವರ ಮೇಲೆಯೇ ನಡೆಯುವಂತ ಧಾರಾವಾಹಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಹಳೆಯ ಧಾರಾವಾಹಿಯ ತಂಡಕ್ಕೆ ಖುಷಿ ನೀಡಿದೆ. ಸ್ಟಾರ್ ಸುವರ್ಣದಲ್ಲಿ ಬರುತ್ತಿದ್ದ ಕಥೆಯೊಂದು ಶುರುವಾಗಿದೆ ಟೀಂನವರೆಲ್ಲಾ ಶುಭಾಶಯ ಕೋರಿದ್ದಾರೆ. ಅದರಲ್ಲೂ ಧಾರಾವಾಹಿಯಲ್ಲಿ ಕೃತಿಯ ತಾಯಿ ಆಗಿದ್ದ ಸುಜಾತ ಕೂಡ ಶುಭಾಶಯ ಕೋರಿದ್ದಾರೆ.

ಅಕ್ಷತಾ ಎಂಟ್ರಿಗೆ ಫ್ಯಾನ್ಸ್ ಖುಷಿ
ಫ್ಯಾನ್ಸ್ ಅಂತೂ ಹೆಚ್ಚು ಖುಷಿ ಪಟ್ಟಿದ್ದಾರೆ. 'ಕಥೆಯೊಂದು ಶುರುವಾಗಿದೆ'' ಧಾರಾವಾಹಿಯಲ್ಲೂ ಕೃತಿಯ ಪಾತ್ರವನ್ನು ಎಲ್ಲರು ಮೆಚ್ಚಿದ್ದರು. ಆಗಲೂ ಕೃತಿಗೆ ಸಪೋರ್ಟ್ ಮಾಡುತ್ತಾ ಇದ್ದರು. ಇದೀಗ ತೆಲುಗಿನಲ್ಲಿ ಅದರಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳ ಮನಸ್ಸನ್ನು ಸಹಜವಾಗಿಯೇ ಗೆದ್ದಿದೆ. ಎಲ್ಲರೂ ತಮ್ಮಿಷ್ಟದ ನಟಿಯ ನಟನೆಯನ್ನು ತೆಲುಗಿನಲ್ಲೂ ನೋಡುವುದಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಹಾರ್ಟ್ ಸಿಂಬಲ್ ಹಾಕಿ, ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಆಲ್ ದಿ ಬೆಸ್ಟ್ ಹೇಳುತ್ತಿದ್ದಾರೆ. ಹಳೆಯ ಪಾತ್ರ ತಮ್ಮನ್ನು ಹೇಗೆಲ್ಲಾ ಕಾಡಿತ್ತು ಎಂಬುದನ್ನು ತಿಳಿಸಿದ್ದಾರೆ.


Click it and Unblock the Notifications











