ಹೋಳಿ ಹಬ್ಬದ ಸಂಭ್ರಮದಲ್ಲಿ ಕಂಠಪೂರ್ತಿ ಕುಡಿದು ನಟಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ನಟ..!

ಮೊನ್ನೆ ಮೊನ್ನೆಯಷ್ಟೇ ಇಡೀ ಪ್ರಪಂಚ ಮಹಿಳಾ ದಿನಾಚರಣೆಯನ್ನು ಹೆಮ್ಮೆಯಿಂದ ಆಚರಿಸಿದೆ. ಇದೇ ಸಂದರ್ಭದಲ್ಲಿ ತನ್ನನ್ನೂ ತಾನು ಹೀರೋ ಎಂದು ಕರೆಸಿಕೊಳ್ಳುವ ವ್ಯಕ್ತಿ ನಿನ್ನೆ ಹೋಳಿ ಹಬ್ಬದ ನೆಪದಲ್ಲಿ ನಟಿಗೆ ಕೊಡಬಾರದ ಕಾಟ ಕೊಟ್ಟಿದ್ದಾನೆ. ಬಣ್ಣದ ಹೆಸರಿನಲ್ಲಿ ಬೆದರಿಕೆ ಹಾಕಿದ್ದಾನೆ. ಮಾಡಬಾರದ ಅನಾಚಾರವನ್ನೆಲ್ಲ ಮಾಡಿದ್ದಾನೆ.

ಹೌದು, ಅಸಲಿಗೆ ಬಾಲಿವುಡ್‌ನಲ್ಲಿ ಮೋಜು-ಮಸ್ತಿ ಮಾಡುವ ಬಹುದೊಡ್ಡ ಗುಂಪು ಇದೆ. ಇವರೆಲ್ಲರಿಗೆ ಎಣ್ಣೆ ಹೊಡೆಯಲು, ಕುಣಿಯಲು, ನೆಪ ಸಾಕು. ಹಬ್ಬ ಹರಿದಿನ ಬಂದರೆ ತಮ್ಮ ತಮ್ಮ ಮನೆಯಲ್ಲಿಯೇ ಎಣ್ಣೆ ಅಂಗಡಿಯನ್ನು ತೆರೆಯುವ ಅಭ್ಯಾಸ ಇವರದ್ದು. ಕಿರುತೆರೆ ಇರಲಿ ಬೆಳ್ಳಿತೆರೆ ಇರಲಿ ತಮ್ಮ ಪರಿಚಯದವರನ್ನೆಲ್ಲ ಒಂದು ಕಡೆ ಸೇರಿಸಿ ಅವರಿಗೂ ಕುಡಿಸಿ ತಾವು ಕುಡಿದು ಅಮಲಿನಲ್ಲಿ ಇವರೆಲ್ಲ ಓಡಾಡುತ್ತಾರೆ.

tv-actress-allegedly-assaulted-by-drunk-co-star-at-holi-celebration-in-mumbai

ನಿನ್ನೆ ಹೋಳಿ ಹೆಸರಿನಲ್ಲಿ ಕೂಡ ಇದೇ ನಡೆದಿದೆ.ಹೌದು,ಮುಂಬೈನ ಜೋಗೇಶ್ವರಿಯಲ್ಲಿ ಬಣ್ಣದ ಹಬ್ಬವನ್ನು ಆಚರಿಸಲು ಬಂದ ಕಿರುತೆರೆ ಚೆಲುವೆಯನ್ನು ಸುರಸುಂದರಾಂಗ ನಾಯಕನೊಬ್ಬ ಕಾಡಿದ್ದಾನೆ. ಬಣ್ಣ ಒಲವಿನ ಬಣ್ಣ ಎಂದು ಹೇಳುತ್ತಾನೆ ತನ್ನ ಲೈಂಗಿಕ ತೃಷೆಗೆ ಬಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. 29 ವರ್ಷದ ನಾಯಕಿಯನ್ನು ಬೆಂಬಿಡದಂತೆ ಕಾಡಿರುವ ಈ ಸ್ಟಾರ್ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದಾನೆ. ನನ್ನಿಂದ ನಿನ್ನನ್ನೂ ಯಾರು ಕಾಪಾಡುತ್ತಾರೆ ನೋಡಿಯೇ ಬಿಡೋಣ ಎಂದು ಬೆದರಿಕೆಯನ್ನು ಹಾಕಿದ್ದಾನೆ.

