ಸೊಂಟ ದಪ್ಪಾ ಆಗಿದೆ ಎಂದು ಫ್ಯಾಟ್ ಸರ್ಜರಿಗೆ ಮುಂದಾಗಿದ್ದ ಚೇತನಾ!

ಕನ್ನಡ ಕಿರುತೆರೆ ನಟಿ ಚೇತನಾ ರಾಜ್ ನಿಧನರಾಗಿದ್ದಾರೆ. ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದ ನಟಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಅನುಮತಿ ಇಲ್ಲದೆ ಸರ್ಜರಿಗೆ ಒಳಗಾಗಿದ್ದರು. ಸರ್ಜರಿ ಸರಿಯಾಗದೆ ವ್ಯತಿರಿಕ್ತ ಪರಿಣಾಮ ಬೀರಿದ್ದರಿಂದ ಆಕೆ ಸಾವಾಗಿದೆ ಎಂದು ಆಪ್ತರು ದೂರಿದ್ದಾರೆ.

ಅಷ್ಟಕ್ಕೂ ಅಷ್ಟೇನೂ ದಪ್ಪ ಇಲ್ಲದ ಚೇತನಾ ಈ ಚಿಕಿತ್ಸೆಗೆ ಒಳಗಾಗಿದ್ದು ಯಾಕೆ ಎನ್ನುವುದನ್ನು ಆಕೆ ತಂದೆ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. "ನನ್ನ ಮಗಳಿಗೆ ಯಾರೋ ದಪ್ಪ ಇದ್ದೀರಾ, ಸೊಂಟ ದಪ್ಪ ಇದೆ ಅಂತ ಹೇಳಿದ್ದಾರೆ. ಅದಕ್ಕೆ ಆಕೆ ಚಿಕಿತ್ಸೆ ಪಡೆಯಲು ರಾಜಾಜಿನಗರದ ಶೆಟ್ಟಿ ಆಸ್ಪತ್ರೆಗೆ ಬಂದು ಅಡ್ಮಿಟ್ ಆಗಿದ್ದಾಳೆ."

"ಆದರೆ ಆಸ್ಪತ್ರೆಯಲ್ಲಿ ಸರಿಯಾರಿ ಮುನ್ನೆಚ್ಚರಿಕೆ ವಹಿಸಿಲ. ಹಾಗಾಗಿ ತೀರಿಕೊಂಡಿದ್ದಾಳೆ. ನನ್ನ ಮಗಳು ಚೆನ್ನಾಗಿಯೇ ಇದ್ದಳು. ಆದರೆ ಆಸ್ಪತ್ರೆಯಲ್ಲಿ ಬರೀ ಕೊಬ್ಬ ತೆಗೆಯುತ್ತೇವೆ ಅಂತ ಹೇಳಿದ್ದರಂತೆ. ಆದರೆ ಚಿಕಿತ್ಸೆ ವೇಳೆ ಉಸಿರಾಟದ ತೊಂದರೆ ಆಗಿದೆ. ಹಾಗಾಗಿ ಅಲ್ಲಿಂದ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲೇ ಹೀಗಾಗಿದೆ."

