ಅಂದವಾದ ನಗುವಿಗಾಗಿ ಮುದ್ದಾದ ಹಲ್ಲುಗಳನ್ನು ಕಳೆದುಕೊಂಡ ನಟಿ ನಯನಾ ನಾಗರಾಜ್
ಮಹತಿ ಪಾತ್ರದ ಮೂಲಕ ಜನಪ್ರಿಯತೆಯನ್ನು ಪಡೆದ 'ಗಿಣಿರಾಮ' ಧಾರಾವಾಹಿಯ ನಟಿ ನಯನಾ ನಾಗರಾಜ್ ಸದ್ಯ ಕಿರುತೆರೆಯಿಂದ ಪುಟ್ಟ ಬ್ರೇಕ್ ಪಡೆದಿದ್ದಾರೆ.
ಮೊಲದ ರೀತಿಯಲ್ಲಿ ಮುದ್ದಾದ ಎರಡು ಹಲ್ಲುಗಳನ್ನು ಹೊಂದಿದ್ದ ಮಹತಿ ಅವರನ್ನು ಹೆಚ್ಚು ಮಂದಿ ಗುರುತಿಸುತ್ತಿದ್ದದ್ದೇ ಈ ಹಲ್ಲುಗಳಿಂದ. ಆದರೆ, ಇನ್ಮುಂದೆ ಆ ಹಲ್ಲುಗಳನ್ನು ಯಾರೂ ನೋಡಲು ಸಾಧ್ಯವಿಲ್ಲ.

ನಯನಾ ನಾಗರಾಜ್ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದು, ಕೆಲ ಅಭಿಮಾನಿಗಳು ಪಾಸಿಟಿವ್ ಆಗಿದ್ದರೆ, ಮತ್ತೂ ಕೆಲವರು ಬಹಳ ಬೇಸರ ಮಾಡಿಕೊಂಡಿದ್ದಾರೆ.
ಅದೃಷ್ಟ ಪರೀಕ್ಷೆಗೆ ಮುಂದಾದ ನಟಿ
ನಟಿ ನಯನಾ ನಾಗರಾಜ್‌ಗೆ ನಟಿಸುವ ಆಸೆ ಮೊದಲಿನಿಂದಲೂ ಇತ್ತು. ಹೀಗಾಗಿಯೇ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಭರತನಾಟ್ಯ ಕಲಾವಿದೆಯಾಗಿರುವ ನಯನಾ ಗಾಯಕಿಯೂ ಹೌದು. ಆದರೆ, ನಯನಾ ನಟಿಸಲು ಅಡ್ಡವಾಗಿದ್ದು, ಆಕೆಯ ಹಲ್ಲುಗಳೇ. ಆದರೂ ಕೂಡ ನಯನಾ ತಮ್ಮ ಹಲ್ಲುಗಳು ಅವರಿಗೆ ಅದೃಷ್ಟವನ್ನು ತಂದಿದ್ದು, ಯಾವುದೇ ಕಾರಣಕ್ಕೂ ಕಳೆದುಕೊಳ್ಳುವುದಿಲ್ಲ ಎಂದು ಕೆಲ ವರ್ಷಗಳ ಹಿಂದೆ ಹೇಳಿಕೊಂಡಿದ್ದರು. ಆದರೆ, ಈಗ ಅನಿವಾರ್ಯವಾಗಿ ಮೊಲದ ಹಲ್ಲುಗಳನ್ನು ಕತ್ತರಿಸಬೇಕಾಗಿ ಬಂದಿದೆ.

