ಧಾರಾವಾಹಿ ನಟಿಯ ಬಂಧನ 4 ತಾಸು ವಿಚಾರಣೆ

ಜನಪ್ರಿಯ ಟಿವಿ ಧಾರಾವಾಹಿ 'ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ'ದ ನಟಿ ಮುನ್ ಮುನ್ ದತ್ತಾ ಅವರನ್ನು ಪೊಲೀಸರು ಬಂಧಿಸಿ ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಮುನ್‌ಮುನ್ ದತ್ತಾ ಕಳೆದ ವರ್ಷ ಮಾಡಿದ್ದ ತಪ್ಪಿಗೆ ಈಗ ಬಂಧನಕ್ಕೆ ಒಳಗಾಗಿದ್ದರು. ಆದರೆ ಅವರನ್ನು ಠಾಣೆ ಜಾಮೀನಿನ ಮೇಲೆ ಬಿಟ್ಟು ಕಳಿಸಲಾಗಿದೆ.

ಕಳೆದ ವರ್ಷ ಲಾಕ್‌ಡೌನ್ ಅವಧಿಯಲ್ಲಿ ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದ ನಟಿ ಮುನ್‌ಮುನ್ ದತ್ತಾ ವಿಡಿಯೋ ಒಂದರಲ್ಲಿ ಜಾತಿ ಅವಹೇಳನ ಮಾಡಿದ್ದರು. ಈ ವಿಷಯವಾಗಿ ಹಲವರು ನಟಿಯ ವಿರುದ್ಧ ದೂರು ಸಲ್ಲಿಸಿದ್ದರು.

ಸೌಂದರ್ಯಕ್ಕೆ ಸಂಬಂಧಿಸಿದ ಟಿಪ್ಸ್ ನೀಡುತ್ತಿದ್ದ ನಟಿ ಮುನ್‌ಮುನ್ ದತ್ತಾ ಸ್ವಚ್ಛತಾ ಕಾರ್ಯ ಮಾಡುವ ಸಮುದಾಯದವರ ಹೆಸರು ಹೇಳಿ ನನಗೆ ಅವರಂತೆ ಕಾಣುವುದು ಇಷ್ಟವಿಲ್ಲ ಎಂದಿದ್ದರು. ನಟಿಯ ಈ ಮಾತು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಹಲವು ದಲಿತಪರ ಸಂಘಟನೆಗಳು ನಟಿಯ ವಿರುದ್ಧ ದೂರು ನೀಡಿದ್ದವು. ಹರಿಯಾಣ, ಬಿಹಾರದಲ್ಲಿಯೂ ನಟಿ ವಿರುದ್ಧ ದೂರು ದಾಖಲಾಗಿತ್ತು.

Tv Actress MunMun Dutta Arrested By Haryana Police, Released On Bail
ದೂರಿನ ಆಧಾರದಲ್ಲಿ ಹರಿಯಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಇದೀಗ ನಿನ್ನೆಯಷ್ಟೆ ನಟಿ ಮುನ್‌ಮುನ್ ದತ್ತಾ ಅವರನ್ನು ಹರಿಯಾಣಾ ಪೊಲೀಸರು ಬಂಧಿಸಿ ಸತತ ನಾಲ್ಕು ಗಂಟೆ ವಿಚಾರಣೆ ನಡೆಸಿದ್ದಾರೆ. ಬಳಿಕ ಜಾಮೀನಿನ ಮೇಲೆ ನಟಿಯನ್ನು ಬಿಡುಗಡೆಗೊಳಿಸಲಾಗಿದೆ.

ಕಳೆದ ವರ್ಷ ಮುನ್‌ಮುನ್‌ ದತ್ತಾರ ವಿಡಿಯೋಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಆ ವಿಡಿಯೋವನ್ನು ಹಿಂಪಡೆದಿದ್ದ ಮುನ್‌ಮುನ್ ದತ್ತಾ ಕ್ಷಮಾಪಣೆಯನ್ನೂ ಕೇಳಿದ್ದರು. ನನಗೆ ಆ ಪದದ ಅರ್ಥಗೊತ್ತಿರಲಿಲ್ಲ. ಈಗ ಅರ್ಥ ಗೊತ್ತಾಗಿತ್ತು, ನಾನು ಆ ಸಮುದಾಯದ ಕ್ಷಮೆ ಕೇಳುತ್ತೇನೆ ಎಂದಿದ್ದರು.

ಮುನ್‌ಮುನ್‌ ವಿರುದ್ಧ ಎಫ್‌ಐಆರ್ ದಾಖಲಾದ ಬಳಿಕ ನಟಿಯು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತು. ಬಳಿಕ ನಿನ್ನೆ ನಟಿಯನ್ನು ಬಂಧಿಸಿ ಸತತ ವಿಚಾರಣೆ ಬಳಿಕ ಜಾಮೀನಿನ ಮೇಲೆ ನಟಿಯನ್ನು ಬಿಡುಗಡೆ ಮಾಡಲಾಗಿದೆ. ಪೊಲೀಸರ ಬಳಿಯೂ ಮುನ್‌ಮುನ್ ದತ್ತಾ ಕ್ಷಮಾಪಣೆ ಕೇಳಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
Tv actress MunMun Dutta arrested by Haryana police for using caste slur in one of her social media videos. She released on bail later.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X