ಮದುವೆಯ ಎರಡನೇ ವಾರ್ಷಿಕೋತ್ಸವದ ದಿನ ಸಿಹಿ ಸುದ್ದಿ ಕೊಟ್ರು ನಟಿ ಕಾವ್ಯಾ ಗೌಡ
ಕೆಲ ವರ್ಷಗಳ ಹಿಂದೆ ಕಿರುತೆರೆ ಲೋಕದಲ್ಲಿ ಗ್ಲಾಮರ್ ಗೊಂಬೆಯಾಗಿ ಮಿಂಚಿದ್ದ ನಟಿ ಕಾವ್ಯ ಗೌಡ ಈಗ ಕ್ಯಾಮರಾ ಕಣ್ಣಿನಿಂದ ದೂರ ಉಳಿದಿದ್ದಾರೆ.
ಸಾಕಷ್ಟು ಸೀರಿಯಲ್‌ಗಳಲ್ಲಿ ಮಿಂಚಿ, ಸಿನಿಮಾಗಳಲ್ಲೂ ಕಾಣಿಸಿಕೊಂಡು ಜನ ಮೆಚ್ಚುಗೆ ಪಡೆದಿದ್ದಾರೆ. ನಟಿ ಕಾವ್ಯ ಗೌಡ ತಾನು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಕಿರುತೆರೆಯಿಂದ ಸಂಪೂರ್ಣವಾಗಿ ದೂರ ಉಳಿದರು.

ಕಾವ್ಯ ಗೌಡ ಉದ್ಯಮಿ ಸೊಮಶೇಖರ್ ಎಂಬುವವರನ್ನು 2021ರ ಡಿಸೆಂಬರ್ 2ರಂದು ಮದುವೆಯಾದರು. ಕಾವ್ಯ ಗೌಡ ಮತ್ತು ಸೋಮಶೇಖರ್ ಅವರದ್ದು ಅರೇಂಜ್ ಮ್ಯಾರೆಜ್.
ರಿಯಾಲಿಟಿ ಶೋ ಮೂಲಕ ಎಂಟ್ರಿ
ನಟಿ ಕಾವ್ಯ ಗೌಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಪ್ರಸಿದ್ಧ 'ಗಾಂಧಾರಿ' ಧಾರಾವಾಹಿಯಲ್ಲಿ ದೀಪ್ತಿ ಹಾಗೂ ದೃಷ್ಟಿ ಎಂಬ ಡಬಲ್ ಆಕ್ಟಿಂಗ್ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಜೂನಿಯರ್ ರಾಧಿಕಾ ಪಂಡಿತ್ ಅಂತಲೇ ಖ್ಯಾತಿ ಪಡೆದಿದ್ದರು. ಸೀರಿಯಲ್‌ನಲ್ಲಿ ಮಿಂಚುವ ಮೊದಲು ರಿಯಾಲಿಟಿ ಶೋ ಒಂದರಲ್ಲಿ ಕಾವ್ಯ ಗೌಡ ಸ್ಪರ್ಧಿ ಆಗಿದ್ದರು. ಜನಪ್ರಿಯ ಪ್ಯಾಟೆ ಮಂದಿ ಕಾಡಿಗ್ ಬಂದ್ರು ಶೋನಲ್ಲಿ ಕಾವ್ಯ ಗೌಡ ಕಾಣಿಸಿಕೊಂಡಿದ್ದರು. ಈ ಶೋನಲ್ಲಿ ಜಂಗಲ್ ಕ್ವೀನ್ ಅಂತಲೇ ಕಾವ್ಯ ಹೆಸರು ಗಳಿಸಿದ್ದರು.
ಜಾಹೀರಾತುಗಳಲ್ಲಿ ನಟನೆ
ಕಾವ್ಯ ಗೌಡ ಅಥ್ಲೀಟ್ ಕೂಡ ಹೌದು. ತಮ್ಮ ಕಾಲಿಗೆ ಪೆಟ್ಟು ಬಿದ್ಮೇಲೆ, ಕ್ರೀಡೆ ಕಡೆಗೆ ಮುಖ ಮಾಡದ ಕಾವ್ಯ ಗೌಡ ಮಾಡೆಲಿಂಗ್ ಹಾಗೂ ಆಕ್ಟಿಂಗ್ ಕಡೆ ಗಮನ ಹರಿಸಿದರಂತೆ. ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಆಕೆ 182ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟಾಲಿವುಡ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಜೊತೆಗೂ ಜಾಹೀರಾತು ಒಂದರಲ್ಲಿ ತೆರೆ ಹಂಚಿಕೊಂಡಿದ್ದಾರೆ. 'ಮೀರಾ ಮಾಧವ', 'ಶುಭ ವಿವಾಹ', 'ರಾಧಾ ರಮಣ', 'ಗಾಂಧಾರಿ' ಧಾರಾವಾಹಿಗಳಲ್ಲಿ ಕಾವ್ಯ ಗೌಡ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.
