ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಅಮೃತಾ ನಾಯ್ಡು!

By ಪ್ರಿಯಾ ದೊರೆ

ಹಲವು ವರ್ಷಗಳಿಂದ ಕಿರುತೆರೆಯಲ್ಲಿರುವ ನಟಿ ಅಮೃತಾ ನಾಯ್ಡು, ಇದೀಗ ಸಿಹಿ ಸಮಾಚಾರದ ಮೂಲಕ ಸುದ್ದಿ ಹಂಚಿಕೊಂಡಿದ್ದಾರೆ. ಅವರ ಮನೆಯಲ್ಲಿ ಸಂತಸ ಮನೆ ಮಾಡಿದೆ. ಮುದ್ದಾದ ಗಂಡು ಮಗುವಿಗೆ ಅಮೃತಾ ನಾಯ್ಡು ಅವರು ಜನ್ಮ ನೀಡಿದ್ದಾರೆ. ಈ ಬಗ್ಗೆ ಇನ್‌ ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕೆಲ ತಿಂಗಳ ಹಿಂದೆ ತಮ್ಮ ಮಗಳು ಸಮನ್ವಿ ಜೊತೆಗೆ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಅಮೃತಾ ಅವರು ಅಪಘಾತದಲ್ಲಿ ಮಗಳನ್ನು ಕಳೆದುಕೊಂಡಿದ್ದರು. ಆಗ ಅಮೃತಾ ಅವರು 6 ತಿಂಗಳ ಗರ್ಭಿಣಿಯಾಗಿದ್ದರು. ಮಗಳನ್ನು ಕಳೆದುಕೊಂಡು ದುಃಖದಲ್ಲಿದ್ದ ಕುಟುಂಬದಲ್ಲಿ ಈಗ ಸಂಭ್ರಮ ಮನೆ ಮಾಡಿದೆ.

ಇನ್ನು ನಟಿ ಅಮೃತಾ ಅವರು ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ನಟಿಸಿದ್ದಾರೆ. 25ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿರುವ ಅಮೃತಾ ಅವರಿಗೆ ಗಂಗೋತ್ರಿ ಸೀರಿಯಲ್‌ ಹೆಸರು ತಂದುಕೊಟ್ಟಿತ್ತು. ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬಂದ ಸತ್ಯ ಧಾರಾವಾಹಿಯಲ್ಲಿ ಊರ್ಮಿಳಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಧಾರಾವಾಹಿಗಳಲ್ಲಿ ಮಿಂಚಿರುವ ಅಮೃತಾ!

ಧಾರಾವಾಹಿಗಳಲ್ಲಿ ಮಿಂಚಿರುವ ಅಮೃತಾ!

ಅಮೃತಾ ನಾಯ್ಡು ಅವರು ಹಲವು ವರ್ಷಗಳಿಂದ ಕಿರುತೆರೆ ಲೋಕದಲ್ಲಿದ್ದಾರೆ. ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಅಮೃತಾ ಅವರಿಗೆ ಗಂಗೋತ್ರಿ ಧಾರಾವಾಹಿ ಮೂಲಕ ಚಿರಪರಿಚಿತರಾದರು. ಕುಸುಮಾಂಜಲಿ, ಮನೆಯೊಂದು ಮೂರು ಬಾಗಿಲು, ಪುಣ್ಯಕೋಟಿ, ಅಮೃತ ವರ್ಷಿಣಿ, ಗೀತಾ, ನಾಗಿಣಿ ಸೇರಿದಂತೆ 25ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದಾ ಸಾಫ್ಟ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಅಮೃತಾ ಅವರು ಪರಭಾಷೆಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ರಿಯಾಲಿಟಿ ಶೋನಲ್ಲೂ ಮಗಳ ಜೊತೆಗೆ ಕಾಣಿಸಿಕೊಂಡಿದ್ದರು.

ಅಮೃತಾ ಬಾಳಲ್ಲಿ ವಿಧಿಯಾಟ!

ಅಮೃತಾ ಬಾಳಲ್ಲಿ ವಿಧಿಯಾಟ!

