ಅಭಿಮಾನಿಗಳಿಗೆ ಕಿರುತೆರೆ ನಟಿ ಕಾವ್ಯ ಶೈವ ಗುಡ್ ನ್ಯೂಸ್

By ಪ್ರಿಯಾ ದೊರೆ

ಹಲ್ಲೋ ವೀಕ್ಷಕರೇ, 'ಕೆಂಡಸಂಪಿಗೆ' ಸುಮನಾ ಯಾರಿಗೆಲ್ಲಾ ನೆನಪಿದ್ದಾರೆ..? ಮುಗ್ಧ ಹುಡುಗಿ ಸುಮನಾಳನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ. ಸದಾ ಕುಟುಂಬಕ್ಕಾಗಿ ಮಿಡಿಯುವ ಸುಮನಾ ತಾನಿದ್ದ ಜಾಗವೇ ಪ್ರಪಂಚ ಎಂದು ನಂಬಿದ್ದಳು. ಅಕಸ್ಮಾತ್ ಆಗಿ ಮದುವೆಯಾಗಿ ಸೇರಿದ ಕುಟುಂಬದವರಲ್ಲಿ ಒಬ್ಬಳಾಗಿ ತನ್ನಲ್ಲಿನ ಒಳ್ಳೆಯತನ ಹಾಗೂ ಮುಗ್ಧತೆಯಿಂದಲೇ ಮನೆಯವರನ್ನೆಲ್ಲಾ ಗೆದ್ದವಳು ಸುಮನಾ. ಮನೆಯಲ್ಲೇ ಇರುವ ಶತ್ರುಗಳ ಬಣ್ಣವನ್ನು ನಯವಾಗಿಯೇ ಬಯಲಿಗೆ ತಂದವಳು.

ಈ ಧಾರಾವಾಹಿ ಮುಕ್ತಾಯವಾಗಿ ವರುಷವೇ ಉರುಳಿದೆ. ಈಗ 'ಕೆಂಡಸಂಪಿಗೆ' ಧಾರಾವಾಹಿ ಬಗ್ಗೆ ಯಾಕೆ ಮಾತನಾಡುತ್ತಿದ್ದೇವೆ ಎಂದು ಯೋಚಿಸುತ್ತಿದ್ದೀರಾ..?

TV actress Kavya shaiva to make her Sandalwood debut with Pruthvi ambar

ಹೊಸ ವಿಚಾರ ಧಾರಾವಾಹಿಯದ್ದಲ್ಲ. ಬದಲಿಗೆ ಧಾರಾವಾಹಿಯಲ್ಲಿ ಕಾಣೀಸಿಕೊಂಡ ಪಾತ್ರ ಸುಮನಾಳದ್ದು. ಅಂದರೆ ಸುಮನಾ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಕಾವ್ಯ ಶೈವ ಅವರದ್ದು.

ಸಿನಿಮಾ ಚಾನ್ಸ್ ಪಡೆದ ಕಾವ್ಯ

ಹೌದು ನಟಿ ಕಾವ್ಯ ಶೈವಗೆ ಈಗ ಬಂಪರ್ ಲಾಟರಿ ಹೊಡೆದಿದೆ. ಕಿರುತೆರೆಯಿಂದ ಮರೆಯಾಗಿರುವ ನಟಿ ಕಾವ್ಯಾ ಶೈವ ಹಿರಿತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಸಿನಿಮಾದಲ್ಲಿ ನಟಿಸುವ ಅವಕಾಶ ಆಕೆಗೆ ದೊರೆತಿದೆ. ಇನ್ನೂ ಹೆಸರಿಡದ ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಕಾವ್ಯ ಶೈವ ಜೊತೆ ನಾಯಕನಾಗಿ ನಟ ಪೃಥ್ವಿ ಅಂಬರ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಶೂಟಿಂಗ್ ನಡೆಯುತ್ತಿದ್ದು, ವಿಶೇಷ ಮಾಹಿತಿಯನ್ನು ತಿಳಿಸಲು ಚಿತ್ರತಂಡ ಸಜ್ಜಾಗಿದೆ. ರಾಕಿಂಗ್ ಸ್ಟಾರ್ ಯಶ್‌ ಅವರ ತಾಯಿ ಪುಷ್ಪ ಅರುಣ್ ಕುಮಾರ್ ಅವರ ಪಿಎ ಪ್ರೊಡಕ್ಷನ್ಸ್ ಬ್ಯಾನರ್‌ನ ಅಡಿಯಲ್ಲಿ ಚಿತ್ರವೊಂದು ತಯಾರಾಗುತ್ತಿದೆ. ಸದ್ಯ ನಟಿ ಕಾವ್ಯ ಶೈವ ಅವರು ಕಿರುತೆರೆಯಿಂದ ಬಡ್ತಿ ಪಡೆದು ಸಿನಿಮಾ ನಾಯಕಿಯಾಗುತ್ತಿರುವುದು ಖುಷಿಯ ವಿಚಾರವೇ.