TV Actress Chetna Raj Dies During Fat Surgery, Chetna Raj Father Reaction

"ನಾವು ಪೋಷಕರು ಯಾರು ಈ ಟ್ರೀಟ್ಮೆಂಟ್‌ಗೆ ಒಪ್ಪಿ, ಸಹಿ ಹಾಕಿರಲಿಲ್ಲ. ಆಕೆಯ ಸ್ನೇಹಿತರು ಜೊತೆಗಿದ್ದರು. ನಾವು ಬರುವಷ್ಟರಲ್ಲೇ ಆಪರೇಷನ್ ಥಿಯೇಟರ್‌ಗೆ ಕರೆದುಕೊಂಡು ಹೋಗಿದ್ದರು. ನನ್ನ ಮಗಳು ಚೆನ್ನಾಗೆ ಇದ್ದಳು." ಎಂದು ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರಿನ ಸುಬ್ರಹ್ಮಣ್ಯ ನಗರ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಫ್ಯಾಟ್ ರಿಯಾಕ್ಷನ್ ಸರ್ಜರಿ ಎಂದು ಕರೆಯಲಾಗುವ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಆಕೆ ಒಳಗಾಗಿದ್ದರು ಎನ್ನಲಾಗಿದೆ. ರಾಜಾಜಿನಗರ ಬಳಿ ಇರುವ ಶೆಟ್ಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಚೇತನಾ ಅವರ ದೇಹದ ಕೊಬ್ಬು ತೆಗೆಯುವ ವೇಳೆ, ಶ್ವಾಸಕೋಶಕ್ಕೆ ನೀರು ಸೇರಿಕೊಂಡಿದ್ದು, ಆಕೆಯನ್ನು ಉಳಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

22 ವರ್ಷ ವಯಸ್ಸಿನ ಚೇತನಾ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ದೂರಿದ್ದಾರೆ. ಆಸ್ಪತ್ರೆ ಬಳಿ ಚೇತನಾರ ಅಪ್ಪ ವರದರಾಜ್ ಹಾಗೂ ತಾಯಿ ಲಕ್ಷ್ಮಿ ಕಣ್ಣೀರಿಟ್ಟು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ವೈದ್ಯರು ಹಾಗೂ ಆಸ್ಪತ್ರೆ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.

ಆಕೆ ದಪ್ಪ ಇರಲಿಲ್ಲ, ಸರ್ಜರಿ ಅನಗತ್ಯವಾಗಿತ್ತು: ''ಆಕೆ ನೋಡೋಕೆ ದಪ್ಪ ಇರಲಿಲ್ಲ, ಲವಲವಿಕೆಯಿಂದಲೇ ಇದ್ದಳು. ಈ ಬೇಡದ ಸರ್ಜರಿ ಬಗ್ಗೆ ಆಕೆ ತಲೆಗೆ ಇಲ್ಲಿನ ವೈದ್ಯರುಗಳೇ ತುಂಬಿದ್ದಾರೆ. ಅನಗತ್ಯ ಸರ್ಜರಿಗೆ ಒಳಪಟ್ಟು ಆಕೆಯನ್ನು ಕಳೆದುಕೊಂಡೆವು. ನಿನ್ನೆ ಚೆನ್ನಾಗಿ ಮಾತನಾಡಿಕೊಂಡಿದ್ದ ಆಕೆ, ಇಂದು ಇಲ್ಲ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ,'' ಎಂದು ಚೇತನಾ ಆಪ್ತರು ಗೋಳು ತೋಡಿಕೊಂಡಿದ್ದಾರೆ. ಬೆಂಗಳೂರಿನ ಅಬ್ಬಿಗೆರೆ ಮೂಲದ ಚೇತನಾ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಿದ್ದರು. 'ಹವಾಯಾಮಿ' ಎಂಬ ಸಿನಿಮಾದಲ್ಲಿ ನಟಿಸಿದ್ದ ಈಕೆ, ಜನಪ್ರಿಯ ಮನರಂಜನಾ ವಾಹಿನಿಯ 'ಗೀತಾ', 'ದೊರೆಸಾನಿ' ಧಾರಾವಾಹಿಗಳಲ್ಲಿ ನಟಿಸಿದ್ದರು.

'ಒಲವಿನ ನಿಲ್ದಾಣ', 'ಗೀತಾ', ದೊರೆಸಾನಿ' ಸೇರಿದಮತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಇನ್ನು ತೆರೆಕಾಣದ ಸಿನಿಮಾ ಒಂದರಲ್ಲಿ ಚೇತನಾ ಅಭಿನಯಿಸಿದ್ದರು.

More from Filmibeat

English summary
TV Actress Chetna Raj Dies During Fat Surgery, Chetna Raj Father Reaction Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X