ಗ್ಲಾಮರಸ್ ಲುಕ್ ಕೊಟ್ಟು ಸಿನಿಮಾಗಳಲ್ಲಿ ಹೆಜ್ಜೆ ಹಾಕುತ್ತಿದ್ದ ನಟಿಯೀಗ ಕಿರುತೆರೆಯಲ್ಲಿ ಬ್ಯುಸಿ; ಯಾರಿವರು?

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ರಾಮಾಚಾರಿ'ಯೂ ಒಂದು. ಕೌಟುಂಬಿಕ ಕಥಾಹಂದರವನ್ನೊಳಗೊಂಡಿರುವ 'ರಾಮಾಚಾರಿ' ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇತ್ತೀಚೆಗಷ್ಟೇ 700 ಸಂಚಿಕೆ ಪೂರೈಸಿರುವ 'ರಾಮಾಚಾರಿ' ಧಾರಾವಾಹಿಯು ಪಾತ್ರವರ್ಗದ ಮೂಲಕವೂ ವೀಕ್ಷಕರ ಗಮನ ಸೆಳೆಯುತ್ತಿದೆ.

'ರಾಮಾಚಾರಿ' ಧಾರಾವಾಹಿಯಲ್ಲಿ ನಾಯಕಿ ಚಾರುಲತಾ ಅಮ್ಮ ಮಾನ್ಯತಾ ಆಗಿ ನಟಿಸಿ ವೀಕ್ಷಕರ ಮನ ಸೆಳೆದ ಬೆಡಗಿ ಹೆಸರು ಝಾನ್ಸಿ ಸುಬ್ಬಯ್ಯ. ಅಂದ ಹಾಗೇ ಝಾನ್ಸಿ ಸುಬ್ಬಯ್ಯ ಅವರು ಧಾರಾವಾಹಿ ಆರಂಭವಾಗುವಾಗಲೇ ಮಾನ್ಯತಾ ಆಗಿ ಕಾಣಿಸಿಕೊಂಡವರಲ್ಲ. ರಾಮಾಚಾರಿ ಧಾರಾವಾಹಿ ಶುರುವಾಗುವಾಗ ಹಿರಿತೆರೆ ನಟಿ ಭಾವನಾ ರಾಮಣ್ಣ ಅವರು ಮಾನ್ಯತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮುಂದೆ ಕಾರಣಾಂತರಗಳಿಂದ ಭಾವನಾ ಅವರು ಮಾನ್ಯತಾ ಪಾತ್ರಕ್ಕೆ ವಿದಾಯ ಹೇಳಿದಾಗ ಝಾನ್ಸಿ ಸುಬ್ಬಯ್ಯ ಅವರು ಆ ಪಾತ್ರಕ್ಕೆ ಜೀವ ತುಂಬಿದರು.

TV actress Jhansi Subbaiah was known her special songs in movies

ಅಂದ ಹಾಗೇ ನೆಗೆಟಿವ್ ರೋಲ್ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಝಾನ್ಸಿ ಸುಬ್ಬಯ್ಯ ಸಹಜ ನಟನೆಯ ಮೂಲಕ ಗುರುತಿಸಿಕೊಂಡಿದ್ದ ಬೆಡಗಿ. ಸಕ್ರೆಬೈಲು ಶ್ರೀನಿವಾಸ್ ಅವರ ನಿರ್ದೇಶನದ 'ಮನೆಯೊಂದು ಮೂರು ಬಾಗಿಲು' ಧಾರಾವಾಹಿಯಲ್ಲಿ ಮನೆಯ ಹಿರಿ ಸೊಸೆ ಸುಪ್ರಿಯಾ ಆಗಿ ಈಕೆ ಕಾಣಿಸಿಕೊಂಡಿದ್ದರು. ಮಾತ್ರವಲ್ಲ ಆ ಧಾರಾವಾಹಿಯಲ್ಲಿ ಈಕೆ ಕಾಣಿಸಿಕೊಂಡಿದ್ದು ಖಳನಾಯಕಿಯಾಗಿ. ವಿಲನ್ ಆಗಿ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಝಾನ್ಸಿ ಅವರಿಗೆ ಆ ಪಾತ್ರ ಸಾಕಷ್ಟು ಜನಪ್ರಿಯತೆಯನ್ನು ನೀಡಿತ್ತು. ಮಾತ್ರವಲ್ಲದೇ ಅವರು ತಮ್ಮ ಸ್ಟೈಲ್, ಲುಕ್ ಮೂಲಕ ವೀಕ್ಷಕರ ಮೆಚ್ಚುಗೆಗೂ ಪಾತ್ರರಾಗಿದ್ದರು.

