Kavya Gowda: 'ರಾಧಾ ರಮಣ'ದಲ್ಲಿ ನಟಿಸ್ಬೇಕಿತ್ತು.. ಕೊನೆಗೂ ಸುಧಾ ಮೂರ್ತಿ ಭೇಟಿಯಾದ ಕಿರುತೆರೆ ನಟಿ!
ಮಹಿಳೆಯರಿಗೆ, ನಟಿಯರಿಗೆ ವರಮಹಾಲಕ್ಷ್ಮಿ ಹಬ್ಬ ಎಲ್ಲರ ಪಾಲಿಗೂ ತುಂಬಾ ಸ್ಪೆಷಲ್. ಲಕ್ಷ್ಮಿ ದೇವಿಯನ್ನು ಅಲಂಕರಿಸಿ ವೃತ ಮಾಡಿ ಹಬ್ಬ ಪೂರೈಸುವ ಜನರಿಗೇನು ಕಡಿಮೆಯಿಲ್ಲ. ಅದರಲ್ಲೂ ನಟ ನಟಿಯರಂತೂ ತಮ್ಮ ಹಬ್ಬದ ಸಡಗರ, ಸಂಭ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇನ್ನು ಕೆಲವು ನಟಿಯರಂತೂ ಪೋಟೋಶೂಟ್ ಮಾಡಿಸಿಕೊಳ್ಳುವುದರ ಮೂಲಕ ಸಂಭ್ರಮಿಸುತ್ತಾರೆ.
ಕಿರುತೆರೆ ನಟಿ ಕಾವ್ಯಾ ಗೌಡರಿಗಂತೂ ಈ ಬಾರಿಯ ವರಮಹಾಲಕ್ಷ್ಮಿ ಹಬ್ಬ ತುಂಬಾ ಸ್ಪೆಷಲ್ ಆಗಿತ್ತು. ಯಾಕೆಂದರೆ, ಈ ಶುಭದಿನದಂದು ಕಾವ್ಯಾಗೆ ತಮ್ಮ ನೆಚ್ಚಿನ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶ ದೊರಕಿತ್ತು. ವರಮಹಾಲಕ್ಷ್ಮಿ ಹಬ್ಬದ ಶುಭದಿನದಂದು ಕಾವ್ಯಾ ಗೌಡ ಇನ್ಫೋಸಿಸ್‌ನ ಸುಧಾ ಮೂರ್ತಿ ಅವರನ್ನು ಭೇಟಿಯಾಗಿದ್ದರು. ಮಾತ್ರವಲ್ಲದೇ ಕಾವ್ಯಾ ಗೌಡ, ಸುಧಾ ಮೂರ್ತಿ ಅವರೊಂದಿಗೆ ಜೊತೆ ವರಮಹಾಲಕ್ಷ್ಮಿ ಹಬ್ಬವನ್ನೂ ಆಚರಿಸಿದ್ದರು. ಅದೇ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದೀಗ ವೈರಲ್ ಆಗುತ್ತಿದೆ.

