Ashita Chandrappa: ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಜೊತೆ ಜೊತೆಯಲಿ ನಟಿ ಆಶಿತಾ ಚಂದ್ರಪ್ಪ

By Poorva

ಜೊತೆ ಜೊತೆಯಲಿ ಧಾರಾವಾಹಿ ನಟಿ ಆಶಿತಾ ಚಂದ್ರಪ್ಪ ಇದೀಗ ಗುಡ್ ನ್ಯೂಸ್ ನೀಡಿದ್ದಾರೆ. ಕೆಲವು ದಿನಗಳ ಹಿಂದಯಷ್ಟೇ ಇವರು ತನ್ನ ಸೀಮಂತ ಶಾಸ್ತ್ರವನ್ನು ಆಚರಣೆ ಮಾಡಿಕೊಂಡಿದ್ದರು. ಇದೀಗ ಆಶಿತಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ನಟಿ ಆಶಿತಾ ಚಂದ್ರಪ್ಪ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಆಶಿತಾ ಚಂದ್ರಪ್ಪ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿ ತಾಯಿಯಾದ ಖುಷಿಯಲ್ಲಿ ಇದ್ದಾರೆ. ಇನ್ನೂ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೆಣ್ಣು ಮಗು ಜನಿಸಿದ ಬಗ್ಗೆ ಅಭಿಮಾನಿಗಳ ಬಳಿ ಸಂತಸ ಹಂಚಿಕೊಂಡಿದ್ದಾರೆ. ಮನೆಗೆ ಮಹಾಲಕ್ಷ್ಮೀ ಆಗಮನ ಆಗಿರುವುದರ ಕುರಿತು ಮಾಹಿತಿ ನೀಡಿದ್ದಾರೆ.

TV Actress Ashita Chandrappa blessed with baby girl

ಕೆಲವು ದಿನಗಳ ಹಿಂದೆ ಸೀಮಂತ ಶಾಸ್ತ್ರದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಫೋಟೋಗಳನ್ನು ನೋಡಿದ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿತ್ತು. ಆಶಿತಾ ಚಂದ್ರಪ್ಪ ಮದುವೆ ಆದ ಬಳಿಕ ಬಣ್ಣದ ಲೋಕದಿಂದ ಕೊಂಚ ದೂರ ಸರಿದಿದ್ದರು.

ಆಶಿತಾ ಚಂದ್ರಪ್ಪ 2021ರ ವರ್ಷದ ಅಂತ್ಯದಲ್ಲಿ ಉದ್ಯಮಿ ರೋಹನ್ ರಾಘವೇಂದ್ರ ಅವರನ್ನು ಮದುವೆ ಆಗಿದ್ದರು. ಅದಾದ ಬಳಿಕ ವೈಯಕ್ತಿಕ ಜೀವನದತ್ತ ಹೆಚ್ಚು ಗಮನ ಹರಿಸಿದರು.

ಜೊತೆ ಜೊತೆಯಲಿ ಧಾರವಾಹಿ ಮೂಲಕ ಮನೆ ಮಾತಾದ ನಟಿ

ಆಶಿತಾ ಚಂದ್ರಪ್ಪ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದ್ದರು. ಇವರ ನಟನೆ ನೋಡಿ ಅಭಿಮಾನಿಗಳು ಹುಟ್ಟುಕೊಂಡಿದ್ದರು. ಜೊತೆ ಜೊತೆಯಲಿ ಧಾರವಾಹಿಯಲ್ಲಿ ವಿರಾಟ್ ಗೆ ಜೋಡಿಯಾಗಿ ಆಶಿತಾ ಚಂದ್ರಪ್ಪ ಕಾಣಿಸಿಕೊಂಡಿದ್ದರು. ಇನ್ನೂ ಈ ಧಾರವಾಹಿ ಆಶಿತಾ ಚಂದ್ರಪ್ಪಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಆ ಬಳಿಕ ರಾಧ ರಾಮಣ ಧಾರಾವಾಹಿಯಲ್ಲಿ ಬಹಳ ಅದ್ಭುತವಾಗಿ ನಟನೆ ಮಾಡಿದರು. ರಮಣನ ತಂಗಿಯಾಗಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದರು.

TV Actress Ashita Chandrappa blessed with baby girl

ಬಿಗ್ ಬಾಸ್‌ಗೆ ಎಂಟ್ರಿಯಾಗಿದ್ದ ನಟಿ

ಅದಾದ ಬಳಿಕ ಬಿಗ್ ಬಾಸ್ ಸೀಸನ್ 5 ಗೆ ಆಶಿತಾ ಚಂದ್ರಪ್ಪ ಎಂಟ್ರಿ ನೀಡಿದ್ದರು. ಬಿಗ್ ಬಾಸ್ ಬಳಿಕ ಆಶಿತಾ ಚಂದ್ರಪ್ಪ ಜನ ಮನ ಗೆದ್ದಿದ್ದರು. ಅಷ್ಟರ ಮಟ್ಟಿಗೆ ಈ ರಿಯಾಲಿಟಿ ಶೋನಲ್ಲಿ ಆಟವಾಡಿದ್ದರು. ಕೆಲವರು ಆಶಿತಾ ಚಂದ್ರಪ್ಪ ಅವರನ್ನು ತೆಗಳಿದರೆ ಇನ್ನೂ ಕೆಲವರು ಮಾತ್ರ ಬಹಳ ಚೆನ್ನಾಗಿ ಆಟವಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಬಿಗ್‌ಬಾಸ್ ಮನೆಯಿಂದ ಬಂದ ಬಳಿಕ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.

ಬಣ್ಣದ ಲೋಕದಿಂದ ದೂರ ಸರಿದ ನಟಿ

ಮದುವೆ ಆದ ಬಳಿಕ ಅವರು ಬಣ್ಣದ ಬದುಕಿನಿಂದ ಬಹಳಷ್ಟು ದೂರ ಸರಿದಿರುವ ಹಾಗೆ ಕಾಣುತ್ತದೆ. ಇದರಿಂದ ಆಶಿತಾ ಚಂದ್ರಪ್ಪ ಅವರ ಅಭಿಮಾನಿಗಳು ಕೊಂಚ ಬೇಸರಗೊಂಡಿದ್ದರು.

More from Filmibeat

English summary
Actress Ashita Chandrappa blessed with baby girl.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X