ಖುಷಿ ಸುದ್ದಿ ಹಂಚಿಕೊಂಡು ಹಿರಿ ಹಿರಿ ಹಿಗ್ಗಿದ ಅಮೃತಾ ರಾಮಮೂರ್ತಿ
ಅಮೃತಾ ರಾಮಮೂರ್ತಿ ಕನ್ನಡ ಕಿರುತೆರೆ ಹಾಗೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ನಟಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಕೆಂಡಸಂಪಿಗೆ' ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ.
ನಟಿ ಅಮೃತಾ ರಾಮಮೂರ್ತಿ ನಟನೆ, ಮನೆ, ಮಗು ಹಾಗೂ ಸೋಶಿಯಲ್ ಮೀಡಿಯಾಗಷ್ಟೇ ಮೀಸಲಾಗಿರದೇ, ತಮ್ಮದೇ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಹೊಂದಿದ್ದಾರೆ.

ಪ್ರತಿ ತಿಂಗಳು ಕನಿಷ್ಠ ಎಂದರೂ ತಮ್ಮ ಯೂಟ್ಯೂಬ್ ಚಾನೆಲ್‌ಗೆ 5 ವೀಡಿಯೋಗಳನ್ನು ಅಪ್‌ಲೋಡ್ ಮಾಡುವ ಅಮೃತಾ ರಾಮಮೂರ್ತಿ ವೀಕ್ಷಕರಿಗೆ ಹೊಸ ಹೊಸ ವಿಚಾರಗಳನ್ನು ತಿಳಿಸಿಕೊಡುತ್ತಿರುತ್ತಾರೆ.
147 ವೀಡಿಯೋಸ್, ಲಕ್ಷ ಚಂದಾದಾರರು
2012ರಲ್ಲೇ ನಟಿ ಅಮೃತಾ ರಾಮಮೂರ್ತಿ ಯೂಟ್ಯೂಬ್ ಚಾನೆಲ್ ಅನ್ನು ತೆರೆದಿದ್ದರು. ಆದರೆ, ಅಷ್ಟೇನು ಆಕ್ಟೀವ್ ಇರದ ನಟಿ, ಕೋವಿಡ್ ನಂತರದಲ್ಲಿ ಯೂಟ್ಯೂಬ್‌ನಲ್ಲಿ ಹೆಚ್ಚೆಚ್ಚು ವೀಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದರು. ಇಂದಿನವರೆಗೂ ತಮ್ಮ ಯೂಟ್ಯೂಬ್ ಚಾನೆಲ್ ಗೆ 147 ವೀಡಿಯೋ ಅಪ್ ಲೋಡ್ ಮಾಡಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಚಂದಾದಾರನ್ನು ಹೊಂದಿದ್ದಾರೆ. ಈ ಬಗ್ಗೆ ಫುಲ್ ಖುಷಿಯಾಗಿದ್ದಾರೆ. ಈ ಬಗ್ಗೆ ತಮ್ಮ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ತಿಳಿಸಿದ್ದಾರೆ.
ವೀಕ್ಷಕರಿಗೆ ಇಷ್ಟಗುವಂತಹ ವೀಡಿಯೋಗಳು
ಇನ್ನು ನಟಿ ಅಮೃತಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮೇಕಪ್, ಅಡುಗೆ ರೆಸಿಪಿಗಳು, ಶಾಪಿಂಗ್ ಟಿಪ್ಸ್, ಶಾಪಿಂಗ್ ಅಂಗಡಿಗಳು ಹಾಗೂ ಬಾಣಂತನದ ಟಿಪ್ಸ್ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ವೀಡಿಯೋ ಮಾಡಿ ಅಪ್ ಲೋಡ್ ಮಾಡಿದ್ದಾರೆ. ಎಲ್ಲಿ ಚೀಪ್ ಆಗಿ ಬಟ್ಟೆ ಸಿಗುತ್ತವೆ ಎಂಬ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ. ಇಷ್ಟೇ ಅಲ್ಲದೇ, ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ನಟಿ ಅಮೃತಾ ರೀಲ್ಸ್ ಮಾಡುತ್ತಿರುತ್ತಾರೆ. ಸಂಸಾರ, ನಟನೆ ಜೊತೆಗೆ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ.
ಕಿರುತೆರೆ ನಟನೊಂದಿಗೆ ವಿವಾಹ
ಅಮೃತಾ ರಾಮಮೂರ್ತಿಗೆ 'ಕುಲವಧು' ಸೀರಿಯಲ್ ಖ್ಯಾತಿ ತಂದುಕೊಟ್ಟಿತ್ತು. ಇದಲ್ಲದೇ 'ಮಿಸ್ಟರ್ ಆಂಡ್ ಮಿಸೆಸ್ ರಂಗೇಗೌಡ' ಧಾರಾವಾಹಿಯಲ್ಲಿ ನಟಿಸಿದ್ದ ಇವರು ನಟ ರಾಘವೇಂದ್ರ ಜೊತೆಗೆ ತೆರೆ ಹಂಚಿಕೊಂಡಿದ್ದರು. ಆಗಲೇ ಇವರಿಬ್ಬರ ನಡುವೆ ಪ್ರೀತಿ ಮೊಳಕೆ ಹೊಡೆದು ಮುಂದೆ ವೈವಾಹಿಕ ಜೀವನಕ್ಕೂ ಕಾಲಿಟ್ಟರು. ರಾಘವೇಂದ್ರ ಕೂಡ ಕಿರುತೆರೆ ನಟರಾಗಿದ್ದು, ಇಬ್ಬರಿಗೂ ಒಂದು ಮುದ್ದಾದ ಹೆಣ್ಣು ಮಗುವಿದೆ. ಅಮೃತಾ 'ಕಸ್ತೂರಿ ನಿವಾಸ' ಧಾರವಾಹಿಯಲ್ಲೂ ನಟಿಸಿದ್ದರು. ಬಳಿಕ 'ಮನಸಾರೆ' ಧಾರಾವಾಹಿಯಿಂದ ಹೊರಬಂದು ದೊಡ್ಡ ಬ್ರೇಕ್ ತೆಗೆದುಕೊಂಡಿದ್ದರು. ಸದ್ಯ 'ಕೆಂಡಸಂಪಿಗೆ' ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನು ಅಮೃತಾ ಹಾಗೂ ರಾಘವೇಂದ್ರ 2019ರಲ್ಲಿ ಮದುವೆಯಾದರು. ರಾಘವೇಂದ್ರ ಸದ್ಯ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. 'ನಮ್ಮನೆ ಯುವರಾಣಿ' ಧಾರಾವಾಹಿ ರಾಘವೇಂದ್ರಗೆ ಹೆಸರು ತಂದುಕೊಟ್ಟ ಸೀರಿಯಲ್. ಇದಕ್ಕೂ ಮುನ್ನ ರಾಘು 'ಜೀವನ ಚೈತ್ರ', 'ದೇವಯಾನಿ' ಧಾರಾವಾಹಿಗಳಲ್ಲೂ ನಟಿಸಿದ್ದರು. ತೆಲುಗಿನ 'ಚಿರಂಜೀವಿ ಲಕ್ಷ್ಮಿ ಸೌಭಾಗ್ಯವತಿ' ಸೀರಿಯಲ್‌ನಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ.


Click it and Unblock the Notifications











