ಗೂಗಲ್‌ಗೆ ತರಾಟೆಗೆ ತೆಗೆದುಕೊಂಡ ನಟಿ ದೀಪಿಕಾ ದಾಸ್; ಕಾರಣ ಏನು ಗೊತ್ತಾ?

By ಅನಿತಾ ಬನಾರಿ

ಕಿರುತೆರೆಯ ನಾಗಿಣಿಗೆ ಇಂದು (ಫೆಬ್ರವರಿ 23) ಹುಟ್ಟುಹಬ್ಬದ ಸಂಭ್ರಮ. ಸೂಪರ್ ನ್ಯಾಚುರಲ್ ಧಾರಾವಾಹಿ 'ನಾಗಿಣಿ'ಯಲ್ಲಿ ಇಚ್ಛಾಧಾರಿ ನಾಗಿಣಿ ಅಮೃತಾಳಾಗಿ ನಟಿಸಿದ್ದ ದೀಪಿಕಾ ದಾಸ್‌ಗೆ ಹುಟ್ಟುಹಬ್ಬದ ಸಂಭ್ರಮ. ಹಿರಿತೆರೆಯ ಮೂಲಕ ನಟನಾ ಕ್ಷೇತ್ರಕ್ಕೆ ಪರಿಚಿತರಾದ ದೀಪಿಕಾ ದಾಸ್ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದು ಕಿರುತೆರೆಯ ಮೂಲಕ. ಹೀಗಿರುವಾಗ ಈಕೆಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ತಮ್ಮ ಹುಟ್ಟುಹಬ್ಬದ ಶುಭದಿನದಂದು ಮುದ್ದಾದ ಫೋಟೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ದೀಪಿಕಾ ದಾಸ್ ಹಂಚಿಕೊಂಡಿದ್ದಾರೆ. ಬಿಳಿ ಬಣ್ಣದ ಹೂವುಗಳ ಚಿತ್ತಾರವನ್ನು ಒಳಗೊಂಡಿರುವ ಡ್ರೆಸ್ ಧರಿಸಿರುವ ದೀಪಿಕಾ ದಾಸ್ ಕೈಯಲ್ಲಿ ಒಂದು ಗುಲಾಬಿಯ ಬೊಕ್ಕೆಯನ್ನು ಹಿಡಿದಿದ್ದಾರೆ. ಮಗದೊಂದು ಕೈಯಲ್ಲಿ ಕಪ್ ಕೇಕ್ ಅನ್ನು ಹಿಡಿದಿರುವ ಆಕೆ ಕಣ್ಣು ಮುಚ್ಚಿಕೊಂಡೇ ಫೋಟೋಗೆ ಫೋಸ್ ನೀಡಿದ್ದಾರೆ. ಇದರಲ್ಲಿ ಆಕೆಯ ಮುದ್ದಿನ ನಾಯಿ ಮರಿಯೂ ಇದೆ.

 TV actress Deepika Das angry on Google do you know the reason?

ಈ ಪೋಟೋದ ಜೊತೆಗೆ ಕ್ಯಾಪ್ಶನ್ ಒಂದನ್ನು ಹಾಕಿರುವ ದೀಪಿಕಾ ಗೂಗಲ್‌ಗೆ ತರಾಟೆ ತೆಗೆದುಕೊಂಡಿದ್ದಾರೆ. ಅರೇ! ಬರ್ತ್ ಡೇ ದಿನ ಅದ್ಯಾಕೆ ಈ ಬೆಡಗಿ ಗೂಗಲ್‌ಗೆ ತರಾಟೆಗೆ ತೆಗೆದುಕೊಂಡರು ಎಂದು ಆಲೋಚಿಸುತ್ತಿದ್ದೀರಾ? ಅದಕ್ಕೆ ಬಹು ಮುಖ್ಯವಾದ ಕಾರಣವೂ ಇದೆ. ಅಂದ ಹಾಗೇ ಗೂಗಲ್ ದೀಪಿಕಾ ದಾಸ್ ಬರ್ತ್ ಡೇ ದಿನಾಂಕವನ್ನು ತಪ್ಪಾಗಿ ನೀಡಿದೆ. ದೀಪಿಕಾ ದಾಸ್ ತಮ್ಮ ಹುಟ್ಟು ಹಬ್ಬದ ದಿನಾಂಕವನ್ನು 23 ಫೆಬ್ರುವರಿ 1993 ಎಂದು ಗೂಗಲ್ ನಮೂದಿಸಿದೆ. ಅದರ ಪ್ರಕಾರ ಈಗ ಆಕೆಗೆ 31 ವರ್ಷ.

