ನಿಮ್ಮ ಪ್ರೀತಿಯ ಚಾರು ಅಭಿಮಾನಿಗಳಿಗೆ ಹತ್ತಿರವಾಗಲು ಮಾಡಿರೋ ಕೆಲಸವೇನು ನೋಡಿ

By ಪ್ರಿಯಾ ದೊರೆ

ಮೌನ ಗುಡ್ಡೆಮನೆ ಕನ್ನಡ ಕಿರುತೆರೆಯ ಉದಯೋನ್ಮುಖ ನಟಿ. ಮೂಲತಃ ಮಂಗಳೂರಿನವರಾದ ಮೌನ ಗುಡ್ಡೆಮನೆ 17ನೇ ವಯಸ್ಸಿಗೆ ಮಾಡೆಲಿಂಗ್‌ ಲೋಕಕ್ಕೆ ಕಾಲಿಟ್ಟರು.

2020ರಲ್ಲಿ ನಡೆದ ಮಿಸ್ ಟೀನ್ ತುಳುನಾಡು ಸ್ಪರ್ಧೆಯಲ್ಲಿ ಭಾಗವಹಿಸಿ ಮೌನ ಸೆಕೆಂಡ್ ರನ್ನರ್ ಅಪ್ ಆಗಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಡಿಗ್ರಿ ಓದಿರುವ ಮೌನ ಗುಡ್ಡೆಮನೆಯವರಿಗೆ 'ರಾಮಾಚಾರಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ದೊರೆತ್ತಿದೆ. ತಮ್ಮ ಉತ್ತಮವಾದ ನಟನೆಯ ಮೂಲಕವೇ ಪ್ರೇಕ್ಷಕರ ಮನ ಗೆದ್ದಿದ್ದಾರೆ.

mouna-guddemane-starts-YouTube-channel

ರಾಮಾಚಾರಿ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ 'ರಾಮಚಾರಿ' ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಈಗ ಇದು ಜನ ಮೆಚ್ಚಿದ ಸೀರಿಯಲ್ ಎಂದು ಹೇಳಿದರೆ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ಫೇಮಸ್ ಆಗಿದೆ. ಧಾರಾವಾಹಿಯಲ್ಲಿ ಮೊದಲು ವಿಲನ್‌ ರೀತಿ ನಟಿಸಿದ್ದರೂ ಕೂಡ, ನಾಯಕನ ಜೊತೆ ಸೇರಿ ಈಗ ಫುಲ್ ಒಳ್ಳೆಯವಳಾಗಿದ್ದಾಳೆ. ಕುಟುಂಬಕ್ಕೋಸ್ಕರ, ಮನೆಯವರ ಹಿತಕ್ಕೋಸ್ಕರ ಎಲ್ಲಾ ರೀತಿಯ ತ್ಯಾಗ ಮಾಡುತ್ತಿದ್ದಾಳೆ. ಮಾವನಿಗೆ ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಎಂದು ಚಾರುಲತಾ ಹರಕೆ ತೀರಿಸಿದ್ದಾಳೆ. ಚಾರುಳಲ್ಲಿ ಆದ ಬದಲಾವಣೆಗಳನ್ನು ಕಂಡ ರಾಮಾಚಾರಿಗೂ ಈಗ ಹೆಂಡತಿಯ ಮೇಲಿನ ಪ್ರೀತಿ ಹಾಗೂ ನಂಬಿಕೆ ಹೆಚ್ಚಾಗಿದೆ. 'ರಾಮಾಚಾರಿ' ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ.

