Gagana Kunchi: ಗಟ್ಟಿಮೇಳ ನಟಿ ಆರತಿ ಪಾತ್ರದ ಗಗನಾ ಎರಡು ಸಿನಿಮಾಗಳಿಗೆ ನಾಯಕಿ

By ಪ್ರಿಯಾ ದೊರೆ

ನಟಿ ಗಗನಾ ಕುಂಚಿ ಬಾಲ್ಯದಿಂದಲೇ ಕಿರುತೆರೆ ಜೊತೆಗೆ ನಂಟು ಹೊಂದಿದ್ದವರು. ಈಗ ಎರಡು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಗಗನಾ ಅವರ ಕಿರುತೆರೆ ಪಯಣಕ್ಕೆ ಈಗಾಗಲೇ ಒಂದು ದಶಕ ಕಳೆದಿದೆ. ಹೇಗೆ ಅಂತ ಎಲ್ಲರಿಗೂ ಪ್ರಶ್ನೆ ಮೂಡಬಹುದು. ಆದರೆ, ಗಗನಾ ಅವರು ಚಿಕ್ಕವರಿದ್ದಾಗಲೇ ಕಿರುತೆರೆಗೆ ಎಂಟ್ರಿ ಕೊಟ್ಟವರು.

ಕನ್ನಡ ಕಿರುತೆರೆಯಲ್ಲಿ ಪುಟಾಣಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ಮಕ್ಕಳ ಕಾರ್ಯಕ್ರಮಗಳ ಮೂಲಕ ಬಣ್ಣದ ಲೋಕಕ್ಕೆ ಬಂದು ನಂತರ ಧಾರಾವಾಹಿಗಳಲ್ಲಿ ನಟಿಸಿದರು. ಈ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

TV Actress Gagana Kunchi Set To Make Her Sandalwood Debut with 2 new movies

ಕನಸುಗಳನ್ನು ನನಸು ಮಾಡಿದ ನಟಿ

ನಟಿ ಗಗನಾ ಕುಂಚಿ ಅವರು ಬಾಲ ನಟಿ. ಆರು ವರ್ಷವಿದ್ದಾಗ ಉದಯ ಟಿವಿಯ ಚಿಂಟೂ ಟಿವಿಗೆ ನಿರೂಪಕಿಯಾಗಿ ಗಗನಾ ಅವರು ಎಂಟ್ರಿ ಕೊಟ್ಟರು. ಐದಾರು ವರ್ಷಗಳ ಕಾಲ ನಿರೂಪಕಿಯಾಗಿ ಕಾರ್ಯಕ್ರಮ ಒಂದನ್ನು ನಡೆಸಿಕೊಡುತ್ತಿದ್ದರು. ಬಳಿಕ ಓದಿನಲ್ಲಿ ಬ್ಯುಸಿಯಾಗಿ ಬಿಟ್ಟರು. ತಾಯಿ ಕಂಡ ಕನಸುಗಳನ್ನು ಮಗಳು ನನಸು ಮಾಡುತ್ತಾ ಬೆಳೆದರು.

ನಿರೂಪಕಿಯಾಗಿ ಬಂದ ನಟಿ

ಸಂಗೀತ, ಡ್ಯಾನ್ಸ್, ಕಲೆ ಸಂಸ್ಕೃತಿ ಸೇರಿದಂತೆ ಗಗನಾ ಅವರು ಚಿಕ್ಕವಯಸ್ಸಿನಲ್ಲಿಯೇ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ನಿರೂಪಕಿಯಾದ ಮೇಲೆ ಗಗನಾ ಅವರು ಆದರ್ಶ ಫಿಲಂ ಇನ್ಸ್ಟಿಟ್ಯೂಟ್‌ನಲ್ಲಿ ಮೂರು ತಿಂಗಳ ಕೋರ್ಸ್ ಮಾಡಿದ್ದರು. ಹೀಗೆ ನಟನೆಯ ಬಗ್ಗೆ ಆಸಕ್ತಿಯನ್ನೂ ಬೆಳೆಸಿಕೊಂಡ ಗಗನಾ, ರ್ಯಾಂಪ್ ಮೇಲೆ ಹೆಜ್ಜೆ ಹಾಕಿ 2016ರಲ್ಲಿ ಮಿಸ್ ಕರ್ನಾಟಕ ಇಂಟರ್ ನ್ಯಾಷನಲ್ ಸ್ಫರ್ಧೆಯಲ್ಲಿ ರನ್ನರ್ ಅಪ್ ಆದರು. ಇದಾದ ಬಳಿಕ ಗಗನಾ ಅವರಿಗೆ 'ದೊಡ್ಮನೆ ಸೊಸೆ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಒದಗಿ ಬಂತು. ಅಲ್ಲಿಂದ ಗಗನಾ ಅವರು ಮತ್ತೆ ಕಿರುತೆರೆಯಲ್ಲಿ ನಟಿಯಾಗಿ ನಟಿಸಲು ಶುರು ಮಾಡಿದರು.

