»   » ಬಿಕಿನಿ ಜೊತೆ ರಾಷ್ಟ್ರಧ್ವಜ ಧರಿಸಿದ ಟಿವಿ ನಟಿಗೆ ಗೂಸಾ

ಬಿಕಿನಿ ಜೊತೆ ರಾಷ್ಟ್ರಧ್ವಜ ಧರಿಸಿದ ಟಿವಿ ನಟಿಗೆ ಗೂಸಾ

Posted By:
Subscribe to Filmibeat Kannada
Actress Gehna Vashist
ಬಿಕಿನಿ ಜೊತೆ ರಾಷ್ಟ್ರಧ್ವಜ ಧರಿಸಿದ ಕಿರುತೆರೆ ನಟಿಗೆ ಹಿಗ್ಗಾಮುಗ್ಗಾ ಗೂಸಾ ಕೊಟ್ಟ ಪ್ರಸಂಗ ಮುಂಬೈನಲ್ಲಿ ಸೋಮವಾರ (ಜು.10) ನಡೆದಿದೆ. ಈ ರೀತಿಯ ಬಿಕಿನಿ ಫೋಟೋ ಶೂಟ್ ಬಳಿಕ ಆಕೆ ಹೊರಬರುತ್ತಿರಬೇಕಾದ್ದಂತೆ ಹಲ್ಲೆ ನಡೆದಿದೆ.

ಹಲ್ಲೆ ಮಾಡಿದ ಕಾರ್ಯಕರ್ತರು ಯಾವ ಸಂಘಟನೆಗೆ ಸೇರಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ನಟಿಯ ಹೆಸರು ಗೆಹ್ನಾ ವಶಿಷ್ಠ. ಈಕೆ ಬಿಕಿನಿ ಜೊತೆ ಭಾರತದ ರಾಷ್ಟ್ರಧ್ವಜವನ್ನು ತಮ್ಮ ಸೊಂಟದ ಕೆಳಗೆ ಧರಿಸಿಕೊಂಡಿದ್ದರು.

ನಮ್ಮ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿದೆ ಎಂದು ಕುಪಿತರಾದ ಸರಿಸುಮಾರು 20 ರಿಂದ 25 ಮಂದಿ ಈಕೆಯ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ಮಾರಣಾಂತಿಕ ಹಲ್ಲೆಗೆ ಒಳಗಾಗಿರುವ ಈಕೆ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಲ ವರ್ಷಗಳ ಹಿಂದೆ ವಿಶ್ವಕಪ್ ಅಂತಿಮ ಹಣಾಹಣಿಯಲ್ಲಿ ತಾರೆ ಮಂದಿರಾ ಬೇಡಿ ಸೀರೆ ಕೂಡ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ರಾಷ್ಟ್ರಧ್ವಜವನ್ನೇ ಸೀರೆ ತರಹ ಉಟ್ಟುಕೊಂಡು ಬಂದಿದ್ದರು ಮಂದಿರಾ. ಆದರೆ ಆಕೆಯ ಸೀರೆಯ ಮೇಲೆ ಕ್ರಿಕೆಟ್ ಆಡುತ್ತಿದ್ದ ಎಲ್ಲ ರಾಷ್ಟ್ರಗಳ ಧ್ವಜಗಳು ಪ್ರಿಂಟ್ ಆಗಿದ್ದವು.

ಮಂದಿರಾ ಸೀರೆ ಮೇಲೆ ಹಲವು ದೇಶಗಳ ರಾಷ್ಟ್ರಧ್ವಜಗಳು ಮೂಡಿಬಂದಿದ್ದ ವಿಚಾರ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿತ್ತು. ಮಂದಿರಾ ಬೇಡಿ ಬಗ್ಗೆಯೂ ಅಸಹನೆಯ ಕಟ್ಟೆ ಒಡೆದಿತ್ತು. ಆದರೆ ಆಕೆಯ ಮೇಲೆ ದಾಳಿ ನಡೆದಿರಲಿಲ್ಲ ಎಂಬುದು ಸಮಾಧಾನದ ಸಂಗತಿ. (ಏಜೆನ್ಸೀಸ್)

English summary
In a recent incident, small time actress Gehna Vashist was brutally assaulted in Mumbai on Monday evening by some unknown social activists, after she evoked anger amongst the masses over her controversial bikini photo shoot.
Please Wait while comments are loading...