ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಶ್ರುತಿ ನಾಯ್ಡು
ಕನಸಿನ ರಥ ಏರಿ ಬಂದ ನಟಿ, ನಿರ್ದೇಶಕಿ ಹಾಗೂ ನಿರ್ಮಾಪಕಿ ಶೃತಿ ನಾಯ್ಡು ಬದುಕಿನ ಪಯಣ ಅಷ್ಟು ಸುಲಭವಾಗಿ ಏನು ಇರಲಿಲ್ಲ.
ಶೃತಿ ನಾಯ್ಡು ಹತ್ತಾರು ಧಾರಾವಾಹಿಗಳಲ್ಲಿ ನಟಿಸಿ, ಈಗ ನಟಿಸಿದ ಎರಡರಷ್ಟು ಸೀರಿಯಲ್‌ಗಳನ್ನು ನಿರ್ದೇಶಿಸಿ, ನಿರ್ಮಿಸಿ ಸಾಧನೆ ಮಾಡಿದ್ದಾರೆ. ಕನ್ನಡ ಕಿರುತೆರೆಲೋಕದಲ್ಲಿ ಶ್ರುತಿ ನಾಯ್ಡು ಜನಪ್ರಿಯ ಹೆಸರು.
ಮೈಸೂರಿನಿಂದ ಬರಿಗೈನಲ್ಲಿ ಬಂದ ನಟಿ ಶೃತಿ ನಾಯ್ಡು ಈಗ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಈ ವರ್ಷ ತಮ್ಮ ಹುಟ್ಟುಹಬ್ಬ ಆಚರಿಸಲು ಕಿರುತೆರೆ ನಟ-ನಟಿಯರ ಜೊತೆಗೂಡಿ ಸಂಭ್ರಮಿಸಿದ್ದಾರೆ.

ನಿರೂಪಣೆಯಿಂದ ನಟಿಯಾಗುವವರೆಗೂ
ಮೈಸೂರಿನಲ್ಲಿ ಹುಟ್ಟಿ ಬೆಳೆದ ಶೃತಿ ನಾಯ್ಡು ಕಳೆದ ಎರಡು ದಶಕಗಳಿಂದ ಕಿರುತೆರೆಯಲ್ಲಿದ್ದಾರೆ. 'ಸವಿ ರುಚಿ' ಕಾರ್ಯಕ್ರಮದ ಮೂಲಕ ನಿರೂಪಕಿಯಾಗಿ ಶೃತಿ ನಾಯ್ಡು ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆಗೆ ಸಾಕಷ್ಟು ಧಾರಾವಾಹಿಗಳನ್ನು ನೀಡಿದ ಡೈರೆಕ್ಟರ್ ಕಮ್ ನಿರ್ಮಾಪಕಿ. ಕಿರುತೆರೆಯಲ್ಲೇ ಉಳಿಯದೇ ಸ್ಯಾಂಡಲ್‌ವುಡ್‌ಗೂ ಎಂಟ್ರಿಕೊಟ್ಟು ಸಿನಿಮಾ ಒಂದನ್ನು ನಿರ್ಮಿಸಿದರು. ಶೃತಿ ಅವರಿಗೆ 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಇಲ್ಲಿಂದ ಶೃತಿ ನಾಯ್ಡು ಧಾರಾವಾಹಿಗಳಲ್ಲಿ ನಟಿಸಲು ಆರಂಭಿಸಿದರು.
ನಟನೆ ಜೊತೆಗೆ ನಿರ್ದೇಶನಕ್ಕಿಳಿದ ನಾಯಕಿ
'ಪ್ರೀತಿ ಇಲ್ಲದ ಮೇಲೆ', 'ಮಂಥನ', 'ಮನೆಯೊಂದು ಮೂರು ಬಾಗಿಲು', 'ಕಿಚ್ಚು', 'ಮತ್ತೆ ಬರುವುನು ಚಂದಿರ', 'ಕವಲುದಾರಿ', 'ಶರಪಂಜರ' ಸೇರದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಟಿಸುತ್ತಿರುವಾಗಲೇ ಇನ್ನೂ ಏನಾದರೂ ಮಾಡಬೇಕು ಅನ್ನೋ ತುಡಿತ ಸದಾ ಇರುತ್ತಿತ್ತು. ಇನ್ನು 'ನಮ್ಮಮ್ಮ ಶಾರದೆ' ಧಾರಾವಾಹಿಯಲ್ಲಿ ನಟಿಸುವಾಗ ಒಂದು ಸೀನ್ ಅನ್ನು ನೋಡಿದ ಶೃತಿ ನಾಯ್ಡು ಈ ಸೀನ್ ಅನ್ನು ಡೈರೆಕ್ಟ್ ಮಾಡುತ್ತಾರೆ. ಮುಂದೆ ಧಾರಾವಾಹಿ ನಿರ್ದೇಶನದ ಅವಕಾಶ ಸಿಗುತ್ತದೆ.

