Don't Miss!
- News
Breaking: ಕರ್ನಾಟಕದಲ್ಲಿ 2000 ಗಡಿ ದಾಟಿದ ಕೊರೊನಾ ವೈರಸ್!
- Sports
ಮಹಾರಾಜ ಟ್ರೋಫಿ: ಮಯಾಂಕ್ ಶತಕ; 15.4 ಓವರ್ಗಳಲ್ಲಿ 176 ರನ್ ಚಚ್ಚಿ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್!
- Lifestyle
Surya Gochar 2022 : ಆ. 17ಕ್ಕೆ ಸಿಂಹದಲ್ಲಿ ಸೂರ್ಯ ಸಂಚಾರ: ದ್ವಾದಶ ರಾಶಿಗಳ ಮೇಲೆ ಬೀರುವ ಪ್ರಭಾವವೇನು?
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Automobiles
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಅಮೃತಾ ನಾಯ್ಡು!
ಹಲವು ವರ್ಷಗಳಿಂದ ಕಿರುತೆರೆಯಲ್ಲಿರುವ ನಟಿ ಅಮೃತಾ ನಾಯ್ಡು, ಇದೀಗ ಸಿಹಿ ಸಮಾಚಾರದ ಮೂಲಕ ಸುದ್ದಿ ಹಂಚಿಕೊಂಡಿದ್ದಾರೆ. ಅವರ ಮನೆಯಲ್ಲಿ ಸಂತಸ ಮನೆ ಮಾಡಿದೆ. ಮುದ್ದಾದ ಗಂಡು ಮಗುವಿಗೆ ಅಮೃತಾ ನಾಯ್ಡು ಅವರು ಜನ್ಮ ನೀಡಿದ್ದಾರೆ. ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಕೆಲ ತಿಂಗಳ ಹಿಂದೆ ತಮ್ಮ ಮಗಳು ಸಮನ್ವಿ ಜೊತೆಗೆ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಅಮೃತಾ ಅವರು ಅಪಘಾತದಲ್ಲಿ ಮಗಳನ್ನು ಕಳೆದುಕೊಂಡಿದ್ದರು. ಆಗ ಅಮೃತಾ ಅವರು 6 ತಿಂಗಳ ಗರ್ಭಿಣಿಯಾಗಿದ್ದರು. ಮಗಳನ್ನು ಕಳೆದುಕೊಂಡು ದುಃಖದಲ್ಲಿದ್ದ ಕುಟುಂಬದಲ್ಲಿ ಈಗ ಸಂಭ್ರಮ ಮನೆ ಮಾಡಿದೆ.
ಕಿರುತೆರೆ
To
ಬಾಲಿವುಡ್:
ಮಂಗಳ
ಗೌರಿ
ಮದುವೆ
ಖ್ಯಾತಿಯ
ಕೃತಿ
ಬೆಟ್ಟದ್
ಜರ್ನಿಯೇ
ರೋಚಕ!
ಇನ್ನು ನಟಿ ಅಮೃತಾ ಅವರು ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ನಟಿಸಿದ್ದಾರೆ. 25ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿರುವ ಅಮೃತಾ ಅವರಿಗೆ ಗಂಗೋತ್ರಿ ಸೀರಿಯಲ್ ಹೆಸರು ತಂದುಕೊಟ್ಟಿತ್ತು. ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬಂದ ಸತ್ಯ ಧಾರಾವಾಹಿಯಲ್ಲಿ ಊರ್ಮಿಳಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಮೊದಲ
ಮಗುವಿನ
ನಿರೀಕ್ಷೆಯಲ್ಲಿ
'ಮಂಗಳ
ಗೌರಿ
ಮದುವೆ'
ಖ್ಯಾತಿಯ
ನಟಿ
ರಾಧಿಕಾ
ಶ್ರವಂತ್

ಧಾರಾವಾಹಿಗಳಲ್ಲಿ ಮಿಂಚಿರುವ ಅಮೃತಾ!
ಅಮೃತಾ ನಾಯ್ಡು ಅವರು ಹಲವು ವರ್ಷಗಳಿಂದ ಕಿರುತೆರೆ ಲೋಕದಲ್ಲಿದ್ದಾರೆ. ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಅಮೃತಾ ಅವರಿಗೆ ಗಂಗೋತ್ರಿ ಧಾರಾವಾಹಿ ಮೂಲಕ ಚಿರಪರಿಚಿತರಾದರು. ಕುಸುಮಾಂಜಲಿ, ಮನೆಯೊಂದು ಮೂರು ಬಾಗಿಲು, ಪುಣ್ಯಕೋಟಿ, ಅಮೃತ ವರ್ಷಿಣಿ, ಗೀತಾ, ನಾಗಿಣಿ ಸೇರಿದಂತೆ 25ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದಾ ಸಾಫ್ಟ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಅಮೃತಾ ಅವರು ಪರಭಾಷೆಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ರಿಯಾಲಿಟಿ ಶೋನಲ್ಲೂ ಮಗಳ ಜೊತೆಗೆ ಕಾಣಿಸಿಕೊಂಡಿದ್ದರು.