ನಟಿ ಎಷ್ಟೇ ಪ್ರತಿರೋಧ ತೋರಿದರೂ ಕೂಡ ಬಿಡದೇ ಬಲವಂತವಾಗಿ ತನಗೆ ಇಷ್ಟ ಬಂದ ಜಾಗದಲ್ಲಿ ಬಣ್ಣ ಹಚ್ಚುವುದಲ್ಲದೇ ಅಸಭ್ಯ ಮತ್ತು ಅಸಹ್ಯವಾಗಿ ಈ ಕಿರುತೆರೆ ನಟ ವರ್ತಿಸಿದ್ದಾನೆ. ಗುರುತು ಪರಿಚಯ ಇರುವ ಸಹನಟನ ಈ ನಡಾವಳಿಯಿಂದ ಕಂಗಾಲಾದ ನಟಿ ಕೊನೆಗೆ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಹೋಳಿ ಪಾರ್ಟಿಯಲ್ಲಿದ್ದ ಪಾನಿಪುರಿ ಅಂಗಡಿಯ ಹಿಂದೆ ಹೋಗಿ ಅವಿತುಕೊಂಡಿದ್ದಾರೆ.

ಆದರೂ ಬಿಡದ ಕಾಮಾಂಧ ನಟ ನಟಿಯ ಮೇಲೆ ಬಣ್ಣ ಎರಚಿದ್ದಾನೆ. ದೂರ ತಳ್ಳಿದರೂ ಕೂಡ ಹತ್ತಿರ ಬಂದು ಹಿಂಸೆ ನೀಡಿದ್ದಾನೆ. ಕೊನೆಗೆ ಬಾತ್‌ರೂಮ್‌ ನಲ್ಲಿ ಹೋಗಿ ಅಡಗಿ ಕುಳಿತ ನಟಿ ಆ ನಂತರ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಬಂದು ಕೊನೆಗೆ ಪೊಲೀಸ್ ಠಾಣೆಯ ಮೆಟ್ಟಿಲನ್ನೇರಿದ್ದಾರೆ. ಸಹನಟನ ವಿರುದ್ದ ದೂರನ್ನು ಕೂಡ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 75(1)(i) ಅಡಿಯಲ್ಲಿ ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆಯನ್ನು ಆರಂಭಿಸಿದ್ದಾರೆ. ನಟನಿಗೆ ನೊಟೀಸ್ ಜಾರಿ ಮಾಡಿ ಮರುಮಾತನಾಡದೇ ವಿಚಾರಣೆಗೆ ಬರುವಂತೆ ಹೇಳಿದ್ದಾರೆ. ನಡೆದ ಹೋಳಿ ಪಾರ್ಟಿಯ ಸಿಸಿಟಿವಿ ದೃಶ್ಯಾವಳಿಯನ್ನು ಕೂಡ ಕಲೆ ಹಾಕಿರುವ ಪೊಲೀಸರು ಪಾರ್ಟಿಯಲ್ಲಿದ್ದ ಬೇರೆಯವರ ಹೇಳಿಕೆಗಳನ್ನು ಕೂಡ ದಾಖಲಿಸಿಕೊಳ್ಳುತ್ತಿದ್ಧಾರೆ.

ಅಂದ್ಹಾಗೇ ಕಿರುಕುಳಕ್ಕೊಳಗಾದ 29 ವರ್ಷದ ನಟಿ ಮುಂಬೈ ಕಿರುತೆರೆಯಲ್ಲಿ ಪ್ರಖ್ಯಾತರಾದವರು. ಒಂದಾದ ಮೇಲೊಂದು ಧಾರಾವಾಹಿಗಳನ್ನು ಮಾಡುತ್ತಲೇ ಅಭಿಮಾನಿ ಬಳಗವನ್ನು ಸಂಪಾದಿಸಿದವರು. ಇನ್ನು ದೌರ್ಜನ್ಯವೆಸಗಿದ ನಟನ ವಯಸ್ಸು 30 ವರ್ಷವಾಗಿದ್ದು ಹೋಳಿ ಪಾರ್ಟಿಯನ್ನು ಈ ವ್ಯಕ್ತಿಯೇ ಹಮ್ಮಿಕೊಂಡಿದ್ದ ಎಂದು ನಟಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಾಗ ಆಕೆಯ ಸ್ನೇಹಿತರು ಕೂಡ ಜೊತೆಯಲ್ಲಿ ಇದ್ದರು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿಯನ್ನು ಮಾಡಿವೆ. ನಟ ಮತ್ತು ನಟಿಯ ಹೆಸರನ್ನು ಗೌಪ್ಯವಾಗಿ ಇಟ್ಟಿವೆ. ಸದ್ಯ ಈ ಪ್ರಕರಣ ಹಿಂದಿ ಕಿರುತೆರೆ ವಲಯದಲ್ಲಿ ವ್ಯಾಪಕವಾಗಿ ಚರ್ಚೆಗೀಡಾಗಿದ್ದು ಆ ನಟನ ಮೇಲೆ ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Read more about: holi harrasment filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X