ವಿಂಟೆಜ್ ಲುಕ್‌ನಲ್ಲಿ ಮೋಡಿ ಮಾಡಿದ ಈ ಕಿರುತೆರೆ ನಟಿ ಯಾರು? ಧಾರಾವಾಹಿ ಯಾವುದು?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರೀ ರಸ್ತು ಶುಭಮಸ್ತು' ಧಾರಾವಾಹಿ ಎಲ್ಲರಿಗೂ ಗೊತ್ತೇ ಇದೆ. ಹಿರಿಯ ನಟಿ ಸುಧಾರಾಣಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಧಾರಾವಾಹಿಯಲ್ಲಿ ಇತ್ತೀಚೆಗಷ್ಟೇ ಹೊಸದಾಗಿ ಬಂದಿರುವ ನಟಿ ದರ್ಶಿನಿ ಡೆಲ್ಟಾ ಅವರು ದೀಪಿಕಾ ಎಂಬ ನೆಗೆಟಿವ್ ಪಾತ್ರವನ್ನು ಮಾಡುತ್ತಿದ್ದಾರೆ.

ಮನೆ ಮಗ ಅಭಿಯ ಮಡಿದಿಯಾಗಿರುವ ಈಕೆ ಮಾಧವ ಹಾಗೂ ತುಳಸಿ ಮನೆಗೆ ಸೊಸೆಯಾಗಿ ಬಂದಿರುತ್ತಾಳೆ. ಪ್ರಸ್ತುತ ಧಾರಾವಾಹಿಯಲ್ಲಿ ಖಳನಾಯಕಿಯ ಪಾತ್ರಕ್ಕೆ ಜೀವ ತುಂಬುತ್ತಿರುವ ದರ್ಶಿನಿ, ತನ್ನ ತಂದೆಯ ದ್ವೇಷವನ್ನು ತೀರಿಸಿಕೊಳ್ಳಲು ಈ ಮನೆಗೆ ಸೊಸೆಯಾಗಿ ಬಂದಿರುತ್ತಾಳೆ. ಪ್ರತಿದಿನ ಏನಾದರೊಂದು ಹುನ್ನಾರ ಹೆಣೆದು ಮನೆಯವರಿಗೆ ಅದರಲ್ಲೂ ಅತ್ತೆ ತುಳಸಿಗೆ ತೊಂದರೆ ಕೊಡುತ್ತಿರುತ್ತಾಳೆ.

TV actress Darshini Delta charmed in a vintage look

ನಟಿ ದರ್ಶಿನಿ ಅವರ ಭಾವನೆಗಳು ಹಾಗೂ ಕಣ್ಣುಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಇದು ನೆಗೆಟಿವ್ ಪಾತ್ರವಾದರೂ, ಅದರಲ್ಲಿ ಮನೋಜ್ಞವಾಗಿ ನಟಿಸುತ್ತಿರುವ ನಟಿ ದರ್ಶಿನಿ ಡೆಲ್ಟಾ ಅವರಿಗೆ ಅಭಿಮಾನಿಗಳ ಸಾಗರವೇ ಇದೆ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟಿವ್ ಆಗಿ ಇರುವ ನಟಿ ದರ್ಶಿನಿ ಡೆಲ್ಟಾ ಆಗಾಗ ತಮ್ಮ ಫೋಟೋಶೂಟ್ ಡ್ಯಾನ್ಸ್ ಇತ್ಯಾದಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ನಟಿ ದರ್ಶಿನಿ ಡೆಲ್ಟಾ ಡ್ಯಾನ್ಸ್ ಕೋರಿಯೋಗ್ರಾಫರ್ ಕೂಡ ಹೌದು. ಸ್ಯಾಂಡಲ್‌ವುಡ್‌ನ ಮೊದಲ ಮಹಿಳಾ ಕೊರಿಯೋಗ್ರಾಫರ್ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಮಹಾ ನಟ ದಿಗ್ಗಜರಿಗೆ ಡಾನ್ಸ್ ಕೊರಿಯೋಗ್ರಾಫಿ ಮಾಡಿರುವ ಹೆಗ್ಗಳಿಕೆ ಈಕೆಗಿದೆ. ಇಷ್ಟೆಲ್ಲದರ ಜೊತೆಗೆ ಇದೀಗ ಧಾರಾವಾಹಿ ನಟನೆ ಮೂಲಕ ಜನಮನ ಗೆಲ್ಲುತ್ತಿದ್ದಾರೆ.

ಇತ್ತೀಚೆಗಷ್ಟೇ ಒಂದಷ್ಟು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ನಟಿ ದರ್ಶಿನಿ ಡೆಲ್ಟಾ ಆ ಫೋಟೋಶೂಟ್ ಮೂಲಕ ಬಹಳಷ್ಟು ವೈರಲ್ ಆಗಿದ್ದಾರೆ. ಕಪ್ಪು ಕಲಂಕಾರಿ ರವಿಕೆ ತೊಟ್ಟು, ಬಿಳಿ ನವಿಲು ಡಿಸೈನ್‌ನ ಸೀರೆ ಉಟ್ಟಿರುವ ಈಕೆ ಬೇರೆ ಬೇರೆ ಭಂಗಿಗಳಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

TV actress Darshini Delta charmed in a vintage look

ದರ್ಶಿನಿ ಡೆಲ್ಟಾ ಶೇರ್ ಮಾಡಿಕೊಂಡಿರುವ ಫೋಟೋಗಳಿಗೆ ಲೈಕ್ ಹಾಗೂ ಕಮೆಂಟ್‌ಳ ಸುರಿಮಳೆಯೇ ಸುರಿದುಬಂದಿದೆ. ಈ ಫೋಟೋಶೂಟ್‌ಗೆ ಈಗಾಗಲೇ ಬೋಲ್ಡ್ ಅಂಡ್ ಬ್ಯೂಟಿಫುಲ್ ಎಂದು ಹಲವಾರು ಫಾಲೋವರ್ಸ್ ಕಾಮೆಂಟ್ ಮಾಡಿದ್ದಾರೆ. ಈ ವಿಂಟೇಜ್ ಲುಕ್‌ನಲ್ಲಿ ಚೆನ್ನಾಗಿ ಕಾಣಿಸಿಕೊಳ್ಳುತ್ತಿರುವ ನಟಿ ದರ್ಶಿನಿ ಡೆಲ್ಟಾ ಯಾವ ಫ್ಯಾಷನ್ ಐಕಾನ್‌ಗೂ ಕಮ್ಮಿ ಇಲ್ಲದಂತೆ ತಮ್ಮ ಡ್ರೆಸ್ಸಿಂಗ್ ಸೆನ್ಸ್ ಹಾಗೂ ಪೋಸ್‌ಗಳನ್ನು ನೀಡಿರುವುದನ್ನು ಕಾಣಬಹುದು.

More from Filmibeat

English summary
TV actress Darshini Delta who attracted attention through her photo shoot:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X