Koli Ramya: ನಟಿ ಕೋಳಿ ರಮ್ಯಾ ಜೀವನದಲ್ಲಿ ಎದುರಿಸಿದ ಸವಾಲುಗಳೇನು?

By ಪೂರ್ವ

ಧಾರಾವಾಹಿ ಅಂದ ತಕ್ಷಣ ನೆನಪಾಗೋದು ಒಂದು ಕುಟುಂಬ ಆ ಕುಟುಂಬದಲ್ಲೇ ಹೀರೋ, ಹೀರೋಯಿನ್ ಮತ್ತು ಮುಗ್ದ ಮುಖದ ಹಿಂದೆ ಕ್ರೂರ ಮನಸ್ಸು ಇಟ್ಟುಕೊಂಡು ಹಗೆ ಸಾಧಿಸೋ ಲೇಡಿ ವಿಲ್ಲನ್ಸ್. ಇಂದಿನ ಬಹುತೇಕ ಧಾರಾವಾಹಿಗಳಲ್ಲಿ ನಟ ನಟಿಯರಿಗಿಂತ ಲೇಡಿ ವಿಲ್ಲನ್ ಗಳೆ ತುಂಬಾ ಫೇಮಸ್. ಆ ಸಾಲಿನಲ್ಲಿರೋದು ಕೋಳಿ ರಮ್ಯಾ. ಈ ನಟಿಯ ಮುದ್ದು ಮುಖದಲ್ಲೂ ಗಂಭೀರತೆ ಉಳಿಸಿಕೊಂಡು ಸಿಕ್ಕ ಸಿಕ್ಕವರ ಮೇಲೆ ಸಿಡುಕುತ್ತ ಎಲ್ಲರ ಪ್ರೀತಿ ಗಳಿಸಿದ್ದಾರೆ. ಪ್ಯಾಟೆ ಹುಡ್ಗೀರು ಹಳ್ಳಿ ಲೈಫು ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ರಮ್ಯಾ ಈ ಕಾರ್ಯಕ್ರಮದಲ್ಲಿ ಕಡಿಮೆ ಸಮಯ ತೆಗೆದುಕೊಂಡು ಅತಿ ಹೆಚ್ಚು ಕೋಳಿ ಹಿಡಿದದ್ದಕೆ ನಟಿ ರಮ್ಯಾ ಅವರು ಕರ್ನಾಟಕದ ತುಂಬೆಲ್ಲಾ ಕೋಳಿ ರಮ್ಯಾ ಅಂತಾನೆ ಫೇಮಸ್ ಆಗಿದ್ದಾರೆ.

ಕಿರುತೆರೆ ನಟಿ ರಮ್ಯಾ ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು, ಹದಿನಾಲ್ಕು ವರ್ಷಕ್ಕೆ ಕುಟುಂಬದ ಜವಾಬ್ದಾರಿ ಇವರ ಹೆಗಲ ಮೇಲೆ ಬಿತ್ತು. ಆಗ ರಮ್ಯಾ ಅವರಿಗೆ ಇದ್ದಿದ್ದು ಒಂದೇ ದಾರಿ, ಅದು ನಟನೆ. ಹೌದು, ಏನಾಗುತ್ತೋ ಆಗಲಿ ಎಂದು ತಮ್ಮ 14ನೇ ವಯಸ್ಸಿನಲ್ಲಿ ರಮ್ಯಾ ಚಿತ್ರರಂಗದಲ್ಲಿ ಭವಿಷ್ಯ ಹುಡುಕಲು ಆರಂಭಿಸಿದರು.

ರಮ್ಯಾ ಧಾರಾವಾಹಿ ಲೋಕದಲ್ಲಿ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ತಮ್ಮದೇ ಮೈಲಿಗಲ್ಲು ಸೃಷ್ಟಿ ಮಾಡಿದ್ದಾರೆ. ಸಕ್ಕತ್ ಸ್ಲಿಮ್ ಮತ್ತು ಬ್ಯೂಟಿಫುಲ್ ಆಗಿರುವ ರಮ್ಯಾ ಅವರಿಗೆ ವಿಲ್ಲನ್ ಪಾತ್ರಗಳೇ ಹೆಚ್ಚಾಗಿ ಹುಡುಕಿಕೊಂಡು ಬರುತ್ತವೆ. ಇತ್ತೀಚಿನ ಕಿರುತೆರೆಯಲ್ಲಿ ಅತ್ಯಂತ ತಳುಕು ಬಳುಕಿನ ನಟಿ ಮತ್ತು ತುಂಬಾ ಸ್ಟೈಲಿಶ್ ಆಗಿ ಬಟ್ಟೆ ತೋಡುವವರ ಪಟ್ಟಿಯಲ್ಲಿ ಇವರೂ ಒಬ್ಬರು. ಕೋಳಿ ರಮ್ಯಾ ಇತ್ತೀಚಿನ ದಿನದ ಹಾಟ್ ಕಿರುತೆರೆ ನಟಿಯರಲ್ಲಿ ಒಬ್ಬರು.