ವಿಶೇಷ ಅತಿಥಿಯೊಂದಿಗೆ ಹಬ್ಬ ಆಚರಣೆ
ವಿಶೇಷ ಅತಿಥಿಯೊಂದಿಗೆ ಹಬ್ಬವನ್ನು ಆಚರಿಸಿದ ಸಂತಸದಲ್ಲಿರುವ ನಟಿ ಕಾವ್ಯಾ ಗೌಡ ಈ ಸುಂದರ ಸಮಯದಲ್ಲಿ ಸೆರೆ ಹಿಡಿದ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುಧಾ ಮೂರ್ತಿ ಅವರೊಂದಿಗೆ ಪೋಸ್ ನೀಡುತ್ತಿರುವ ಫೋಟೋವನ್ನು ಕಾವ್ಯಾ ಗೌಡ ಹಂಚಿಕೊಂಡಿದ್ದು ಅದರಲ್ಲಿ ಆಕೆಯ ಅಕ್ಕ ಕೂಡಾ ಜೊತೆಗಿದ್ದಾರೆ.
ಜೀವನದ ವಿಶೇಷ ಕ್ಷಣವಿದು ಎಂದ ಕಾವ್ಯಾ ಗೌಡ
"ನನಗೆ ಅಮ್ಮ ಸುಧಾಮೂರ್ತಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಜೀವನದ ಅತ್ಯಂತ ವಿಶೇಷ ಕ್ಷಣಗಳಲ್ಲಿ ಒಂದು. ಸರಳ ಜೀವನದಲ್ಲೇ ಸಾಧನೆ ಪ್ರತಿ ಮಾತಿನಲ್ಲಿಯೂ ಇದೆ ಪ್ರೇರಣೆ, ತಾಂತ್ರಿಕ ಲೋಕದ ಗಟ್ಟಿಗಿತ್ತಿ, ಇನ್ಫೋಸಿಸ್ ಅನ್ನೋ ಮಹಾ ಸಾಮ್ರಾಜ್ಯದ ಒಡತಿ, ನಗುವೇ ಮುಖದ ಆಭರಣ, ಬಡವರಿಗೆ ಮಿಡಿಯುವ ತಾಯಿಗುಣ, ನಾಡು ನುಡಿ ಭಾಷೆಗೆ ತಾಯಿ ಮಡಿಲು, ಸರಳ ಸಜ್ಜನಿಕೆಯ ಸುಂದರ ಒಡಲು, ಇವೆಲ್ಲ ಕರುನಾಡು ಕಂಡ ಸಹೃದಯಿ 'ಸೌಜನ್ಯ ಮೂರ್ತಿ' ಸುಧಾ ಮೂರ್ತಿ ಅಮ್ಮನವರಿಗೆ ಮೀಸಲಾದ ಪದಗಳೆಂದರೆ ತಪ್ಪಾಗಲಾರದು" ಎಂದು ಕಾವ್ಯಾ ಗೌಡ ಬರೆದುಕೊಂಡಿದ್ದಾರೆ.

'ರಾಧಾ ರಮಣ' ಒಟ್ಟಿಗೆ ನಟಿಸಬೇಕಿತ್ತು
"ಒಂದೇ ನೋಟಕ್ಕೆ ನಮ್ಮವರನಿಸಿ ಅತ್ಯಾಪ್ತರಾಗಿ ಬಿಡೋ ಸುಧಮ್ಮನವರ ಜೊತೆ ಹಿಂದೊಮ್ಮೆ 'ರಾಧಾ ರಮಣ' ಧಾರಾವಾಹಿಯಲ್ಲಿ ತೆರೆ ಹಂಚಿಕೊಳ್ಳೋ ಅವಕಾಶ ಸ್ವಲ್ಪದರಲ್ಲೇ ಕಳೆದು ಹೋಯಿತು. ಆದರೆ, ಈಗ ನಾನು ಅತಿಯಾಗಿ ಪ್ರೀತಿಸುವ ಈ ಜೀವವನ್ನು ತುಂಬಾ ಹತ್ತಿರದಿಂದ ನೋಡುವ ಹಾಗೂ ಪ್ರೀತಿಯಿಂದ ಮಾತಾಡುವ ಅವಕಾಶ ಸಿಕ್ತು. ನೋಡುತ್ತಾ ಭಾವುಕಳಾದೆ. ಅವರ ಜೊತೆ ಕಳೆದ ಆ ಅಮೂಲ್ಯ ಸಮಯ ನನ್ನ ಲೈಫ್ ಟೈಮ್ ಖುಷಿ" ಎಂದು ಕಾವ್ಯಾ ಗೌಡ ಬರೆದುಕೊಂಡಿದ್ದಾರೆ.


Click it and Unblock the Notifications