ಹೊಸ ಲುಕ್‌ನಲ್ಲಿ ಮಹತಿ
ನಟಿ ನಯನಾ ತಮ್ಮ ಹಲ್ಲುಗಳಲ್ಲಿ ಸಮಸ್ಯೆ ಇದ್ದಿದ್ದರಿಂದ ಈ ಕಾರ್ಯಕ್ಕೆ ಕೈ ಹಾಕಿದರಂತೆ. ದಂತ ತಜ್ಞ ಆದರ್ಶ, ನಯನಾಗೆ ಸಹಾಯ ಮಾಡಿದ್ದು, ಈಗ ನನ್ನ ಮುದ್ದಾದ ನಗುವಿಗೆ ಈ ವೈದ್ಯರೇ ಕಾರಣ ಎಂದು ಹೇಳಿದ್ದಾರೆ. ಸತತ ನಾಲ್ಕು ತಿಂಗಳ ಕಾಲ ಟ್ರೀಟ್‌ಮೆಂಟ್‌ನಲ್ಲಿದ್ದ ನಯನಾ ಈಗ ತಮ್ಮ ಹೊಸ ಲುಕ್ ಅನ್ನು ರಿವೀಲ್ ಮಾಡಿದ್ದಾರೆ. ನಯನಾ ಹಿಂದಿನ ಲುಕ್‌ಗೂ ಈಗಿನ ಲುಕ್‌ಗೂ ವ್ಯಾತ್ಯಾಸವಿದ್ದು, ಈಗಲೂ ನಯನಾ ಮುದ್ದಾಗಿ ಕಾಣುತ್ತಿದ್ದಾರೆ. ಆದರೆ, ಕೆಲ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ನಿಮ್ಮ ಮೊಲದ ಹಲ್ಲುಗಳೇ ಚೆನ್ನಾಗಿತ್ತು. ಯಾಕೆ ಹೀಗೆ ಮಾಡಿದಿರಿ. ಈಗ ನಿಮ್ಮನ್ನು ನೋಡಲಾಗುತ್ತಿಲ್ಲ ಎಂದು ಬೇಸರದಿಂದ ಹೇಳಿದ್ದಾರೆ. ಇನ್ನೂ ಕೆಲ ಅಭಿಮಾನಿಗಳು ನಯನಾ ಹೊಸ ಲುಕ್‌ಗೆ ಫಿದಾ ಆಗಿದ್ದಾರೆ. ಅಲ್ಲದೇ, ವೈದ್ಯರ ಮಾಹಿತಿ ಕೊಡಿ, ನಮಗೂ ಅವರ ಅವಶ್ಯಕತೆ ಇದೆ ಎಂದು ಕೇಳಿದ್ದಾರೆ.
ಕಷ್ಟದಲ್ಲಿ ಬೆಳೆದ ನಯನಾ
ಇನ್ನು ನಯನಾ ನಟನೆಗೆ ಬರುವ ಮುನ್ನ ಜೀವನದಲ್ಲಿ ಬಹಳಷ್ಟು ಏಳು-ಬೀಳು ಕಂಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಕಷ್ಟಪಟ್ಟಿದ್ದಾರೆ. ನಯನಾ ಮನೆಯಲ್ಲಿ ಅಕ್ಕನಿಗೆ ಶಾಲೆ ಫೀಸ್ ಕಟ್ಟಿದರೆ, ಇವರಿಗೆ ಕಟ್ಟಲು ಸಾಧ್ಯವಾಗುತ್ತಿರಲಿಲ್ಲವಂತೆ. ನಯನಾ ಶಾಲಾ ದಿನಗಳಲ್ಲಿ ಬೇರೆಯವರು ಫೀಸ್ ಕಟ್ಟಿದ್ದೇ ಹೆಚ್ಚಂತೆ. ಇನ್ನು ಕಾಲೇಜು ದಿನಗಳಲ್ಲಿ ಫುಟ್‌ಪಾತ್‌ನಲ್ಲಿ ಸ್ನೇಹಿತೆ ಜೊತೆ ಸೇರಿ ಗಿಡಗಳನ್ನು ಮಾರಾಟ ಮಾಡಿದ್ದಾರಂತೆ. ಕೃಷ್ಣ ರಾವ್ ಪಾರ್ಕ್, ಲಾಲ್ ಬಾಗ್ ಹಾಗೂ ಜಯನಗರ 4th ಬ್ಲಾಕ್‌ನಲ್ಲಿ ನಯನಾ ಗಿಡಗಳನ್ನು ಮಾರಿದ್ದು ಇದೆಯಂತೆ.
ನಯನಾ ನಟನೆಯ ಧಾರಾವಾಹಿಗಳು
ಒಮ್ಮೆ ವರ್ಟಿಕಲ್ ಗಾರ್ಡನ್ ಮಾಡುವ ಸಲುವಾಗಿ ಒಂದು ಲಕ್ಷ ಇನ್ವೆಸ್ಟ್ ಮಾಡಿದ್ದರಂತೆ. ಆಗ ಮೋಸವಾಗಿದ್ದರಿಂದ ತಂದೆ ಈ ಕೆಲಸವನ್ನು ಕೈ ಬಿಡು ಎಂದಿದ್ದರಂತೆ. ಇನ್ನು ನಯನಾ 'ಶಾಂತಂ ಪಾಪಂ', 'ಪಾಪ ಪಾಂಡು' ಹಾಗೂ 'ಗಿಣಿರಾಮ' ಧಾರಾವಾಹಿಗಳಲಿ ನಟಿಸಿ ಹೆಸರು ಗಳಿಸಿದ್ದಾರೆ. ಸದ್ಯ ನಟನೆಯಿಂದ ಕೊಂಚ ಬ್ರೇಕ್ ಪಡೆದಿದ್ದು, ಈಗ ಹೊಸ ಲುಕ್ ಮೂಲಕ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದಾರೆ. ನಯನಾ ಅವರಲ್ಲಿನ ಈ ಬದಲಾವಣೆ ಅವರಿಗೆ ಬಣ್ಣದ ಲೋಕದಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸೋಣ.


Click it and Unblock the Notifications