ಕೋಳಿ ರಮ್ಯಾ ಈ ಕಿರುತೆರೆಯ ಇಂಡಸ್ಟ್ರಿಗೆ ಹೊಸಬರೆನಲ್ಲ. ಹಲವಾರು ವರ್ಷಗಳಿಂದ ಇವರ ಮತ್ತು ಕಿರುತೆರೆಯ ನಂಟು ಬೆಳೆದು ಬಂದಿದೆ. ಕೇವಲ ಕನ್ನಡ ಧಾರಾವಾಹಿಗಳಲ್ಲಿ ಅಷ್ಟೇ ಅಲ್ಲದೆ ಇವರು ತೆಲುಗಿನ ಕೆಲ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಸೊಸೆ ತಂದ ಸೌಭಾಗ್ಯ' ಧಾರಾವಾಹಿಯ ಮುಖಾಂತರ ಧಾರಾವಾಹಿ ಲೋಕಕ್ಕೆ ಕಾಲಿಟ್ಟ ಇವರ ಪ್ರಯಾಣ ಇಂದಿಗೂ ಸೀರಿಯಲ್ ಲೋಕದಲ್ಲಿ ಆರಾಮವಾಗಿ ಸಾಗುತ್ತಿದೆ. ಹಲವಾರು ಸೀರಿಯಲ್‌ಗಳಲ್ಲಿ ನಟಿಸಿರುವ ಇವರು ಕೋಳಿ ರಮ್ಯಾ ಎಂದೇ ಎಲ್ಲೆಡೆ ಫೇಮಸ್.

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು'

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು'

ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ ಒಂದರಲ್ಲಿ ಇವರು ಮೊಟ್ಟ ಮೊದಲ ಭಾರಿಗೆ ಟಿವಿ ಲೋಕವನ್ನು ಪ್ರವೇಶಿಸಿದ್ದು. ಸಿಟಿ ಹುಡುಗಿಯರನ್ನು ಹಳ್ಳಿಗೆ ಕರೆದೊಯ್ದು ಅಲ್ಲಿಯ ಜೀವನಶೈಲಿಯ ಹಾಗೆ ಬದುಕಿ ತೋರಿಸುವ ಒಂದು ರಿಯಾಲಿಟಿ ಶೋ. ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ರಮ್ಯಾ ಎರಡನೆ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದರು.

ರಮ್ಯಾರ ವೈವಾಹಿಕ ಜೀವನ ಹೇಗಿದೆ?

ರಮ್ಯಾರ ವೈವಾಹಿಕ ಜೀವನ ಹೇಗಿದೆ?

ಕೋಳಿ ರಮ್ಯ ಅವರು ತಮ್ಮ ವಿವಾಹ ಜೀವನಕ್ಕೆ ಬ್ರೇಕ್ ಹಾಕಿ ಅದರಿಂದ ಆಚೆ ಉಳಿದ್ದಿದ್ದಾರೆ. ಅವರ ಪತಿ ಕೂಡ ಕಿರುತೆರೆಯ ಜನಪ್ರಿಯ ನಟರಲ್ಲಿ ಒಬ್ಬರು. ಕುಲವಧು ಧಾರಾವಾಹಿಯಲ್ಲಿ ವೇದ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಶಿಶಿರ ಅವರೆ ಕೋಳಿ ರಮ್ಯ ಅವರ ಪತಿ. ಶಿಶಿರ ಅವರು ಕೂಡ ಹಲವಾರು ಕಿರುತೆರೆಯ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿವಾಹ ಜೀವನದಲ್ಲಿ ಕಲಹಗಳಿಂದ ಈಗ ಇಬ್ಬರೂ ಬೇರೆ ಬೇರೆ ಜೀವನ ನಡೆಸುತ್ತಿದ್ದಾರೆ.

ಮೂಲತಃ ಭದ್ರಾವತಿಯವರು ರಮ್ಯಾ

ಮೂಲತಃ ಭದ್ರಾವತಿಯವರು ರಮ್ಯಾ

ರಮ್ಯಾ ಮೂಲತಃ ಭದ್ರಾವತಿಯವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಭದ್ರಾವತಿಯಲ್ಲಿಯೇ ಮುಗಿಸಿದರು. ಮನೆಯ ನಿರ್ವಹಣೆಯ ಅನಿವಾರ್ಯತೆ ಮತ್ತು ನಟನೆಯ ಮೇಲಿದ್ದ ಪ್ರೀತಿ ಅವರನ್ನು ಬೆಂಗಳೂರಿನ ಹಾದಿ ಹಿಡಿಯುವಂತೆ ಮಾಡಿತು. ರಮ್ಯಾ ಚಿಕ್ಕವರಾಗಿದ್ದಾಗಲೇ ತಮ್ಮ ತಂದೆಯನ್ನು ಕಳೆದುಕೊಂಡ ನಂತರ ಮನೆಯಲ್ಲಿ ಎದುರಾದ ಆರ್ಥಿಕ ಪರಿಸ್ಥಿತಿ ಇವರಿಗೆ ದುಡಿಮೆ ಮಾಡಬೇಕೆಂಬ ಛಲ ತೊಟ್ಟು ಬೆಂಗಳೂರಿನತ್ತ ಪಯಣ ಆರಂಭಿಸುವಂತೆ ಮಾಡಿತು.