'ಮನೆಯೊಂದು ಮೂರು ಬಾಗಿಲು' ಧಾರಾವಾಹಿಯ ನಂತರ ಈಕೆ ಬಣ್ಣ ಹಚ್ಚಿದ್ದು ಕಡಿಮೆ. ಮದುವೆ, ಮಕ್ಕಳು, ಸಂಸಾರ ಎಂದು ನಟನೆಯಿಂದ ದೂರವಿದ್ದ ಝಾನ್ಸಿ ಸುಬ್ಬಯ್ಯ ನಟನೆಯಿಂದ ಕೊಂಚ ದೂರವಿದ್ದರು. ಹತ್ತು ವರ್ಷಗಳ ಸುದೀರ್ಘ ಗ್ಯಾಪ್‌ನ ನಂತರ ಮತ್ತೆ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದು ಕಲ್ಯಾಣಿಯಾಗಿ.
'ಸೀತಾವಲ್ಲಭ' ಧಾರಾವಾಹಿಯಲ್ಲಿ ಖಳನಾಯಕಿ ಕಲ್ಯಾಣಿ ಆಗಿ ಅಭಿನಯಿಸುವ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದರು ಝಾನ್ಸಿ ಸುಬ್ಬಯ್ಯ.

ಇದೀಗ 'ರಾಮಾಚಾರಿ'ಯ ಮಾನ್ಯತಾ ಆಗಿ ನಟಿಸುತ್ತಿರುವ ಈಕೆ ಒಂದು ಕಾಲದಲ್ಲಿ ಐಟಂ ಸಾಂಗ್ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿರುವುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಹೌದು, ಕೇವಲ ಎರಡು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿರುವ ಈಕೆ ಒಂಭತ್ತು ಐಟಂ ಸಾಂಗ್‌ಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಇದರ ಜೊತೆಗೆ ಬೋಲ್ಡ್ ಡ್ರೆಸ್ ಹಾಕಿ ಸಿನಿ ಪ್ರಿಯರ ಮನ ಸೆಳೆದಿದ್ದ ಝಾನ್ಸಿ ಸುಬ್ಬಯ್ಯ "ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚಿನ ಐಟಂ ಸಾಂಗ್‌ ಮಾಡಿದವಳು ನಾನು. ಅದು ನನಗೆ ಹೆಮ್ಮೆ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಮಡಿಕೇರಿಯ ಸೋಮವಾರದಪೇಟೆಯ ಬೆಡಗಿ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿದ್ದು ಮಾಡೆಲಿಂಗ್ ಮೂಲಕ. ಮುಂದೆ ಒಂದಷ್ಟು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಸೈ ಎನಿಸಿಕೊಂಡಿರುವ ಝಾನ್ಸಿ ಸುಬ್ಬಯ್ಯ ನವೀನ್ ಮಯೂರ್ ಅಭಿನಯದ 'ಪ್ರೀತಿ ಮಾಡೋ ಹುಡುಗರಿಗೆಲ್ಲಾ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು.

'ಮಾವಯ್ಯನ ಮೋಡಿ' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಝಾನ್ಸಿ ಸುಬ್ಬಯ್ಯ ಅವರಿಗೆ ನೆಗೆಟಿವ್ ರೋಲ್‌ನಲ್ಲಿ ನಟಿಸುವುದು ಎಂದರೆ ತುಂಬಾ ಇಷ್ಟ. ಎಲ್ಲಾ ರೀತಿಯ ಶೇಡ್ಸ್ ಇರುವ ಪಾತ್ರಗಳಲ್ಲಿ ನಟಿಸಲು ಇಷ್ಟವಿರುವ ಝಾನ್ಸಿ ಸುಬ್ಬಯ್ಯ ಅವರ ಪ್ರಕಾರ ನೆಗೆಟಿವ್ ರೋಲ್‌ನಲ್ಲಿ ಅಭಿನಯಕ್ಕೆ ಅವಕಾಶ ಜಾಸ್ತಿ. ಸದ್ಯ ಖಳನಾಯಕಿಯಾಗಿ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಝಾನ್ಸಿ ಸುಬ್ಬಯ್ಯ ಅವರು ಯಾವುದೇ ಪಾತ್ರ ದೊರಕಲಿ ಅದನ್ನು ಸಖತ್ ಎಂಜಾಯ್ ಮಾಡುತ್ತಾರೆ.

More from Filmibeat

English summary
Jhansi Subbaiah who charmed through the negative role was an item dancer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X