"ನಿನ್ನಂಥ ಗಂಡ ಸಿಕ್ಕಿದ್ದು ನನ್ನ ಪುಣ್ಯ"; ಕೊನೆಗೂ 2ನೇ ಮದ್ವೆ ಖಚಿತಪಡಿಸಿದ 'ಜೋಗುಳ'ದ ಅಮ್ಮ ಜ್ಯೋತಿರೈ

ಕನ್ನಡ ಕಿರುತೆರೆಯಲ್ಲಿ ಮಿಂಚಿ ಸದ್ಯ ತೆಲುಗು ವೀಕ್ಷಕರ ಮನಗೆದ್ದ ಚೆಲುವೆ ಜ್ಯೋತಿ ರೈ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹಾಟ್ ಹಾಟ್ ಪೋಸ್ಟ್‌ಗಳಿಂದ ಮಡಿಕೇರಿ ಮೂಲದ ಬೆಡಗಿ ಸುದ್ದಿಯಲ್ಲಿದ್ದಾರೆ. ಮದುವೆಯಾಗಿ ಒಂದು ಮಗುವಿನ ತಾಯಿಯಾಗಿರುವ ಚೆಲುವೆ ಈಗ ತಮ್ಮ ಮಾದಕ ಮೈಮಾಟ ಪ್ರದರ್ಶಿಸಿ ಅಭಿಮಾನಿಗಳ ಮನಗೆಲ್ಲುತ್ತಿದ್ದಾರೆ.

ತೆಲುಗು ಧಾರಾವಾಹಿಗಳ ಜೊತೆ ಜೊತೆಗೆ ವೆಬ್‌ ಸೀರಿಸ್ ಹಾಗೂ ಸಿನಿಮಾಗಳಲ್ಲಿ ನಟಿಸಲು ಜ್ಯೋತಿ ರೈ ಆರಂಭಿಸಿದ್ದಾರೆ. 'ಪ್ರೆಟಿ ಗರ್ಲ್' ಎನ್ನುವ ವೆಬ್‌ ಸೀರಿಸ್‌ನಲ್ಲಿ ಸದ್ಯ ಬಣ್ಣ ಹಚ್ಚಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ವೀಟ್ ಆಗಿರುವ ಚೆಲುವೆ ತಮ್ಮ ಎರಡನೇ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. ನಿರ್ದೇಶಕ ಸುಕು ಪೂರ್ವಜ್ ಜೊತೆ ಕೆಲ ದಿನಗಳಿಂದ ಆಕೆ ರಿಲೇಷನ್‌ಶಿಪ್‌ನಲ್ಲಿ ಇದ್ದರು.

TV Actress Jyothi Rai finally confirms her second marriage with Suku Poorvaj

ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಆತನ ಹೆಸರನ್ನು ತಮ್ಮ ಹೆಸರಿನ ಜೊತೆ ಸೇರಿಸಿಕೊಂಡಿದ್ದರು. ಸುಕು ಪೂರ್ವಜ್ ಜೊತೆ ಆತ್ಮೀಯವಾಗಿರುವ ಫೋಟೊ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಮದುವೆ ಬಗ್ಗೆ ಮಾಹಿತಿ ನೀಡಿರಲಿಲ್ಲ. ಕೆಲ ದಿನಗಳ ಹಿಂದೆ ಎಂಗೇಜ್‌ಮೆಂಟ್ ಆಗಿದೆ ಎನ್ನುವ ಅರ್ಥದಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಅಧಿಕೃತವಾಗಿ 2ನೇ ಮದುವೆ ಮಾಡಿಕೊಂಡಿರುವುದನ್ನು ಹೇಳಿರಲಿಲ್ಲ. ಫಸ್ಟ್ ಮೀಟಿಂಗ್ ಆನಿವರ್ಸರಿ ಸಂಭ್ರಮದಲ್ಲಿ ತಮ್ಮ ಎರಡನೇ ಮದುವೆ ಬಗ್ಗೆ ಜ್ಯೋತಿ ಪ್ರತಿಕ್ರಿಯಿಸಿದ್ದಾರೆ.

20ನೇ ವಯಸ್ಸಿನಲ್ಲೇ ಪದ್ಮನಾಭ್‌ ಎಂಬುವವರ ಜೊತೆ ನಟಿ ಜ್ಯೋತಿ ರೈ ಮದುವೆ ಆಗಿತ್ತು. ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗಿದ್ದರು. ಆಕೆಯ 11 ವರ್ಷದ ಮಗ ಕೂಡ ಇದ್ದಾನೆ. ಮದುವೆಯಾಗಿ ಒಂದು ಮಗುವಿನ ತಾಯಿಯಾದ ಬಳಿಕ ಕೂಡ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರು. ಕೆಲ ವರ್ಷ ಒಂಟಿಯಾಗಿದ್ದ ಜ್ಯೋತಿಗೆ ವರ್ಷದ ಹಿಂದೆ ಸುಕು ಪೂರ್ವಜ್(ವೆಂಕಟ್ ಸುರೇಶ್ ಕುಮಾರ್) ಪರಿಚಯವಾಗಿತ್ತು.