ತನನಂ ತನನಂ ಕಾರ್ಯಕ್ರಮದಲ್ಲಿ ನಿರೂಪಣೆ

ತನನಂ ತನನಂ ಕಾರ್ಯಕ್ರಮದಲ್ಲಿ ನಿರೂಪಣೆ

ಕೇವಲ 9 ನೇ ತರಗತಿಯಲ್ಲಿ ಓದುತ್ತಿದ್ದ ರಮ್ಯಾ ಪಟ ಪಟನೆ ಮಾತನಾಡುತ್ತಾ ನಿರೂಪಣೆಯಲ್ಲಿ ಬಹಳ ಚೂಟಿಯಾಗಿದ್ದ ಇವರಿಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ತನನಂ ತನನಂ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುವ ಅವಕಾಶ ದೊರೆಯಿತು. ಈ ಕಾರ್ಯಕ್ರಮದಲ್ಲಿ ಇವರು ಗಳಿಸಿದ್ದ ಯಶಸ್ಸಿಗೆ ಅನುಗುಣವಾಗಿ ಇವರಿಗೆ ಕಿರುತೆರೆಯಲ್ಲಿ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರಲು ಆರಂಭಿಸಿದವು. ಸುಂದರವಾಗಿದ್ದ ನಟಿ ಕೋಳಿ ರಮ್ಯಾಗೆ ನೃತ್ಯ ಫೇವರೀಟ್ ಆಗಿತ್ತು. ಹಾಗಾಗಿ ಶಾಲೆಯಲ್ಲಿ ಇವರೇ ಸೆಂಟರ್ ಆಫ್ ಅಟ್ರಾಕ್ಷನ್ ಆಗುತ್ತಿದ್ದರು. ರಮ್ಯಾರ ಮೊದಲ ಧಾರಾವಾಹಿ ಸೊಸೆ ತಂದ ಸೌಭಾಗ್ಯ. ನಂತರ ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ.

ಕಿರುತೆರೆಯಲ್ಲಿ ನಟಿಸಲು ಮೊದಲ ಆದ್ಯತೆ

ಕಿರುತೆರೆಯಲ್ಲಿ ನಟಿಸಲು ಮೊದಲ ಆದ್ಯತೆ

ಅನ್ಯ ಭಾಷೆಯ ಧಾರಾವಾಹಿಗಳಲ್ಲಿ ಬ್ಯುಸಿ ಇದ್ದ ಇವರು ಇತ್ತೀಚೆಗೆ ಹೆಚ್ಚಾಗಿ ಕನ್ನಡದ ಧಾರಾವಾಹಿ ಯಲ್ಲಿಯೇ ತಮ್ಮನು ತಾವು ತೊಡಗಿಸಿಕೊಂಡಿದ್ದಾರೆ. ತಮಿಳಿನ ಸತ್ಯ ಧಾರಾವಾಹಿಯಲ್ಲಿ ಹೀರೋಯಿನ್ ಅಕ್ಕನ ಪಾತ್ರ ಮಾಡಿದ್ದಾರೆ. ರಮ್ಯಾ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ ಆದರೆ ಅಷ್ಟೊಂದು ಹೆಸರು ತಂದು ಕೊಡಲಿಲ್ಲ. ಸಿನಿಮಾದಲ್ಲಿ ನಟಿಸಲು ರಮ್ಯಾಗೆ ಆಸಕ್ತಿ ಇದ್ದರೂ ಕೂಡ ಕಿರುತೆರೆಯೆ ಇವರ ಮೊದಲ ಆದ್ಯತೆ. ಸದ್ಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಿಥುನ ರಾಶಿ ಧಾರಾವಾಹಿಯಲ್ಲಿ ಫೇಮಸ್ ವಿಲ್ಲನ್ ಆಗಿ ಗಮನ ಸೆಳೆಯುತ್ತಿದ್ದಾರೆ.

Recommended Video

Sunny Leone | ಸನ್ನಿ ಲಿಯೋನ್ ಹೆಸರು ಹೇಳಿದ್ರೆ ಮಂಡ್ಯದಲ್ಲಿ ಆಫರ್ ಅಂತೆ.

More from Filmibeat

English summary
Tv actress Koli Ramya's struggles and how she entered Tv industry here is some detail about her life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X