ಅಮೃತಾ ನಾಯ್ಡು ಅವರು ತಂದೆ ಹರಿಕಥೆ ಹೇಳುತ್ತಾರೆ. ಈ ಕಲೆ ಅಮೃತಾ ಅವರೂ ಕಲಿತಿದ್ದು, ರೂಪೇಶ್ ಎಂಬುವರನ್ನು ವಿವಾಹವಾಗಿದ್ದಾರೆ. ಅಮೃತಾ ಅವರು ಮೊದಲ ಬಾರಿಗೆ ಗರ್ಭಿಣಿಯಾಗಿದ್ದಾಗ ಏಳೇ ತಿಂಗಳಿಗೆ ಹೆಣ್ಣು ಮಗು ಜನಿಸಿತ್ತು. ಆದರೆ ಆ ಮಗು ಏಳು ತಿಂಗಳಿಗೆ ಹುಟ್ಟಿದ್ದ ಕಾರಣ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇದನ್ನು ನೋಡಿ ನೋವು ಅನುಭವಿಸುತ್ತಿದ್ದರು, ಕೊನೆಗೆ ಆ ಮಗು ಕೇವಲ 20 ದಿನಕ್ಕೆ ಸಾವನ್ನಪ್ಪಿತ್ತು. ಈ ದುಃಖದಲ್ಲಿದ್ದ ಕುಟುಂಬಕ್ಕೆ ಸಂತೋಷ, ಸಂಭ್ರಮ ತಂದಿದ್ದೇ ಸಮನ್ವಿ.

ಅಪಘಾತದಲ್ಲಿ ಮಗಳನ್ನು ಕಳೆದುಕೊಂಡಿದ್ದರು!

ಅಪಘಾತದಲ್ಲಿ ಮಗಳನ್ನು ಕಳೆದುಕೊಂಡಿದ್ದರು!

ಅಮೃತಾ ಅವರಿಗೆ ಮೊದಲ ಮಗು ತೀರಿಕೊಂಡ ಮೇಲೆ ಮತ್ತೊಂದು ಹೆಣ್ಣು ಮಗು ಜನಿಸಿತ್ತು. ಆಕೆಗೆ ಸಮನ್ವಿ ಎಂದು ಹೆಸರಿಟ್ಟಿದ್ದರು. ಸಮನ್ವಿ ತುಂಬಾ ಆಕ್ಟಿವ್‌ ಆಗಿರುತ್ತಿದ್ದಳು. ತಾಯಿ ಮಗಳ ರಿಯಾಲಿಟಿ ಶೋನಲ್ಲಿ ಇವರಿಬ್ಬರೂ ಭಾಗವಹಿಸಿದ್ದರು. ಸಮನ್ವಿಗೆ ಹರಿಕಥೆ ಕೂಡ ಹೇಳಲು ಬರುತ್ತಿತ್ತು. ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾಗ, ಸಮನ್ವಿ ಪರ್ಫಾಮೆನ್ಸ್‌ಗೆ ಎಲ್ಲರೂ ಫಿದಾ ಆಗಿದ್ದರು. ಮುಂದೊಂದು ದಿನ ದೊಡ್ಡ ನಟಿಯಾಗುತ್ತಾಳೆ ಎನ್ನುತ್ತಿದ್ದರು. ಆದರೆ, ಅಮೃತಾ ಹಾಗೂ ಸಮನ್ವಿ ಇಬ್ಬರೂ ಬೈಕ್‌ನಲ್ಲಿ ಹೋಗುವಾಗ ಲಾರಿಯೊಂದು ಬಂದು ಡಿಕ್ಕಿ ಹೊಡೆದಿತ್ತು. ಆಗ ಸಮನ್ವಿ ತಲೆಗೆ ಏಟಾಗಿ ಸಾವನ್ನಪ್ಪಿದ್ದಳು. ಇದರಿಂದ ಅಮೃತಾ ಕುಟುಂಬದವರು ಶೋಕ ಸಾಗರದಲ್ಲಿ ಮುಳುಗಿದ್ದರು.

ಗಂಡು ಮಗುವಿಗೆ ಜನ್ಮ ನೀಡಿದ ಅಮೃತಾ!

ಸಮನ್ವಿ ತೀರಿಕೊಂಡಾಗ ಅಮೃತಾ 6 ತಿಂಗಳ ಗರ್ಭಿಣಿಯಾಗಿದ್ದರು. ತಮ್ಮ ಹೊಟ್ಟೆಯಲ್ಲಿರುವ ಮಗು ಸಮನ್ವಿಯಾಗಿರಲಿ ಎಂದು ಬಯಸಿದ್ದರು. ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದಾಗಲೂ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ಆಗ ಸಮನ್ವಿನೇ ಮತ್ತೆ ಹುಟ್ಟಿ ಬರಲಿ ಎಂದು ಬಯಸಿದ್ದರು. ನಿನ್ನೆ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಇನ್‌ ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

More from Filmibeat

English summary
Tv Actress Amrutha Naidu Blessed With Baby Boy. Shares news on Social Media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X