ಧಾರಾವಾಡದ 'ಮಾನ್ಸಿ ಜೋಶಿ' ಕಿರುತೆರೆಯಲ್ಲಿ ಫುಲ್ ಬ್ಯುಸಿ

By ಪ್ರಿಯಾ ದೊರೆ

ಕಳೆದ ನಾಲ್ಕು ವರ್ಷಗಳಿಂದ ಕಿರುತೆರೆಯಲ್ಲಿರುವ ಮಾನ್ಸಿ ಜೋಶಿ ನೆಗೆಟಿವ್ ಹಾಗೂ ಪಾಸಿಟಿವ್ ಎರಡೂ ಶೇಡ್‌ನಲ್ಲಿ ನಟಿಸಿದ್ದಾರೆ. 'ಬಿಳಿ ಹೆಂಡ್ತಿ' ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಮಾನ್ಸಿ ಜೋಶಿ ಪರಭಾಷೆಗಳಲ್ಲೂ ನಟಿಸುತ್ತಿದ್ದಾರೆ. ಈಗಾಗಲೇ ಸಿನಿಮಾಗಳಲ್ಲಿ ನಟಿಸುವ ಆಫರ್‌ಗಳು ಕೂಡ ಬರುತ್ತಿವೆಯಂತೆ.

ಭರತನಾಟ್ಯ ಡ್ಯಾನ್ಸರ್ ಆಗಿರುವ ಮಾನ್ಸಿ ಜೋಶಿಗೆ ಹಲವು ಕನಸುಗಳಿವೆ. ಯೂಟ್ಯೂಬ್ ವೆಬ್ ಸಿರೀಸ್ ಮೂಲಕ ಮಾನ್ಸಿ ಫೇಮಸ್ ಆಗಿದ್ದರು. ಈ ಮೂಲಕವೇ ಮಾನ್ಸಿಗೆ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಒದಗಿ ಬಂದಿತ್ತು. ಮಾನ್ಸಿ ಜೋಶಿ ನಟನೆಯನ್ನು ಉಷಾ ಭಂಡಾರಿ ಗರಡಿಯಲ್ಲಿ ಕಲಿತಿದ್ದಾರೆ.

ಧಾರಾವಾಡದ ಪೇಡದಂತಿರುವ ಮಾನ್ಸಿ ಜೋಷಿ ತಂದೆಯ ಹೆಸರು ಸುಹಾಸ್ ಪಿ ಜೋಶಿ.ಅವರು ಮೂಲತಃ ಧಾರಾವಾಡದವರು. ಇನ್ನು ಇವರ ತಾಯಿ ಜ್ಯೋತಿ ಕುಂದಾಪುರದವರು. ಆದರೆ ಮದುವೆಯಾದ ಮೇಲೆ ಇಬ್ಬರೂ ಬೆಂಗಳೂರಿನಲ್ಲಿ ನೆಲೆಸಿದ್ದು, ಮಾನ್ಸಿ ಹುಟ್ಟಿ ಬೆಳೆದಿದ್ದೆಲ್ಲವೂ ಇಲ್ಲೇ.

Tv Actress Mansi Joshi Biography And Serial Journey

ಮಾನ್ಸಿ ಜೋಷಿಗೆ ಡ್ಯಾನ್ಸ್ ಎಂದರೆ ತುಂಬಾ ಇಷ್ಟ. ಭರತನಾಟ್ಯ ಕಲಿತಿರುವ ಮಾನ್ಸಿ ದೇಶದ ವಿವಿಧ ಭಾಗಗಳಲ್ಲಿ ಕಾರ್ಯಕ್ರಮವನ್ನು ನೀಡಿದ್ದಾರೆ. ಬರೋಬ್ಬರಿ 250ಕ್ಕೂ ಹೆಚ್ಚು ಡ್ಯಾನ್ಸ್ ಶೋಗಳನ್ನು ನೀಡಿದ್ದಾರೆ. ಮಾನ್ಸಿ ಜೋಶಿಗೆ ಡ್ಯಾನ್ಸ್ ಅಂದರೆ ತುಂಬಾ ಇಷ್ಟ. ಮಾನ್ಸಿಗೆ ತಮ್ಮದೇ ಆದ ಒಂದು ಡ್ಯಾನ್ಸ್ ಸ್ಕೂಲ್ ಅನ್ನು ತೆರೆಯಬೇಕು. ಹಲವರಿಗೆ ಡ್ಯಾನ್ಸ್ ಹೇಳಿಕೊಡಬೇಕು ಎಂಬ ಕನಸಿದೆ. ಈ ಕನಸನ್ನು ನನಸು ಮಾಡಿಕೊಳ್ಳುವ ದಾರಿಯಲ್ಲೇ ಮುಂದೆ ಸಾಗುತ್ತಿದ್ದಾರೆ.

