"ಡ್ರೆಸ್ ಹಾಕುವುದು ಅವರವರ ವೈಯಕ್ತಿಕ ನಿರ್ಧಾರ"; ಮೌನ ಗುಡ್ಡೆ ಮನೆ ಹೇಳಿಕೆ ಫುಲ್ ವೈರಲ್

By ಫಿಲ್ಮಿಬೀಟ್ ಡೆಸ್ಕ್

ಕಿರುತೆರೆ ನಟಿ ಮೌನ ಗುಡ್ಡೆಮನೆ ಇತ್ತೀಚೆಗೆ ಬಹಳ ಟ್ರೋಲ್ ಆಗುತ್ತಿದ್ದಾರೆ. ಅದಕ್ಕೆ ಕಾರಣ ಬುಲೆಟ್ ಮೈಕ್ರೋ ಸೀರಿಸ್‌ಗಾಗಿ ಆಕೆ ಸಿಕ್ಕಾಪಟ್ಟೆ ಮಾದಕವಾಗಿ ಕಾಣಿಸಿಕೊಂಡಿರುವುದು. ದಿಲೀಪ್ ರಾಜ್ ನಿರ್ದೇಶನದ 'ಲವ್ ಪಂಚ್' ಎಂಬ ಮಿನಿ ವೆಬ್ ಸೀರಿಸ್‌ನಲ್ಲಿ ಮೌನ ನಟಿಸಿದ್ದಾರೆ. ಸ್ವಿಮ್ಮಿಂಗ್ ಪೂಲ್‌ನಿಂದ ಎದ್ದು ಬಂದು ಆಕೆ ನಾಯಕನ ಜೊತೆ ಜಗಳ ಮಾಡುವ ಸನ್ನಿವೇಶ ಇದೆ.

ಇತ್ತೀಚೆಗೆ 'ಲವ್ ಪಂಚ್' ಮಿನಿ ಸೀರಿಸ್ ಪ್ರೋಮೊ ವೈರಲ್ ಆಗ್ತಿದೆ. ಅದರಲ್ಲಿ ಹಿಂದೆಂದೂ ಕಾಣಿಸಿಕೊಳ್ಳದಷ್ಟು ಮಾದಕವಾಗಿ ಮೌನ ಕಾಣಿಸಿಕೊಂಡಿರುವುದು ಕೆಲವರ ಹುಬ್ಬೇರಿಸಿದೆ. ಮತ್ತೊಂದು ಪ್ರೋಮೊದಲ್ಲಿ ಕೂಡ ಇದೇ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿಗಳಲ್ಲಿ ಸಲ್ವಾರ್, ಸೀರೆಯಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ನಟಿ ಹೀಗೆ ದಿಢೀರನೆ ಮೈಮಾಟ ಪ್ರದರ್ಶನ ಮಾಡಿರುವುದು ಚರ್ಚೆ ಹುಟ್ಟಾಕ್ಕಿದೆ. ಇದೆಲ್ಲದರ ನಡುವೆ ಹಿಂದೆ ಸಂದರ್ಶನವೊಂದರಲ್ಲಿ ಸ್ವತಃ ಮೌನ ಗುಡ್ಡೆಮನೆ ನೀಡಿದ್ದ ಹೇಳಿಕೆ ಈಗ ವೈರಲ್ ಆಗ್ತಿದೆ.

TV Actress Mouna Guddemane Trolled Over Bold Love Punch Promo Old Interview Clip Goes Viral

'ರಾಮಾಚಾರಿ' ಧಾರಾವಾಹಿಯಲ್ಲಿ ಚಾರು ಪಾತ್ರದಲ್ಲಿ ನಟಿಸಿ ಮೌನ ಗುಡ್ಡೆಮನೆ ವೀಕ್ಷಕರ ಮನಗೆದ್ದಿದ್ದರು. ಮೂರ್ನಾಲ್ಕು ವರ್ಷ ಧಾರಾವಾಹಿ ಪ್ರದರ್ಶನ ಕಂಡಿತ್ತು. ಬಳಿಕ 'ಕೃಷ್ಣ-ರುಕ್ಕು' ಎಂಬ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ. ಇದೇ ಧಾರಾವಾಹಿಯ ಸುದ್ದಿಗೋಷ್ಠಿಯಲ್ಲಿ 'ಸಂಪೂರ್ಣ ನ್ಯೂಸ್' ವಾಹಿನಿಗೆ ಮೌನ ಪ್ರತಿಕ್ರಿಯೆ ನೀಡಿದ್ದರು. ಪಾಪರಾಜಿಗಳ ಉಪಟಳದ ಬಗ್ಗೆ ನಟಿ ಮೌನ ಮಾತನಾಡಿದ್ದರು. ನಿಜಕ್ಕೂ ಕೆಲವರು ಕೆಟ್ಟದಾಗಿ ಜೂನ್ ಮಾಡಿ ವಿಡಿಯೋ ಮಾಡುತ್ತಾರೆ, ಮೊಬೈಲ್ ಫೋನ್ ಕ್ಯಾಮರಾ ಜಾಸ್ತಿ ಆದ್ಮೇಲೆ ಎಲ್ಲಾ ಕಡೆ ವೀಡಿಯೋ ಮಾಡ್ತಾ ನಿಲ್ತಾರೆ, ಇದು ಸರಿಯಲ್ಲ, ಯಾಕಂದ್ರೆ ಆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ಕಡೆ ಹರಿದಾಡುತ್ತದೆ ಎಂದು ಆಕೆ ಹೇಳಿದ್ದರು.

