ಅಮ್ಮನ ಜೊತೆ ಸೇರಿ ಪತ್ರೊಡೆ ತಯಾರಿಸಿದ ನಟಿ ಅಮೃತಾ

By Poorva

ಅಮೃತಾ ರಾಮಮೂರ್ತಿ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. 'ಕುಲವಧು' ಧಾರಾವಾಹಿ ಮೂಲಕ ಎಲ್ಲರ ಮನಗೆದ್ದ ನಟಿ. ತಾನು ಪ್ರೀತಿ ಮಾಡಿದ ಹುಡುಗನನ್ನೇ ವರಿಸಿದ ಮುದ್ದು ಮೊಗದ ಚೆಲುವೆ. ಈಕೆಯ ನೋಟಕ್ಕೆ ಅಭಿಮಾನಿಗಳು ಫಿದಾ ಆಗುತ್ತಿರುವುದು ಸತ್ಯ. ಆಗಾಗ ಕರಾವಳಿಯ ಸೊಗಡನ್ನು ಜನರಿಗೆ ತೋರಿಸುವ ಸಣ್ಣ ಪ್ರಯತ್ನ ಮಾಡುತ್ತಾರೆ ಅಮೃತಾ.

ಮುದ್ದು ಮುದ್ದು ಮಾತುಗಳನ್ನು ಆಡುತ್ತಾ ಜನರ ಮನಗೆದ್ದ ನಟಿ. ನೋಡಲು ಸಖತ್ ಸುಂದರವಾಗಿ ಇರುವ ಈಕೆ ಇದೀಗ ನೆಗೆಟಿವ್ ರೋಲ್‌ಗಳಿಂದಲೇ ಗಮನ ಸೆಳೆಯುತ್ತಾರೆ. ಇದೀಗ 'ಕೆಂಡ ಸಂಪಿಗೆ' ಧಾರಾವಾಹಿಯಲ್ಲಿ ನೆಗೆಟಿವ್ ರೋಲ್‌ ವೀಕ್ಷಕರ ಜನರ ಕೆಂಗಣ್ಣಿಗೆ ಗುರಿ ಆಗಿದ್ದಾರೆ ಎಂದರೆ ತಪ್ಪಾಗದು, ಅಮೃತಾ ಅಷ್ಟು ಚೆನ್ನಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ.

TV actress Amrutha Ramamoorthi makes Patrode dish with moms help

ಅಮೃತಾ ರಾಮಮೂರ್ತಿ ಸಹ ನಟ ರಾಘವೇಂದ್ರ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಧೃತಿ ಎಂಬ ಮುದ್ದಾದ ಹೆಣ್ಣು ಮಗು ಕೂಡ ಇದೆ. ಇಷ್ಟು ಬ್ಯುಸಿ ಶೆಡ್ಯೂಲ್‌ನಲ್ಲಿ ಅಮೃತಾ ಯೂಟ್ಯೂಬ್ ಚಾನೆಲ್‌ನಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಮೃತಾ ಇತ್ತೀಚಿಗೆ ಯೂಟ್ಯೂಬ್ ಚಾನೆಲ್‌ಗಾಗಿ ಗಂಡನಿಗೆ ಒಂದು ಟಾಸ್ಕ್ ಕೂಡ ನೀಡಿದ್ದರು. ರಾಘವೇಂದ್ರ ಕನ್ನಡದ ಪದಗಳನ್ನು ತುಳುವಿನಲ್ಲಿ ಹೇಳುವ ಟಾಸ್ಕ್ ಅದು. ಈ ವೀಡಿಯೋ ಗಮನ ಸೆಳೆದಿತ್ತು.

ವಿಡಿಯೋ ನೋಡಿ ಅಮೃತಾಗೆ ನೆಗೆಟಿವ್ ಕಾಮೆಂಟ್ ಮಾಡಿದ್ದರು. ಇದನ್ನು ನೋಡಿದ ಅಮೃತಾ ಬಹಳ ಸಪ್ಪಗಾಗಿದ್ದರು. ಈ ಬಗ್ಗೆ ನೋವು ಹಂಚಿಕೊಂಡ ವಿಡಿಯೋ ಕೂಡ ವೈರಲ್ ಆಗಿತ್ತು. ಅಮೃತಾ ಪದೇ ಪದೆ ತುಳುನಾಡಿನ ಸೊಗಡನ್ನು ಅಲ್ಲಿನ ಆಚಾರ ವಿಚಾರಗಳನ್ನು ಜನರಿಗೆ ತೋರಿಸುವ ಪ್ರಯತ್ನ ಮಾಡುತ್ತಾರೆ.