TV Actress Gagana Kunchi Set To Make Her Sandalwood Debut with 2 new movies

ಗಟ್ಟಿಮೇಳ ನಟಿ ಗಗನಾ

'ದೊಡ್ಮನೆ ಸೊಸೆ' ಧಾರಾವಾಹಿ ಬಳಿಕ 'ಮಹಾದೇವಿ', 'ಕಾಲಚಕ್ರ', 'ಸುಬ್ರಮಣ್ಯಪುರಂ' ಸೀರಿಯಲ್‌ನಲ್ಲೂ ಬಣ್ಣ ಹಚ್ಚಿದರು. ಅದರಲ್ಲೂ ಕನ್ನಡ ಮಾತ್ರವಲ್ಲದೇ, ತಮಿಳಿನ ಕಿರುತೆರೆಯಲ್ಲೂ ಕಾಣಿಸಿಕೊಂಡರು. ಬಳಿಕ ಜೀ ಕನ್ನಡ ವಾಹಿನಿಯಲ್ಲಿ ಈಗಲೂ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಆರತಿ ಪಾತ್ರದಲ್ಲಿ ಕಾಣಿಸಿಕೊಂಡರು. ಕಾರಣಾಂತರಗಳಿಂದ ಕೆಲ ತಿಂಗಳ ಹಿಂದೆ ಗಗನಾ ಅವರು ಗಟ್ಟಿಮೇಳ ಧಾರಾವಾಹಿಯಿಂದ ಹೊರ ನಡೆದರು. ಕನ್ನಡದ ಜೊತೆಗೆ ತಮಿಳಿನ ಧಾರಾವಾಹಿಗೂ ಬಣ್ಣ ಹಚ್ಚಿದ್ದ ಗಗನಾ ಅವರು ವೆಬ್ ಸಿರೀಸ್‌ನಲ್ಲೂ ನಟಿಸಿದ್ದಾರೆ.

ಎರಡು ಸಿನಿಮಾಗಳಿಗೆ ನಾಯಕಿ

ಜೀವನದಲ್ಲಿ ಬಹಳ ಕನಸುಗಳನ್ನು ಹೊಂದಿರುವ ಗಗನಾ ಅವರು ಈಗ ಮೊದಲ ಬಾರಿಗೆ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೊಡಕ್ಷನ್ ನಂ.1 ಹಾಗೂ ಪ್ರೊಡಕ್ಷನ್ ನಂ.2 ಸಿನಿಮಾಗಳಲ್ಲಿ ಗಗನಾ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರಗಳನ್ನು ಗುರುಕುಮಾರ್ .ಪಿ ಹಾಗೂ ವಿಜಯ್ .ಆರ್‌ ಮೊದಲ ಬಾರಿಗೆ ಈ ಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ.

ಸಿನಿಮಾಗಳ ಬಗ್ಗೆ ಮಾಹಿತಿ

ಇನ್ನು ಹೆಸರಿಡದ ಈ ಎರಡೂ ಚಿತ್ರಗಳಲ್ಲಿ ಗಗನಾ ನಾಯಕಿ ಆಗಿ ನಟಿಸುತ್ತಿದ್ದಾರೆ. ಆಕೆಯ ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರೊಡಕ್ಷನ್ ನಂ.1 ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಜೊತೆಗೆ ಪ್ರೊಡಕ್ಷನ್ ನಂ.2 ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಈ ಬಗ್ಗೆ ಸ್ವತಃ ಗಗನಾ ಅವರು ಕೂಡ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಅಪ್ ಲೋಡ್ ಮಾಡಿಕೊಂಡಿದ್ದಾರೆ.

More from Filmibeat

English summary
Gattimela Fame Actress gagana kunchi entered sandalwood as heroine,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X