ಬಿಗ್ ಬಾಸ್ ಮನೆಯ ಒಂದು ಸುಂದರ ಘಟನೆ ನೆನೆದ ನಟಿ ದಿವ್ಯಾ ಉರುಡುಗ!

By ಅನಿತಾ ಬನಾರಿ

ಬಿಗ್ ಬಾಸ್‌ನ ನಂತರ 'ಅರ್ವಿಯ' ಎಂದೇ ಫೇಮಸ್ ಆಗಿರುವ ಈ ಜೋಡಿ ತಮ್ಮ ದೊಡ್ಮನೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಹೌದು, ಬಿಗ್ ಬಾಸ್ ಸೀಸನ್ ಒಂಬತ್ತರ ಅದ್ಭುತ ಜೋಡಿ ನಟಿ ದಿವ್ಯಾ ಉರುಡುಗ ಹಾಗೂ ಬೈಕರ್ ಅರವಿಂದ್ ಎಲ್ಲರಿಗೂ ಅಚ್ಚುಮೆಚ್ಚು. ಮನೆಯಲ್ಲೇ ಪರಿಚಯ ಆಗಿ ಒಳ್ಳೆ ಬಾಂಧವ್ಯ ಬೆಳೆಸಿಕೊಂಡ ಈ ಜೋಡಿ, ಸೀಸನ್ ಮುಗಿದು ಹೊರ ಬಂದ ಮೇಲೆ 'ಅರ್ವಿಯ' ಎಂದೇ ಹೆಸರು ಮಾಡಿದರು.

ಕೆಲವು ಜೋಡಿಗಳು ಕೇವಲ ಬಿಗ್ ಬಾಸ್‌ ಮನೆಯೊಳಗೆ ಮಾತ್ರ ಆತ್ಮೀಯವಾಗಿತ್ತು. ಮತ್ತೆ ಕೆಲವು ಜೋಡಿಗಳು ಹಾಗಲ್ಲ. ರಿಯಾಲಿಟಿ ಶೋ ಮುಗಿದ ಬಳಿಕವೂ ಹಾಗೇ ಆತ್ಮೀಯರಾಗಿಯೇ ಇದ್ದಾರೆ. ಅಂತಹ ಜೋಡಿಗಳಲ್ಲೊಂದು ದಿವ್ಯಾ ಉರುಡುಗ ಹಾಗೂ ಅವಿನಾಶ್ ಕೆವಿ. ಇತ್ತೀಚೆಗೆ ದಿವ್ಯಾ ಬಾಗ್‌ ಬಾಸ್‌ನಲ್ಲಿ ಕಳೆದ ಆ ದಿನಗಳನ್ನು ಮತ್ತೆ ನೆನಪಿಸಿಕೊಂಡಿದ್ದಾರೆ.

Tv Actress Divya Uruduga remembers a beautiful incident in the Bigg Boss house

ಚಿನ್ನದ ಉಂಗುರ ನೀಡಿದ್ದ ದಿವ್ಯಾ ಉರುಡುಗ

ಕೆಲವು ದಿನಗಳ ಹಿಂದಷ್ಟೇ ತಮ್ಮ ಈ ಅದ್ಭುತ ಜರ್ನಿಯ ಅನುಭವವನ್ನು ಮೆಲುಕು ‌ಹಾಕುವಾಗ ನಟಿ ದಿವ್ಯಾ ಉರುಡುಗ ಆ ಒಂದು ದಿನವನ್ನು ಬಹಳ ಸ್ಮರಿಸಿದ್ದಾರೆ. 'ಒಲವಿನ ಉಡುಗೊರೆ' ಎಂಬ ಟಾಸ್ಕ್‌ನಲ್ಲಿ ಮನೆಯ ಸದಸ್ಯರು ತಮ್ಮ ಪ್ರೀತಿ ಪಾತ್ರರಲ್ಲೊಬ್ಬರಿಗೆ ಉಡುಗೊರೆ ಕೊಡಬೇಕಿತ್ತು. ಆಗ ದಿವ್ಯಾ ತಮ್ಮ ಪ್ರೀತಿಯ ಗೆಳೆಯ ಅರವಿಂದ್‌ಗೆ ತಮ್ಮ ಚಿನ್ನದ ಉಂಗುರವನ್ನು ನೀಡುವುದರ ಮೂಲಕ ತಮ್ಮ ಪ್ರೀತಿಯನ್ನು ತೋರ್ಪಡಿಸಿದ್ದರು.