ಪತ್ರೊಡೆ ವಿಶೇಷತೆ ತಿಳಿಸಿಕೊಟ್ಟ ನಟಿ

ಇದೀಗ ಪತ್ರೊಡೆ ಹೇಗೆ ಮಾಡುವುದು ಅದರ ವಿಶೇಷತೆ ಏನು? ಯಾವಾಗ ಇದನ್ನು ತಿನ್ನಬಹುದು? ಹೆಚ್ಚಾಗಿ ಯಾವ ತಿಂಗಳು ಇದನ್ನು ಮಾಡುತ್ತಾರೆ? ಎನ್ನುವುದನ್ನು ಅಮೃತಾ ತಿಳಿಸಿಕೊಟ್ಟಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಪತ್ರೊಡೆ ಹೇಗೆ ಮಾಡುವುದು ಎಂದು ವಿಡಿಯೋ ಮಾಡಿದ್ದಾರೆ. ಇನ್ನು ಪತ್ರೊಡೆ ಮಾಡಲು ಆಕೆಗೆ ತಾಯಿ ಸಾಥ್ ನೀಡಿದ್ದಾರೆ. ಪತ್ರೊಡೆ ಕರಾವಳಿ ಭಾಗದಲ್ಲಿ ಬಹಳ ಫೇಮಸ್ ಆಗಿರುವ ತಿಂಡಿ. ಕೆಸುವಿನ ಎಲೆಯಲ್ಲಿ ಪತ್ರೊಡೆ ಮಾಡಿದ್ದಾರೆ. ಕರಾವಳಿಯ ಜನತೆಗೆ ಮಾತ್ರ ಈ ಪತ್ರೊಡೆ ಬಗ್ಗೆ ಚೆನ್ನಾಗಿ ತಿಳಿದಿದೆ.

TV actress Amrutha Ramamoorthi makes Patrode dish with moms help

ಮಳೆಗಾಲದಲ್ಲಿ ಸವಿಯುವ ತಿಂಡಿ

ಅಮೃತಾ ಮೂಲತಃ ಕರಾವಳಿಯವರು. ಹಾಗಾಗಿ ಆಕೆಗೆ ಅಲ್ಲಿನ ತಿಂಡಿ ತಿನಿಸುಗಳ ಬಗ್ಗೆ ಹೆಚ್ಚಿನ ಪರಿಚಯ ಇರುತ್ತದೆ. ಇನ್ನು ಈ ತಿಂಡಿಯನ್ನು ಒಮ್ಮೆ ತಿಂದರೆ ಮತ್ತೊಮ್ಮೆ ತಿನ್ನಬೇಕು ಎನ್ನುವ ಆಸೆ ಹೆಚ್ಚಾಗುತ್ತಾ ಇರುತ್ತದೆ . ಈ ಪತ್ರೊಡೆ ತಿಂಡಿಯನ್ನು ಮಳೆಗಾಲದಲ್ಲಿ ಹೆಚ್ಚಾಗಿ ಮಾಡುತ್ತಾರೆ. ಕರಾವಳಿಯಲ್ಲಿ ವರ್ಷಕ್ಕೆ ಒಮ್ಮೆಯಾದರೂ ಈ ತಿಂಡಿಯನ್ನು ಮಾಡುತ್ತಾರೆ. ಮಾನ್ಸೂನ್ ವೇಳೆ ಪತ್ರೊಡೆ ಮಾಡುವ ಕೆಸುವಿನ ಎಲೆ ಹೆಚ್ಚು ಸಿಗುವುದರಿಂದ ಮಳೆಗಾಲ ಬಂದಾಗ ಈ ತಿಂಡಿ ನೆನಪಾಗುತ್ತೆ.

ಅಮೃತಾಗೆ ಸಾಥ್ ನೀಡಿದ ತಾಯಿ

ಇನ್ನು ಈ ತಿಂಡಿಯನ್ನು ಜನರಿಗೆ ಪರಿಚಯ ಮಾಡಬೇಕು ಎನ್ನುವುದು ಅಮೃತಾ ಆಸೆ. ಇದಕ್ಕೆ ಆಕೆಯ ತಾಯಿ ಕೂಡ ಸಾಥ್ ನೀಡಿದ್ದಾರೆ. ಪತ್ರೋಡೆಯನ್ನು ಹೇಗೆ ಡಿಫರೆಂಟ್ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅಮ್ಮನ ಜೊತೆ ಫನ್ ಮಾಡುತ್ತಾ ಬಹಳ ಖುಷಿಯಲ್ಲಿ ಅಮೃತಾ ಎಂಜಾಯ್ ಮಾಡಿದರು. ವಿಡಿಯೋ ನೋಡಿದ ಅಭಿಮಾನಿಗಳಿಗೆ ಇಷ್ಟವಾಗಿದೆ. ಪತ್ರೊಡೆಯನ್ನು ಹೇಗೆ ಮಾಡಬೇಕು ಎನ್ನುವ ಐಡಿಯಾ ಕೂಡ ಸಿಕ್ಕಂತಾಗಿದೆ. ಗ್ಯಾಸ್ಟಿಕ್ ಇರುವವರು ಇದನ್ನು ಹೆಚ್ಚಾಗಿ ತಿನ್ನಬೇಡಿ ಎಂದು ಅಮೃತಾ ತಾಯಿ ಜನರಿಗೆ ಸಲಹೆ ಮಾಡುತ್ತಾರೆ. ಒಟ್ಟಾರೆ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

More from Filmibeat

English summary
actress Amrutha Ramamoorthi cooked Patrode, video goes viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X