ನಟಿಯರು ಹಾಕುವ ಡ್ರೆಸ್ ಆ ರೀತಿ ಇರುತ್ತದೆ. ಈಗ ನೋಡಿದ್ರೆ ಈ ತರ ಮಾತನಾಡ್ತಾರಲ್ಲ ಎಂದು ಕೆಲವರು ಕಾಮೆಂಟ್ ಮಾಡ್ತಾರೆ, ಈ ಬಗ್ಗೆ ಏನ್ ಹೇಳ್ತೀರಾ? ಎನ್ನುವ ಪ್ರಶ್ನೆಗೆ "ಡ್ರೆಸ್ ಹಾಕುವುದು ಅವರ ವೈಯಕ್ತಿಕ ನಿರ್ಧಾರ. ಸಿನಿಮಾದಲ್ಲಿ ನೋಡುವಾಗ ಇಷ್ಟಪಡ್ತಾರೆ.. ರಿಯಲ್ ಆಗಿ ನೋಡುವಾಗ ಇಷ್ಟಪಡಲ್ವಾ.. ಆ ರೀತಿ ಡ್ರೆಸ್ ಹಾಕ್ತಾರೆ ಅಂದ್ರೆ, ನೀವು ವಿಡಿಯೋ ಮಾಡ್ಬೇಡಿ ಅಷ್ಟೇ ಎಂದಿದ್ದರು. ಸದ್ಯ 'ಲವ್ ಪಂಚ್' ಮಿನಿ ಸೀರಿಸ್ ಪ್ರೋಮೊ ವೈರಲ್ ಆಗುತ್ತಿದ್ದಂತೆ ಮೌನ ಗುಡ್ಡೆಮನೆ ಮಾತುಗಳು ವೈರಲ್ ಆಗ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋಗೆ ಕಾಮೆಂಟ್ ಮಾಡುತ್ತಿದ್ದಾರೆ. "ಮೇಡಂ ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ, ಏನೇ ಆದರೂ ಆ ರೀತಿ ಡ್ರೆಸ್ ಹಾಕಿರುವುದು ಒಪ್ಪಲು ಸಾಧ್ಯವಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಿಮ್ಮ ಮನೆಯಲ್ಲಿ ನಿಮಗೆ ಇಷ್ಟ ಬಂದ ಡ್ರೆಸ್ ಹಾಕ್ಕೊಳ್ಳಿ.. ಈ ವೀಡಿಯೋ ವೈರಲ್ ಆಗುತ್ತದೆ ಎನ್ನುವುದು ಗೊತ್ತಿರಲಿಲ್ಲವೇ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 'ಲವ್ ಪಂಚ್' ವೆಬ್ ಸೀರಿಸ್‌ನಲ್ಲಿ ಶರತ್ ಪದ್ಮನಾಭ್ ಜೊತೆ ಮೌನ ಗುಡ್ಡೆಮನೆ ನಟಿಸಿದ್ದಾರೆ. ಶ್ರೀಮಂತರ ಮನೆಯ ಜಂಭದ ಹುಡುಗಿ ನಂದಿನಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸಣ್ಣ ಸಣ್ಣ ಎಪಿಸೋಡ್‌ಗಳಾಗಿ ಈ ಮೈಕ್ರೊ ಡ್ರಾಮಾ ಸೀರಿಸ್ ಪ್ರದರ್ಶನವಾಗುತ್ತದೆ.

'ಕುಲದಲ್ಲಿ ಕೀಳ್ಯಾವುದೋ' ಎಂಬ ಸಿನಿಮಾದಲ್ಲಿ ಕೂಡ ಮೌನ ಗುಡ್ಡೆಮನೆ ನಾಯಕಿಯಾಗಿ ನಟಿಸಿದ್ದರು. ಮೂಲತಃ ಕೊಡಗಿನವರಾದ ಮೌನ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ ಎಲ್ಲರೂ ಆರ್ಮಿಯಲ್ಲಿ ಸೇವೆ ಸಲ್ಲಿಸಿದವರು. ಆಕೆಗೆ ತಂಗಿ ಕೂಡ ಇದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಮೌನ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಆಗಾಗ್ಗೆ ಫೋಟೊ, ವೀಡಿಯೋ ಕ್ಲಿಕ್ಕಿಸಿ ಹಂಚಿಕೊಳ್ಳುತ್ತಾರೆ. 3 ಲಕ್ಷಕ್ಕೂ ಅಧಿಕ ಇನ್‌ಸ್ಟಾ ಫಾಲೋವರ್ಸ್ ಇದ್ದಾರೆ.

Read more about: actress kannada sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X