ಕಿರುತೆರೆ ಮೂಲಕ ಜನಪ್ರಿಯತೆ ಪಡೆದ ನಟಿ
ಕಿರುತೆರೆಯಿಂದ ಜನಪ್ರಿಯತೆ ಪಡೆದಿರುವ ಕಾವ್ಯ ಗೌಡ 'ಬಕಾಸುರ' ಚಿತ್ರದ ಮೂಲಕ ಬೆಳ್ಳಿತೆರೆಗೂ ಕಾಲಿಟಿದ್ದರು. ರೋಹಿತ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಚಿತ್ರದ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇನ್ನು ನಟಿ ಕಾವ್ಯ ಗೌಡ, ಅನುಪಮಾ ಗೌಡ ಅವರೊಂದಿಗೆ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದರು. ಇವರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಪ್ರಿವೆಡ್ಡಿಂಗ್ ಫೋಟೋಶೂಟ್ ಅನ್ನು ದುಬೈನಲ್ಲಿ ಮಾಡಿಸಲಾಗಿತ್ತು. ಮದುವೆಯಾದ ಬಳಿ ಕಾವ್ಯ ಗೌಡ ಮತ್ತೆ ನಟನೆಗೆ ಬರಲಿ ಎಂದು ಅಭಿಮಾನಿಗಳು ಕೇಳುತ್ತಲ್ಲೇ ಇದ್ದರು. ಆದರೂ ಕೂಡ ಕಾವ್ಯ ಅವರು ಸಂಪೂರ್ಣವಾಗಿ ತಮ್ಮನ್ನು ತಾವು ಕುಟುಂಬದಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬರ್ತ್‌ಡೇ ಪಾರ್ಟಿಯಲ್ಲಿ ಕಾವ್ಯ-ಸೋಮಶೇಖರ್ ಭಾಗಿ ಆಗಿದ್ದರು.
ಸಿಹಿ ಸುದ್ದಿ ಹಂಚಿಕೊಂಡ ಕಾವ್ಯ ಗೌಡ
ಕಳೆದ ಮೇ ತಿಂಗಳಿನಲ್ಲಷ್ಟೇ ಮನೆಯ ಗೃಹಪ್ರವೇಶ ಮಾಡಿದ್ದ ನಟಿ ಕಾವ್ಯ ಗೌಡ ಈಗ ಹಲವು ದಿನಗಳಿಂದ ಬಚ್ಚಿಟ್ಟಿದ್ದ ಸಿಹಿ ಸುದ್ದಿ ಹೇಳಿದ್ದಾರೆ. ತಮ್ಮ ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವದ ದಿನದಂದು ಈ ವಿಚಾರ ಹಂಚಿಕೊಂಡಿದ್ದಾರೆ. ತಮ್ಮ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ, ಫೋಟೋಗಳನ್ನು ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಹಾಕಿದ್ದಾರೆ. ಇದುವರೆಗೂ ನಾವು ಮುಚ್ಚಿಟ್ಟಿದ್ದ ಬೆಸ್ಟ್ ಸೀಕ್ರೆಟ್ ಇದಾಗಿದೆ. ನಮ್ಮೆಲ್ಲಾ ಆಪ್ತರ ಜೊತೆಗೆ ಈ ವಿಚಾರವನ್ನು ಹಂಚಿಕೊಳ್ಳಲು ಇಚ್ಚಿಸುತ್ತೀನಿ. ನಮ್ಮ ಕಂದಮ್ಮ 2024ರಲ್ಲಿ ಆಗಮಿಸಲಿದ್ದು, ಜೀವನದ ಹೊಸ ಪಯಣಕ್ಕೆ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











