ಬೈಕ್ ಮೇಲೆ ನಿಂತು ನಟಿ ಭವ್ಯಾ ಗೌಡ ಟ್ರೆಂಡಿ ಫೋಟೊಶೂಟ್

ಗಗನ ಸಖಿ ಆಗಬೇಕೆಂಬ ಹಂಬಲ ಬಹಳ ಇದ್ದರೂ ಮನೆಯವರ ಒತ್ತಾಯಕ್ಕೆ ಮಣಿದು ನಟನಾ ಲೋಕಕ್ಕೆ ಕಾಲಿಟ್ಟವರೇ ಗೀತಾ ಧಾರಾವಾಹಿಯ ನಟಿ ಭವ್ಯಾ ಗೌಡ.

ಆಕೆಯ ತಂದೆ ತಾಯಿ ಮಗಳು ನಟನಾ ಲೋಕದಲ್ಲಿ ಮಿಂಚಬೇಕು ಎಂಬ ಆಸೆ ಹೊಂದಿದ್ದರು. ತಂದೆ ತಾಯಿ ಆಸೆಯಂತೆ ಸಂಪೂರ್ಣವಾಗಿ ನಟನೆಯತ್ತ ವಾಲಿದ ನಟಿ ಕಳೆದ ನಾಲ್ಕು ವರ್ಷದಿಂದ ಕಿರುತೆರೆಯಲ್ಲಿದ್ದಾರೆ.

TV Actress bhavya gowda shares throwback photoshoot pics

ಗೀತಾ ಧಾರಾವಾಹಿ ಮೂಲಕ ಮನೆ ಮಾತಾಗಿರುವ ಭವ್ಯಾ ಗೌಡ ಸ್ಯಾಂಡಲ್‌ವುಡ್‌ನಲ್ಲೂ ಬಣ್ಣ ಹಚ್ಚಿದ್ದಾರೆ. ಆದರೆ ಹೆಸರು ತಂದುಕೊಟ್ಟ ಮೊದಲ ಧಾರಾವಾಹಿಯ ಜೊತೆಗಿನ ಪಯಣ ಇನ್ನೂ ಮುಂದುವರೆದಿದೆ.

ಟಾಪ್ ನಟಿಯಲ್ಲಿ ಒಬ್ಬರು ಭವ್ಯ

ಭವ್ಯಾ ಗೌಡ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. 1996, ನವೆಂಬರ್ 17ರಂದು ಬೆಂಗಳೂರಿನಲ್ಲಿ ಜನಿಸಿದರು. ಬಿಕಾಂ ಮುಗಿಸಿರುವ ಈಕೆ ಟಿಕ್‌ಟಾಕ್‌ನಲ್ಲಿ ಲಿಪ್ ಸಿಂಕ್ ಮಾಡುವ ಮೂಲಕ ಖ್ಯಾತಿ ಗಳಿಸಿದ್ದರು. 2020ರಲ್ಲಿ ಗೀತಾ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆ ಎಂಟ್ರಿಕೊಟ್ಟ ಈ ನಟಿ, ಸದ್ಯ ಕನ್ನಡ ಕಿರುತೆರೆಯ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹೀರೋಯಿನ್‌ಗಳಿfಎ ಕಿರುತೆರೆಯಲ್ಲಿ ನಟಿಸುತ್ತಿರುವಾಗ ಬೆಳ್ಳಿ ಪರದೆಯಲ್ಲಿ ನಟಿಸೋಕೆ ಆಫರ್ ಬರೋದು ಕಾಮನ್.

ಆಫರ್‌ಗಾಗಿ ಕಾಯುತ್ತಿರುವ ನಟಿ

ಕಿರುತೆರೆಯಿಂದ ಹಿರಿತೆರೆಗೆ ಬಂದು ಮಿಂಚಿದ ಅನೇಕ ಕಲಾವಿದರಿದ್ದಾರೆ. ಈ ಸಾಲಿಗೆ ಗೀತಾ ಧಾರಾವಾಹಿ ಮೂಲಕ ಮನೆ ಮಾತಾಗಿರುವ ಭವ್ಯಾ ಗೌಡ ಕೂಡ ಸೇರ್ಪಡೆ ಆಗಿದ್ದಾರೆ. ಕಿರುತೆರೆಯಲ್ಲಿ ತಮ್ಮದೇ ಛಾಫು ಮೂಡಿಸಿರುವ ಭವ್ಯಾ ಗೌಡ, ಸ್ಯಾಂಡಲ್‌ವುಡ್‌ಗೂ ಎಂಟ್ರಿಕೊಟ್ಟಿದ್ದಾರೆ. ವಿಸ್ಮಯಾ ಗೌಡ ನಿರ್ದೇಶನದ 'ಡಿಯರ್ ಕಣ್ಮಣಿ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನು ಒಳ್ಳೆಯ ಅವಕಾಶಗಳಿಗಾಗಿ ಕಾಯುತ್ತಿದ್ದು, ಸದ್ಯ ಗೀತಾ ಧಾರಾವಾಹಿಯಲ್ಲಿ ಭಾನುಮತಿ ವಿರುದ್ಧ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.

