ಸೀರಿಯಲ್ ನಟನ ಜೊತೆಗೆ ಮದುವೆ ಮಾಡಿಕೊಂಡ ಕಿರುತೆರೆ ನಟಿ ಅನುಷಾ ಹೆಗ್ಡೆ
ಕನ್ನಡ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿದ್ದ ಧಾರಾವಾಹಿಯೊಂದರಲ್ಲಿ ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದ ನಟಿ ಅನುಷಾ ಹೆಗ್ಡೆ ಇದೀಗ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಕಿರುತೆರೆ ನಟ ಪ್ರತಾಪ್ ಸಿಂಗ್ ಶಾ ಜೊತೆಗೆ ವೈವಾಹಿಕ ಬದುಕಿಗೆ ಅನುಷಾ ಹೆಗ್ಡೆ ನಾಂದಿ ಹಾಡಿದ್ದಾರೆ.
ಅಸಲಿಗೆ, ತೆಲುಗಿನ ಸೀರಿಯಲ್ ವೊಂದರಲ್ಲಿ ಅನುಷಾ ಹೆಗ್ಡೆ ಮತ್ತು ಪ್ರತಾಪ್ ಸಿಂಗ್ ಶಾ ಒಟ್ಟಿಗೆ ಅಭಿನಯಿಸುತ್ತಿದ್ದರು. ಸೀರಿಯಲ್ ಶೂಟಿಂಗ್ ನಡುವೆಯೇ ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿದೆ. ಇಬ್ಬರ ಪ್ರೀತಿಗೆ ಕುಟುಂಬದವರು ಸಮ್ಮತಿ ನೀಡಿದ್ದು, ಅನುಷಾ ಹೆಗ್ಡೆ ಮತ್ತು ಪ್ರತಾಪ್ ಸಿಂಗ್ ಶಾ ವಿವಾಹ ಮಹೋತ್ಸವ ಅದ್ಧೂರಿಯಾಗಿ ಜರುಗಿದೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನುಷಾ-ಪ್ರತಾಪ್ ಸಿಂಗ್
ಕಿರುತೆರೆ ನಟಿ ಅನುಷಾ ಹೆಗ್ಡೆ ಮತ್ತು ಕಿರುತೆರೆ ನಟ ಪ್ರತಾಪ್ ಸಿಂಗ್ ಶಾ ಇತ್ತೀಚೆಗೆಷ್ಟೇ ಹೊಸ ಜೀವನ ಆರಂಭಿಸಿದರು. ಇಬ್ಬರ ಮದುವೆ ಮೊನ್ನೆಮೊನ್ನೆಯಷ್ಟೇ ಗ್ರ್ಯಾಂಡ್ ಆಗಿ ನಡೆದಿದೆ.

ಕಿರುತೆರೆ ನಟ-ನಟಿಯರು ಸಾಕ್ಷಿ
ಮದುವೆಯ ದಿನ ಗೋಲ್ಡನ್ ಮತ್ತು ಕೆಂಪು ಬಣ್ಣದ ಕಾಂಬಿನೇಶನ್ ಇರುವ ಉಡುಗೆಯಲ್ಲಿ ವಧು ಅನುಷಾ ಹೆಗ್ಡೆ ಮತ್ತು ವರ ಪ್ರತಾಪ್ ಸಿಂಗ್ ಶಾ ಮಿಂಚಿದರು. ಇಬ್ಬರ ಮದುವೆಗೆ ಕಿರುತೆರೆ ಲೋಕದ ನಟ-ನಟಿಯರು, ಕುಟುಂಬಸ್ಥರು, ಬಂಧು-ಮಿತ್ರರು ಸಾಕ್ಷಿ ಆದರು.

ಪ್ರಪೋಸ್ ಮಾಡಿದ್ದು ಪ್ರತಾಪ್ ಸಿಂಗ್ ಶಾ
ಕಳೆದ ವರ್ಷ ನಡೆದ ತೆಲುಗು ವಾಹಿನಿಯ ಅವಾರ್ಡ್ ಫಂಕ್ಷನ್ ಕಾರ್ಯಕ್ರಮದಲ್ಲಿ, ವೇದಿಕೆ ಮೇಲೆಯೇ ಅನುಷಾ ಹೆಗ್ಡೆಗೆ ಪ್ರತಾಪ್ ಸಿಂಗ್ ಶಾ ಪ್ರಪೋಸ್ ಮಾಡಿದ್ದರು. ಮಂಡಿಯೂರಿ ಅನುಷಾ ಹೆಗ್ಡೆ ಕೈಬೆರಳಿಗೆ ಪ್ರತಾಪ್ ಸಿಂಗ್ ಶಾ ಉಂಗುರ ತೊಡಿಸಿದ್ದರು.

ಯಾರು ಈ ಪ್ರತಾಪ್ ಸಿಂಗ್ ಶಾ.?
ಮೂಲತಃ ಉತ್ತರ ಭಾರತದವರಾದರೂ ಪ್ರತಾಪ್ ಸಿಂಗ್ ಶಾ ಹೈದರಾಬಾದ್ ನಲ್ಲಿ ವಾಸಿಸುತ್ತಿದ್ದಾರೆ. ತೆಲುಗಿನ ಸೀರಿಯಲ್ ಗಳಲ್ಲಿ ಪ್ರತಾಪ್ ಸಿಂಗ್ ಶಾ ನಟಿಸುತ್ತಿದ್ದಾರೆ. ರಜಪೂತ ಸಮುದಾಯದವರಾದ ಪ್ರತಾಪ್ ಸಿಂಗ್ ಶಾ... ಪುತ್ತೂರು ಬೆಡಗಿ ಅನುಷಾ ಹೆಗ್ಡೆಯ ಪತಿಯಾಗಿದ್ದಾರೆ.


Click it and Unblock the Notifications