ನನಗೆ ಅರವಿಂದ್ ಅವರಿಗೆ ಏನಾದರೂ ವಿಶೇಷವಾದುದ್ದನ್ನು ಕೊಡಬೇಕೆಂದು ಆಸೆ ಇತ್ತು. ಆದರೆ ನಮ್ಮ ಬಳಿ ಮನೆಯೊಳಗೆ ಅಂಥದ್ದೇನೂ ಇರಲಿಲ್ಲ. ಮನೆಯ ಇತರೆ ಸದಸ್ಯರೂ ತಮ್ಮ ಬಳಿ ಇದ್ದ ಬಳೆ, ಪರ್ಫ್ಯೂಮ್ ಇತ್ಯಾದಿಯನ್ನು ಕೊಡಲು ಮುಂದಾಗಿದ್ದರು. ಆಗ ನನಗೆ ಈ ಉಂಗುರ ಒಂದೊಳ್ಳೆಯ ಉಡುಗೊರೆ ಎಂದೆನಿಸಿತು. ಹಾಗಾಗಿ ಕೊಟ್ಟೆ ಎಂದಿದ್ದಾರೆ.

Tv Actress Divya Uruduga remembers a beautiful incident in the Bigg Boss house

ಅರವಿಂದ್ ಪಾಲಿಗೆ ಈ ಗಿಫ್ಟ್ ತುಂಬಾ ಸ್ಪೆಷಲ್

ಇತ್ತ ಅರವಿಂದ್ ಅವರಿಗೂ ಇದು ಬಹಳ ಆಶ್ಚರ್ಯ ಹಾಗೂ ಖುಷಿ ಕೊಟ್ಟಿತ್ತಂತೆ. ಅಲ್ಲದೆ ಆ ಉಂಗುರ ದಿವ್ಯಾಗೆ ಅವರ ತಂದೆ ನೀಡಿದ ಉಡುಗೊರೆಯಾಗಿತ್ತು. ಹಾಗಾಗಿ ಅದಕ್ಕೆ ಇನ್ನು ಹೆಚ್ಚಿನ ಬೆಲೆ, ತಂದೆ ಕೊಟ್ಟದ್ದನ್ನು ತನಗೆ ಕೊಡ್ತಿದ್ದಾಳೆ ಎಂದಾಗ ಖುಷಿಯ ಜೊತೆ ಧನ್ಯತೆಯ ಭಾವವಿತ್ತಂತೆ. ಹಾಗಾಗಿ ನನಗೆ ಆ ಉಂಗುರ ಎಂದಿಗೂ ತುಂಬಾ ಸ್ಪೆಷಲ್ ಎಂದರು ಅರವಿಂದ್.

ಇನ್ನು ಈ ಜೋಡಿ ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಅಭಿಮಾನಿಗಳಲ್ಲಿ ಸೆನ್ಸೆಷನ್ ಮೂಡಿಸುತ್ತಿರುತ್ತಾರೆ. ಅವರ ಒಂದೊಂದು ಪೋಸ್ಟ್‌ಗಳಿಗೂ ಸಾವಿರಾರು ಲೈಕ್ಸ್ ಹಾಗೂ ಕಾಮೆಂಟ್‌ಗಳ ಸುರಿಮಳೆ ಬರುತ್ತಿರುತ್ತದೆ. ಜೊತೆಗೆ ಇಬ್ಬರೂ ಸಾವಿರಾರು ಫಾಲೋವರ್ಸ್ ಗಳನ್ನು ಅನ್ನು ಕೂಡ ಹೊಂದಿದ್ದಾರೆ.

More from Filmibeat

English summary
The gold gift given by Divya in Olavina Udugore task is very special for Arvind, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X