ಚಿಕ್ಕಂದಿನಿಂದ ನಟನೆ ಒಲವು

ಇನ್ನು ನಟಿ ಕಾವ್ಯ ಶೈವ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕೆಂಡಸಂಪಿಗೆ' ಧಾರಾವಾಹಿಗೂ ಮುನ್ನ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಭೂಮಿ ತಾಯಾಣೆ ಧಾರಾವಾಹಿಯಲ್ಲಿ ನಾಯಕನ ಪ್ರೇಯಸಿಯಾಗಿ ನಟಿಸಿದ್ದರು. ನಟಿ ಕಾವ್ಯ ಶೈವ ಅವರನ್ನು ಜನ ಗುರುತಿಸಿದ್ದು ಮಾತ್ರ ಸುಮನಾ ಪಾತ್ರದ ಮೂಲಕವೇ. ಬಾಲ್ಯದಿಂದಲೂ ನಟನೆಯತ್ತ ವಿಶೇಷ ಒಲವು ಹೊಂದಿದ್ದ ಕಾವ್ಯ ಅವರಿಗೆ ನಟಿಯಾಗಿ ಗುರುತಿಸಿಕೊಳ್ಳುವ ಬಯಕೆ ಇತ್ತು. ಅದು ಸುಮನಾ ಪಾತ್ರದ ಮೂಲಕ ತಮ್ಮ ಮೊದಲ ಆಸೆ ಹಾಗೂ ಕನಸು ನೆರವೇರಿತ್ತು. ಇನ್ನು ನಟನೆಗೆ ಬರಲು ಯಾವುದೇ ತರಬೇತಿಯನ್ನು ಪಡೆದಿಲ್ಲ. ರಂಗಭೂಮಿಯಲ್ಲೂ ಕಾಣಿಸಿಕೊಂಡವರಲ್ಲ. ಬದಲಿಗೆ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಬಳಿಕವೇ ಅಭಿನಯದ ಬಗ್ಗೆ ಕಲಿತವರು ನಟಿ ಕಾವ್ಯ ಶೈವ.

ಡಿಕೆಡಿ ವಿನ್ನರ್ ಕಾವ್ಯ

ಇನ್ನು ತೆಲುಗು ಕಿರುತೆರೆಯಲ್ಲೂ ನಟಿ ಕಾವ್ಯ ಶೈವ ಕಾಣಿಸಿಕೊಂಡಿದ್ದಾರೆ. ತೆಲುಗಿನಹಂಸಗೀತ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದರು. ಇದರಲ್ಲಿ ನಟಿ ಕಾವ್ಯ ಶೈವ ಮುಸ್ಲಿಂ ಹುಡುಗಿಯ ಪಾತ್ರಕ್ಕೆ ಜೀವ ತುಂಬಿದ್ದರು. ಇನ್ನು ಕೆಂಡಸಂಪಿಗೆ ಧಾರಾವಾಹಿಯ ಬಳಿಕ ನಟಿ ಕಾವ್ಯ ಶೈವ ಅವರು ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಇದರಲ್ಲಿ ನಾನ್ ಡ್ಯಾನರ್ಸ್ ಮತ್ತು ಡ್ಯಾನ್ಸರ್ಸ್ ಕಾನ್ಸೆಪ್ಟ್‌ನಲ್ಲಿ ನಡೆದ ಸೀಸನ್‌ನಲ್ಲಿ ಕಾವ್ಯಾ ಅವರು ಕಾಣಿಸಿಕೊಂಡಿದ್ದರು. ಕೊನೆಗೆ ಡಿಕೆಡಿ ಕಪ್ ಹಿಡಿದು ವಿನ್ನರ್ ಪಟ್ಟವನ್ನು ಅಲಂಕರಿಸಿದ್ದರು, ಬಳಿಕ ಸೈಲೆಂಟ್ ಆಗಿದ್ದ ನಟಿ ಕಾವ್ಯ ಶೈವ ಅವರು ಈಗ ಹಿರಿತೆರೆಯಲ್ಲಿ ಮಿಂಚಲು ಮುಂದಾಗಿದ್ದಾರೆ.

More from Filmibeat

English summary
Kendasampige serial heroine kavya shaiva got chance in film;
Read more about: actress serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X