ಅಮೃತಾ ಬಾಳಲ್ಲಿ ವಿಧಿಯಾಟ!
ಅಮೃತಾ ನಾಯ್ಡು ಅವರು ತಂದೆ ಹರಿಕಥೆ ಹೇಳುತ್ತಾರೆ. ಈ ಕಲೆ ಅಮೃತಾ ಅವರೂ ಕಲಿತಿದ್ದು, ರೂಪೇಶ್ ಎಂಬುವರನ್ನು ವಿವಾಹವಾಗಿದ್ದಾರೆ. ಅಮೃತಾ ಅವರು ಮೊದಲ ಬಾರಿಗೆ ಗರ್ಭಿಣಿಯಾಗಿದ್ದಾಗ ಏಳೇ ತಿಂಗಳಿಗೆ ಹೆಣ್ಣು ಮಗು ಜನಿಸಿತ್ತು. ಆದರೆ ಆ ಮಗು ಏಳು ತಿಂಗಳಿಗೆ ಹುಟ್ಟಿದ್ದ ಕಾರಣ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇದನ್ನು ನೋಡಿ ನೋವು ಅನುಭವಿಸುತ್ತಿದ್ದರು, ಕೊನೆಗೆ ಆ ಮಗು ಕೇವಲ 20 ದಿನಕ್ಕೆ ಸಾವನ್ನಪ್ಪಿತ್ತು. ಈ ದುಃಖದಲ್ಲಿದ್ದ ಕುಟುಂಬಕ್ಕೆ ಸಂತೋಷ, ಸಂಭ್ರಮ ತಂದಿದ್ದೇ ಸಮನ್ವಿ.

ಅಪಘಾತದಲ್ಲಿ ಮಗಳನ್ನು ಕಳೆದುಕೊಂಡಿದ್ದರು!
ಅಮೃತಾ ಅವರಿಗೆ ಮೊದಲ ಮಗು ತೀರಿಕೊಂಡ ಮೇಲೆ ಮತ್ತೊಂದು ಹೆಣ್ಣು ಮಗು ಜನಿಸಿತ್ತು. ಆಕೆಗೆ ಸಮನ್ವಿ ಎಂದು ಹೆಸರಿಟ್ಟಿದ್ದರು. ಸಮನ್ವಿ ತುಂಬಾ ಆಕ್ಟಿವ್ ಆಗಿರುತ್ತಿದ್ದಳು. ತಾಯಿ ಮಗಳ ರಿಯಾಲಿಟಿ ಶೋನಲ್ಲಿ ಇವರಿಬ್ಬರೂ ಭಾಗವಹಿಸಿದ್ದರು. ಸಮನ್ವಿಗೆ ಹರಿಕಥೆ ಕೂಡ ಹೇಳಲು ಬರುತ್ತಿತ್ತು. ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾಗ, ಸಮನ್ವಿ ಪರ್ಫಾಮೆನ್ಸ್ಗೆ ಎಲ್ಲರೂ ಫಿದಾ ಆಗಿದ್ದರು. ಮುಂದೊಂದು ದಿನ ದೊಡ್ಡ ನಟಿಯಾಗುತ್ತಾಳೆ ಎನ್ನುತ್ತಿದ್ದರು. ಆದರೆ, ಅಮೃತಾ ಹಾಗೂ ಸಮನ್ವಿ ಇಬ್ಬರೂ ಬೈಕ್ನಲ್ಲಿ ಹೋಗುವಾಗ ಲಾರಿಯೊಂದು ಬಂದು ಡಿಕ್ಕಿ ಹೊಡೆದಿತ್ತು. ಆಗ ಸಮನ್ವಿ ತಲೆಗೆ ಏಟಾಗಿ ಸಾವನ್ನಪ್ಪಿದ್ದಳು. ಇದರಿಂದ ಅಮೃತಾ ಕುಟುಂಬದವರು ಶೋಕ ಸಾಗರದಲ್ಲಿ ಮುಳುಗಿದ್ದರು.
ಗಂಡು ಮಗುವಿಗೆ ಜನ್ಮ ನೀಡಿದ ಅಮೃತಾ!
ಸಮನ್ವಿ ತೀರಿಕೊಂಡಾಗ ಅಮೃತಾ 6 ತಿಂಗಳ ಗರ್ಭಿಣಿಯಾಗಿದ್ದರು. ತಮ್ಮ ಹೊಟ್ಟೆಯಲ್ಲಿರುವ ಮಗು ಸಮನ್ವಿಯಾಗಿರಲಿ ಎಂದು ಬಯಸಿದ್ದರು. ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದಾಗಲೂ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ಆಗ ಸಮನ್ವಿನೇ ಮತ್ತೆ ಹುಟ್ಟಿ ಬರಲಿ ಎಂದು ಬಯಸಿದ್ದರು. ನಿನ್ನೆ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.