ಮಾನ್ಸಿ ಜೋಶಿ 'ಬಿಳಿ ಹೆಂಡ್ತಿ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ 'ರಾಧಾ ರಮಣ' ಧಾರಾವಾಹಿಯಲ್ಲಿ ರಮಣನ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡರು. ತುಂಬಾ ಮುಗ್ಧೆ ಪಾತ್ರದಲ್ಲಿ ನಟಿಸಿದ ಮಾನ್ಸಿ ನಂತರ 'ಪಾರು' ಧಾರಾವಾಹಿಯಲ್ಲಿ ನೆಗೆಟಿವ್ ರೋಲ್‌ನಲ್ಲಿ ನಟಿಸಿದ್ದರು. ಇಷ್ಟೇ ಅಲ್ಲದೇ, 'ನಾಯಕಿ' ಎಂಬ ಧಾರಾವಾಹಿಯಲ್ಲೂ ಮಾನ್ಸಿ ಜೋಶಿ ನಟಿಸಿದ್ದು, ಕನ್ನಡದ 'ಕಸ್ತೂರಿ ನಿವಾಸ' ಧಾರಾವಾಹಿಯ ರಿಮೇಕ್ ತೆಲುಗಿನಲ್ಲಿ ಮೂಡಿ ಬಂದಿತ್ತು ಇದರಲ್ಲೂ ಮಾನ್ಸಿ ನಟಿಸಿದ್ದರು. ಇನ್ನು ತಮಿಳಿನ 'ಅಮೃತವರ್ಷಿಣಿ' ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದಾರೆ. ಕೊರೊನಾ ಕಾರಣದಿಂದ ಈ ಧಾರಾವಾಹಿಯಿಂದ ಅರ್ಧಕ್ಕೆ ಕೈ ಬಿಡಬೇಕಾಯ್ತು.

Tv Actress Mansi Joshi Biography And Serial Journey

ತೆಲುಗಿನಲ್ಲಿ ಮೂಡಿ ಬಂದ 'ಆಕಾಸಮಂತ' ಧಾರಾವಾಹಿಯು ಈಗ ಕನ್ನಡದಲ್ಲೂ ರಿಮೇಕ್ ಆಗಿದೆ. ಅದೇ ಅಣ್ಣ ತಂಗಿ ಧಾರಾವಾಹಿ. ಬಾಳೆ ಕುಮಾರ್ ನಿರ್ದೇಶನದ ಈ ಧಾರಾವಾಹಿಯಲ್ಲಿ ಮಾನ್ಸಿ ಜೋಶಿ ಕೂಡ ಬಣ್ಣ ಹಚ್ಚಿದ್ದಾರೆ. ಮಧು ಸಾಗರ್, ಅಖಿಲಾ ದೆಚಮ್ಮಾ, ರಾಜೇಶ್ ಧ್ರುವ ಹಾಗೂ ಮಾನ್ಸಿ ಜೋಶಿ ಲೀಡ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಳ್ಳಿಯ ಅಭಿವೃದ್ಧಿಗೋಸ್ಕರ ಕೆಲಸ ಮಾಡುವ ಜಿಲ್ಲಾಧಿಕಾರಿ ಪಾತ್ರದಲ್ಲಿ ಮಾನ್ಸಿ ಜೋಶಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ಮಾನ್ಸಿ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇನ್ನು ಮಾನ್ಸಿ ಜೋಶಿಗೆ ತಂಗಿಯೊಬ್ಬರು ಇದ್ದಾರೆ. ಅವರ ಹೆಸರೇ ಇಂಚರಾ ಜೋಶಿ. ಇಂಚರಾ ಜೋಶಿ ಅವರು ಹಲವು ವರ್ಷಗಳಿಂದ ಕಿರುತೆರೆಯಲ್ಲಿದ್ದು, ಸದ್ಯ ಪರಭಾಷೆಗಳಲ್ಲಿ ಮಿಂಚುತ್ತಿದ್ದಾರೆ. 'ಸರಸು', 'ರಂಗನಾಯಕಿ', 'ಮರಳಿ ಬಂದಳು ಸೀತೆ', 'ಅರವಿಂದ ಸಮೇತ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈಗ ಅಕ್ಕ-ತಂಗಿ ಇಬ್ಬರೂ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
small screen actress mansi joshi serial journey and her family details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X