ಹೆಸರು ತಂದುಕೊಟ್ಟ ಧಾರಾವಾಹಿ ಗೀತಾ

ಇನ್ನು ನಟಿ ಭವ್ಯಾ ಗೀತಾ ಧಾರಾವಾಹಿಯಲ್ಲಿ ಒಂದು ದಿನ ಧರಿಸಿದ ಬಟ್ಟೆ ಮತ್ತೊಂದು ದಿನ ಹಾಕಿರಲಿಲ್ಲವಂತೆ. ಈಗಾಗಲೇ ಮೂರು ಸಾವಿರಕ್ಕೂ ಹೆಚ್ಚು ಬಟ್ಟೆಗಳನ್ನು ಹೊಂದಿದ್ದರು. ಮನೆ ತುಂಬಾ ಬರೀ ಬಟ್ಟೆಗಳೇ ಕಾಣಿಸುತ್ತವೆ ಎಂದು ಭವ್ಯ ಹೇಳಿಕೊಂಡಿದ್ದರು. ಗೀತಾ ಧಾರಾವಾಹಿಯಿಂದ ಆಕೆಗೆ ಉತ್ತಮ ಹೆಸರು ಕೂಡ ಸಿಕ್ಕಿದೆ. ಆ ಮುದ್ದಾದ ನಟನೆಗೆ ವೀಕ್ಷಕರು ಫಿದಾ ಆಗಿದ್ದಾರೆ. ಇನ್ನೊಂದು ವಿಚಾರ ಎಂದರೆ, ಭವ್ಯಾ ಸ್ಯಾಂಡಲ್‌ವುಡ್‌ ಗೋಲ್ಡನ್‌ ಕ್ವೀನ್‌ ಅಮೂಲ್ಯ ಸಂಬಂಧಿಕರು ಎಂಬುದು. ಆದರೆ, ಆಕೆ ಎಂದಿಗೂ ಈ ವಿಚಾರ ಎಲ್ಲೂ ಹೇಳಿಕೊಂಡಿಲ್ಲ.

TV Actress bhavya gowda shares throwback photoshoot pics

ಫೋಟೋಶೂಟ್‌ನಲ್ಲಿ ಮಿಂಚಿಂಗ್

ಇನ್ನು ಭವ್ಯಾ ಗೌಡ ಆಗಾಗ ಫೋಟೋ ಶೂಟ್ ಮಾಡಿಸುತ್ತಿರುತ್ತಾರೆ. ಬಹಳ ಹಿಂದೆ ಮಾಡಿಸಿದ್ದ ಫೋಟೋಶೂಟ್ ಬಹಳ ಡಿಫರೆಂಟ್ ಆಗಿದೆ. ಬೈಕ್, ಕಾರು, ಗೋಡೆಯ ಪಕ್ಕದಲ್ಲಿ ನಿಂತು ಬಹಳ ಡಿಫರೆಂಟ್ ಆಗಿ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಆಕೆ ರಾಯಲ್ ಎನ್‌ಫೀಲ್ಡ್ ಬೈಕ್ ಮೇಲೆ ನಿಂತು ತೆಗೆಸಿಕೊಂಡಿರುವ ಫೋಟೋ ಬಹಳ ಡಿಫರೆಂಟ್ ಆಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಪಿಂಕ್ ಸೀರೆಯುಟ್ಟ, ಧೂಳಾಗಿರುವ ಕಾರ್ ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಂಡಿರುವುದು ಕೂಡ ಕೊಂಚ ಡಿಫರೆಂಟ್ ಆಗಿದೆ. ಹಳೇ ಫೋಟೊಗಳನ್ನು ಈಗ ಹಂಚಿಕೊಂಡಿದ್ದಾರೆ. ಒಡವೆ ಇಲ್ಲದಿದ್ದರೂ ನಿಮ್ಮ ಸೌಂದರ್ಯ ಕೊಂಚವೂ ಕಡಿಮೆಯಾಗಿಲ್ಲ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

More from Filmibeat

English summary
Geetha serial fame actress bhavya gowda old photoshoot goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X