Apoorva Bhardwaj:'BAD' ಸಿನಿಮಾ ಮೂಲಕ ಸದ್ದು ಮಾಡಲು ಹೊರಟ ನಟಿ ಅಪೂರ್ವ ಭಾರದ್ವಾಜ್ ಹಿನ್ನೆಲೆ ಏನು?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ನಾಯಕಿ ಇಷ್ಟ ಪಾತ್ರದಲ್ಲಿ ನಟಿಸಿದ್ದ ಅಪೂರ್ವ ಭಾರಧ್ವಾಜ್ ಸದ್ಯ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ತೆರೆಕಂಡ ಕುಮಾರ್ ಎಲ್ ನಿರ್ದೇಶನದ 'ಕ್ರಿಟಿಕಲ್ ಕೀರ್ತನೆಗಳು' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಅಪೂರ್ವ ಭಾರದ್ವಾಜ್ ಇದೀಗ ಮಗದೊಂದು ಸಿನಿಮಾದಲ್ಲಿ ನಾಯಕಿತಾಗಿ ಮೋಡಿ ಮಾಡಲಿದ್ದಾರೆ.
ಪಿ.ಸಿ. ಶೇಖರ್ ನಿರ್ದೇಶನದ BAD ಸಿನಿಮಾದಲ್ಲಿ ಅನು ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಟಿ ಅಪೂರ್ವ ಭಾರದ್ವಾಜ್. BAD ಸಿನಿಮಾದಲ್ಲಿ ಅರಿಷಡ್ವರ್ಗಳಾಗಿರುವ ಕಾಮ, ಕ್ರೋಧ ಮುಂತಾದವುಗಳನ್ನು ಪ್ರತಿನಿಧಿಸುವ ಆರು ಪಾತ್ರಗಳಿದ್ದು ಅದರಲ್ಲಿ ಕಾಮವನ್ನು ಅನು ಪಾತ್ರದ ಮೂಲಕ ತೋರಿಸಲಾಗಿದೆ.

ಟೆಕ್ನಿಷಿಶನ್ ಆಗಿ ಕಿರುತೆರೆಗೆ ಎಂಟ್ರಿ
ಸಂವಹನ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಪೂರ್ವ ಭಾರದ್ವಾಜ್‌ಗೆ ಮೊದಲಿನಿಂದಲೂ ನಟನೆಯತ್ತ ವಿಶೇಷ ಒಲವಿರಲಿಲ್ಲ. ಟೆಕ್ನಿಷಿಯನ್ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟ ಅಪೂರ್ವ ಮುಂದೆ ಸ್ಡಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅನುರೂಪ' ಧಾರಾವಾಹಿಗೆ ಆಯ್ಕೆ ಆಗಲು ಆಡಿಶನ್ ನೀಡಿದ ಅಪೂರ್ವ ಭಾರಧ್ವಾಜ್ ಸುನೈನಾ ಪಾತ್ರದ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸಿದರು.
ಸಾಲು ಸಾಲು ಧಾರಾವಾಹಿಗಳಲ್ಲಿ ಮೋಡಿ
'ಅನುರೂಪ' ಧಾರಾವಾಹಿಯ ನಂತರ 'ಚಕ್ರವ್ಯೂಹ', 'ಗಿರಿಜಾ ಕಲ್ಯಾಣ', 'ವಾರಸ್ದಾರ' ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಅಪೂರ್ವ ಭಾರಧ್ವಾಜ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ನಾಯಕಿ ಇಷ್ಟ ಆಗಿ ಕಾಣಿಸಿಕೊಂಡರು. ತದ ನಂತರ ಕಿರುತೆರೆಯಿಂದ ದೂರವಿದ್ದ ಅಪೂರ್ವ ಬೆಳ್ಳಿತೆರೆಯಲ್ಲಿ ಬ್ಯುಸಿಯಾದರು.

ಸಿನಿಮಾಗಳಲ್ಲಿ ಮೋಡಿ
'ಮಿರ್ಚಿ ಮಂಡಕ್ಕಿ ಖಡಕ್ ಚಾಯ್', 'ಡಬಲ್ ಧಮಾಕಾ', 'ಅಭ್ಯಂಜನ', 'ಉಪ್ಪಿನ ಕಾಗದ', 'ನೋಡಿ ಸ್ವಾಮಿ ಇರೋದು ಹೀಗೆ', 'ಕ್ರಿಟಿಕಲ್ ಕೀರ್ತನೆಗಳು' ಹಾಗೂ 'ನಾನು ಅವನು ಮತ್ತೆ ಸರೋಜ' ಸಿನಿಮಾದಲ್ಲಿ ಬಣ್ಣ ಹಚ್ಚಿದರು. ಇದೀಗ 'BAD' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿರುವ ಅಪೂರ್ವ ಭಾರದ್ವಾಜ್ ಅವರಿಗೆ ಅಭಿನಯಿಸಲು ಕಿರುತೆರೆ, ಹಿರಿತೆರೆ ಆಗಬೇಕು ಎಂದೇನಿಲ್ಲ. ಬದಲಿಗೆ ಉತ್ತಮ ಅವಕಾಶಗಳು ಬಂದರೆ ಆಕೆ ನಟಿಸಲು ತಯಾರಿದ್ದಾರೆ.


Click it and Unblock the Notifications