ವೈಶಾಖಾಳಿಗೆ ದೊಡ್ಡ ಶಾಕ್

ಮೊದಲಿನಿಂದಲೂ ಸಹ ವೈಶಾಖಾಗೆ ಚಾರು ಮೇಲೆ ತುಂಬಾನೇ ಕೋಪವಿದೆ. ಅವಳನ್ನು ಕಂಡರೆ ಉರಿದು ಬೀಳುತ್ತಾಳೆ. ಇದೀಗ ರಾಮಾಚಾರಿ ಹೆಂಡತಿ ಚಾರು ದಿಕ್ಕು ತಪ್ಪಿಸುವ ಎಲ್ಲಾ ಕೆಲಸ ಸಲೀಸಾಗಿ ನಡೆಯುತ್ತಿದೆ. ಇದೀಗ ವೈಶಾಖಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಶಾಕ್ ನೀಡಿದ್ದಾಳೆ ಚಾರು. ಇನ್ನು ಚಾರು ಮಾವ ಮಾತನಾಡಿದರೆ, ವೈಶಾಖಳಿಗೆ ಗೇಟ್ ಪಾಸ್ ಸಿಗುವುದಂತೂ ಗ್ಯಾರೆಂಟಿ ಆಗುತ್ತದೆ. ಮನೆಯಲ್ಲಿ ನಡೆಯುತ್ತಿರುವ ಎಲ್ಲಾ ಅನಾಹುತಗಳಿಗೂ ವೈಶಾಖನೇ ಕಾರಣ ಎಂಬುದು ಎಲ್ಲರಿಗೂ ಸ್ಪಷ್ಟವಾಗುತ್ತದೆ. ಚಾರು ಮತ್ತು ರಾಮಚಾರಿ ಜೋಡಿ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಇಬ್ಬರೂ ಸೂಪರ್ ಜೋಡಿ ಎಂದು ಹೇಳುವ ಅಭಿಮಾನಿಗಳು ರಾಮಾಚಾರಿ ಧಾರಾವಾಹಿಗೆ ಫುಲ್ ಮಾರ್ಕ್ಸ್ ನೀಡುತ್ತಿದ್ದಾರೆ. ಈ ವಾರ ಧಾರಾವಾಹಿ ಟಿಆರ್‌ಪಿ ಕೂಡ ಚೆನ್ನಾಗಿ ಬಂದಿದೆ.

mouna-guddemane-starts-YouTube-channel

ಸೀರೆಯಲ್ಲಿ ಸುರಸುಂದರಿ ಮೌನ

ಇನ್ನು ಮೌನ ಗುಡ್ಡೆಮನೆ ಕನ್ನಡ ಕಿರುತೆರೆಗೆ ಬರುವ ಮುನ್ನವೇ ಹಲವು ಆಲ್ಬಂ ಸಾಂಹ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಹಿಂದಿ, ತುಳು ಹಾಗೂ ಕನ್ನಡದ ಕೆಲ ಆಲ್ಬಂ ಸಾಂಗ್‌ಗಳಿಗೆ ಹೆಜ್ಜೆ ಹಾಕಿದ್ದರು. ದೇವತೆಯಂತೆ ಆಗಾಗ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಮೌನ ಗುಡ್ಡೆಮನೆ ಬಹಳ ಸ್ಲಿಮ್ ಆಗಿದ್ದು, ಸೀರೆಯಲ್ಲಿ ಸಿಕ್ಕಾಪಟ್ಟೆ ಸುಂದರವಾಗಿ ಕಾಣುತ್ತಾರೆ. ವೀಕ್ಷಕರು ಮೌನ ಸೀರೆ ಉಡುವ ರೀತಿಯನ್ನು ಕೂಡ ಮೆಚ್ಚಿಕೊಂಡಿದ್ದಾರೆ. ಮಾಡ್ರನ್ ಲುಕ್‌ನಲ್ಲಿ ಬ್ಯೂಟಿಫುಲ್ ಆಗಿ ಕಾಣುವಂತೆಯೇ ಸೀರೆಯಲ್ಲೂ ಸುರ ಸುಂದರಿಯೇ. ಸೊಂಟಕ್ಕೊಂದು ಚೈನ್ ಧರಿಸಿ ಸೀರೆ ಉಡುವ ಮೌನ ಲುಕ್‌ಗೆ ಫಿದಾ ಆಗದ ಅಭಿಮಾನಿಗಳಿಲ್ಲ. ಇತ್ತೀಚೆಗಂತೂ ಮೌನ ಅತಿ ಹೆಚ್ಚಾಗಿ ಸೀರೆಯಲ್ಲಿ ಕಂಗೊಳಿಸುತ್ತಿರುತ್ತಾರೆ.

ಅಭಿಮಾನಿಗಳಿಗಾಗಿ ಹೊಸ ಪ್ರಯತ್ನ

ಇದೀಗ ಮೌನ ಇತರೆ ನಟಿಯರಂತೆಯೇ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದಾರೆ. ಅವರ ಬಗ್ಗೆ ಯಾವುದೇ ವಿಚಾರ ತಿಳಿಯಬೇಕಿದ್ದರೂ, ಅಭಿಮಾನಿಗಳು ಇನ್ಮುಂದೆ ನೇರವಾಗಿ ಪ್ರಶ್ನೆ ಕೇಳಿ ಉತ್ತರ ಪಡೆಯಲು ಈ ಯೂಟ್ಯೂಬ್ ಚಾನೆಲ್ ಸಹಕಾರಿಯಾಗಿದೆ. ಪ್ರತಿಯೊಂದು ವಿಚಾರವನ್ನು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಶೇರ್ ಮಾಡಿಕೊಳ್ಳುವುದಾಗಿ ಮೌನ ವೀಡಿಯೋದಲ್ಲಿ ಹೇಳಿದ್ದಾರೆ.

More from Filmibeat

English summary
actress mouna guddemane starts YouTube channel;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X