ಆದರೆ, ಅಸಲಿಗೆ ದೀಪಿಕಾಗೆ ಕೇವಲ 28 ವರ್ಷ ಅಷ್ಟೆ. ಹಾಗಾಗಿ ದೀಪಿಕಾ ತಾವು ಅಪ್ ಲೋಡ್ ಮಾಡಿರುವ ಫೋಟೋದ ಕೆಳಗೆ "ಹೇ ಗೂಗಲ್ ನನಗೆ 31 ವರ್ಷ ಆಯ್ತು ಅಂತ ಹೇಳೋದನ್ನು ನಿಲ್ಸು. ನನಗೀಗ ಅಧಿಕೃತವಾಗಿ 28 ವರ್ಷ ವಯಸ್ಸಾಗಿದೆ ಅಷ್ಟೇ. (ಆದರೂ 82ರಂತೆ ಫೀಲ್ ಆಗ್ತಿದೆ) ' ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಗೂಗಲ್ ಅನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ.

 TV actress Deepika Das angry on Google do you know the reason?

ಇದರ ಜೊತೆಗೆ ಥ್ಯಾಂಕ್ಸ್ ಯುನಿವರ್ಸ್. ನನ್ನ ಬದುಕಿನಲ್ಲಿ ಗಟಿಸಿರುವಂತಹ ಎಲ್ಲಾ ವಿಚಾರಗಳಿಗೆ ಥ್ಯಾಂಕ್ಸ್. ನನಗೆ ನಾನೇ ಮೊದಲಿಗೆ ವಿಶ್ ಮಾಡ್ತೀನಿ. ಹ್ಯಾಪಿ ಬರ್ತ್ ಡೇ ಮೈ ಸೆಲ್ಪ್ ಎಂದು ಬರೆದುಕೊಂಡಿದ್ದಾರೆ. ಇನ್ನು ಬರ್ತ್ ಡೇ ಹುಡುಗಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

"ದೂದ್ ಸಾಗರ್" ಸಿನಿಮಾ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಈಕೆ ಮುಂದೆ ತೆಲುಗಿನ 'ಈ ಮನಸೆ' ಸಿನಿಮಾದಲ್ಲಿ ನಾಯಕಿಯಾಗಿ ಮೋಡಿ ಮಾಡಿದರು. ಮುಂದೆ 'ನಾಗಿಣಿ'ಯ ಅಮೃತಾಳಾಗಿ ಕಿರುತೆರೆಗೆ ಕಾಲಿಟ್ಟ ಈಕೆ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆದರು. ಮುಂದೆ 'ಬಿಗ್ ಬಾಸ್ ಸೀಸನ್ 7' ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದ ಈಕೆ ಕಿರುತೆರೆ ವೀಕ್ಷಕರಿಗೆ ತುಂಬಾ ಹತ್ತಿರವಾದರು.

ಮಾತ್ರವಲ್ಲ 'ಬಿಗ್ ಬಾಸ್ ಸೀಸನ್ 9' ರ ಸ್ಪರ್ಧಿಯಾಗಿ ಭಾಗವಹಿಸುವ ಸುವರ್ಣಾವಕಾಶವನ್ನು ಕೂಡ ಈಕೆ ಪಡೆದುಕೊಂಡಿದ್ದರು. ಆ ಮೂಲಕ ಮಗದೊಮ್ಮೆ ತಮ್ಮ ಆಟ, ನಡೆ, ನುಡಿಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು. ಮುಂದೆ 'ನಾಗಿಣಿ 2' ಧಾರಾವಾಹಿಯಲ್ಲಿ ನಾಗಿಣಿ ಅಮೃತಾಳಾಗಿ ಅತಿಥಿ ಪಾತ್ರದ ಮೂಲಕ ಮಿಂಚಿದ ಈಕೆ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೇ. ಸದ್ಯ ನಟನೆಯಿಂದ ದೂರವಿರುವ ಈಕೆ ಮತ್ತೆ ಮರಳುತ್ತಾರಾ ಎಂದು ಕಾದುನೋಡಬೇಕಾಗಿದೆ.

More from Filmibeat

English summary
Actress Deepika Das angry on Google for showing wrong age
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X