ಸಿಕ್ಕ ಅವಕಾಶವನ್ನು ಬಳಸಿಕೊಂಡ ನಟಿ
ಶೃತಿ ನಾಯ್ಡುನ ಕರೆದು ಪರಮೇಶ್ ಗುಂಡ್ಕಲ್ ಧಾರಾವಾಹಿಯೊಂದನ್ನು ನಿರ್ದೇಶನ ಮಾಡುವಂತೆ ಹೇಳುತ್ತಾರೆ. ಆಗಲೇ ಶೃತಿ ನಾಯ್ಡು ಮೊದಲ ನಿರ್ದೇಶನದ ಧಾರಾವಾಹಿ 'ಚಿ.ಸೌ.ಸಾವಿತ್ರಿ' ಶುರುವಾಗಿದ್ದು. ಈ ಧಾರಾವಾಹಿಯನ್ನು ನಿರ್ದೇಶಿಸುವ ಮೂಲಕ ಆಕೆ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದರು. ನಂತರ ತಮ್ಮ ಶೃತಿ ನಾಯ್ಡು ಚಿತ್ರ ಪ್ರೊಡಕ್ಷನ್ಸ್ ಮುಖಾಂತರ ರಿಯಾಲಿಟಿ ಶೋಗಳು ಹಾಗೂ ಧಾರಾವಾಹಿಗಳನ್ನು ನಿರ್ಮಿಸಿದರು. 'ದೇವಿ', 'ಪುನರವಿವಾಹ', 'ಅತಿ ಮಧುರ ಅನುರಾಗ', 'ಮಹಾದೇವಿ', 'ಮಹಾನದಿ', 'ಶ್ರೀರಸ್ತು ಶುಭಮಸ್ತು', 'ರಾಜಕುಮಾರಿ', 'ಪುನರವಿವಾಹ -2', 'ಬ್ರಹ್ಮಗಂಟು', 'ಸಂಜು ಮತ್ತು ನಾನು' ಸೇರಿದಂತೆ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿದರು. ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಸಂಘರ್ಷ' ಹಾಗೂ ಮನಸೆಲ್ಲಾ ನೀನೆ ಧಾರಾವಾಹಿಗಳೂ ಇವರದ್ದೆ.
ಹುಟ್ಟುಹಬ್ಬಕ್ಕೆ ಬಂದ ನಟ-ನಟಿಯರು
ಮೈಸೂರಿನಲ್ಲಿ ಶ್ರುತಿ ತಮ್ಮದೇ 'ಮೈಸೂರು ಮಿರ್ಚಿ' ಎಂಬ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ನಟ ದರ್ಶನ್ ಈ ಹೋಟೆಲ್ ಉದ್ಘಾಟನೆ ಮಾಡಿದ್ದರು. ಬಣ್ಣದ ಲೋದಲ್ಲಷ್ಟೇ ಅಲ್ಲದೇ, ಹೋಟೆಲ್ ಉದ್ಯಮದಲ್ಲೂ ಸಕ್ಸಸ್ ಕಂಡಿದ್ದಾರೆ. ಈ ವರ್ಷ ಶೃತಿ ನಾಯ್ಡು ಸಡಗರದಿಂದ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. 4 ದಿನಗಳ ಹಿಂದೆಯೇ ಸಂಭ್ರಮಾಚರಣೆ ಆರಂಭವಾಗಿದೆ. ತಮಗೆ ಆಪ್ತರಾದ ನಟ ದರ್ಶನ್ ಜೊತೆಗೂ ಕೇಕ್ ಕತ್ತರಿಸಿ ಖುಷಿಪಟ್ಟಿದ್ದರು. ಇನ್ನು ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಪಾರ್ಟಿಯಲ್ಲಿ, ನಟಿ ಸ್ವಾತಿ, ಮಾನಸ ಮನೋಹರ್, ಕಾವ್ಯಾ ಶಾ, ಆರಾಧನಾ, ಶ್ಯಾಮ್ ಸಿಮ್ರಾನ್, ಸುನಿಲ್ ಪುರಾಣಿಕ್, ಅಕ್ಷಯ್ ನಾಯಕ್ ಭಾಗಿ ಆಗಿದ್ದಾರೆ. ಸದ್ಯ ಶೃತಿ ನಾಯ್ಡು ಅವರು ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ 'ಒಲವಿನ ನಿಲ್ದಾಣ' ಧಾರಾವಾಹಿ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