TV Actress Jyothi Rai finally confirms her second marriage with Suku Poorvaj

2ನೇ ಪತಿ ಸುಕು ಪೂರ್ವಜ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಜ್ಯೋತಿ ರೈ ಇನ್‌ಸ್ಟಾ ಸ್ಟೋರಿ ಪೋಸ್ಟ್ ಮಾಡಿದ್ದಾರೆ. "ನಾವಿಬ್ಬರು ಭೇಟಿಯಾಗಿ ಒಂದು ವರ್ಷವಾಗಿದೆ.. ನನ್ನ ಇಡೀ ಜೀವನವೇ ಬದಲಾಗಿದೆ.. ನಾನು ಎಷ್ಟು ಸಂತೋಷವಾಗಿದ್ದೇನೆ ಎಂದು ಪದಗಳಲ್ಲಿ ಹೇಳಲಾರೆ.. ನಿನ್ನ ಪ್ರೀತಿ, ಅಪ್ಪುಗೆ, ಮುತ್ತು, ಬೆಂಬಲ, ಪ್ರೋತ್ಸಾಹ, ನಿನ್ನ ಪಾಸಿಟಿವ್ ಥಾಟ್ಸ್ ಹೀಗೆ ಎಲ್ಲದಕ್ಕೂ ಧನ್ಯವಾದಗಳು.. ನಿನ್ನ ತಾಳ್ಮೆ.. ತೋರಿದ ಎಲ್ಲಾ ಪ್ರೀತಿ, ಕಾಳಜಿ, ನಿಷ್ಠೆಗೆ ಧನ್ಯವಾದಗಳು"

"ನಿನ್ನಿಂದಾಗಿಯೇ ನನ್ನ ಜೀವನ ಪೂರ್ಣವಾಗಿದೆ.. ನಿನ್ನನ್ನು ನನ್ನ ಪತಿಯಾಗಿ ಪಡೆದಿದ್ದು ನನ್ನ ಪುಣ್ಯ.. ಜನ್ಮದಿನದ ಶುಭಾಶಯಗಳು ಡಾರ್ಲಿಂಗ್.. ಲವ್ ಅನ್‌ಕಂಡೀಷನಲಿ" ಎಂದು ಜ್ಯೋತಿ ರಾಯ್ ಬರೆದು ಪತಿಯ ಜೊತೆಗಿನ ಫೋಟೊ ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ. ಇಬ್ಬರೂ ಗುಟ್ಟಾಗಿ ಮದುವೆ ಆಗಿದ್ದಾಗಿ ಎಂದು ಬಹಳ ಹಿಂದೆಯೇ ನೆಟ್ಟಿಗರೂ ಊಹಿಸಿದ್ದರು. ಇದೀಗ ಅಧಿಕೃವಾಗಿ ಜ್ಯೋತಿರೈ ಹೇಳಿದ್ದಾರೆ.

ನಿರ್ದೇಶಕ ಸುಕು ಪೂರ್ವಜ್ 'ಎ ಮಾಸ್ಟರ್ ಪೀಸ್' ಎನ್ನುವ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಈ ಸಿನಿಮಾ ಯಾವಾಗ ಬಿಡುಗಡೆಯಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಜ್ಯೋತಿ ರೈ(ಜಯಶ್ರೀ ರೈ) ಇತ್ತೀಚೆಗೆ ಸಿಕ್ಕಾಪಟ್ಟೆ ಬೋಲ್ಡ್ ಆಗಿಬಿಟ್ಟಿದ್ದಾರೆ. ಬಿಕಿನಿಯಲ್ಲೂ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ. ಧಾರಾವಾಹಿಗಳಲ್ಲಿ ಸೀರೆ ಉಟ್ಟು ಕಂಗೊಳಿಸುವ ಚೆಲುವೆಯ ಹಾಟ್ ಅವತಾರಕ್ಕೆ ಕೆಲವರು ಶಾಕ್ ಆಗುತ್ತಿದ್ದಾರೆ.

'ಬಂದೇ ಬರತಾವ ಕಾಲ' ಧಾರಾವಾಹಿ ಮೂಲಕ ನಟನೆ ಆರಂಭಿಸಿದ ಜ್ಯೋತಿರೈ ಬಳಿಕ ಹಲವು ಕನ್ನಡ ಧಾರಾವಾಹಿಗಳಲ್ಲಿ ನಟಿಸಿ ಗೆದ್ದರು. ಕನ್ನಡದಲ್ಲಿ ಆಕೆಯ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಬಳಿಕ ತೆಲುಗು ಧಾರಾವಾಹಿ ಅವಕಾಶಗಳು ಸಿಕ್ಕವು. 'ಗುಪ್ಪೆಡಂತ ಮನಸು' ಧಾರಾವಾಹಿ ಪಾತ್ರ ಅಲ್ಲಿ ಒಳ್ಳೆ ಹೆಸರು ತಂದು ಕೊಟ್ಟಿದೆ.

More from Filmibeat

English summary
Jyothi Rai's heartfelt birthday wish for husband Suku Poorvaj.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X