ಸಪ್ತಪದಿ ತುಳಿದ ಕಿರುತೆರೆ ನಟಿ ಪ್ರೇರಣಾ ಕಂಬಂ

By ಪ್ರಿಯಾ ದೊರೆ

ಕಿರುತೆರೆ ನಟಿ ಪ್ರೇರಣಾ ಕಂಬಂ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರೂ ಯಾರಿಗೂ ತಿಳಿಸದೇ ಇದ್ದ ಪ್ರೇರಣಾ ಈಗ ಮದುವೆಯಾಗಿದ್ದಾರೆ. ಇವರ ಮದುವೆಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ನಟಿ ಪ್ರೇರಣಾ ಕಂಬಂ, ಈಗ ತಮ್ಮ ನಟನೆಯ ಧಾರಾವಾಹಿಯನ್ನು ಅರ್ಧಕ್ಕೆ ಕೈ ಬಿಟ್ಟಿದ್ದಾರೆ.

TV actress Prerana kambam ties knot with shripadh deshpande

ಬೆಳ್ಳಿ ಪರದೆ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ ಕಿರುತೆರೆಯಲ್ಲಿ ಹೆಸರು ಮಾಡಿದ ನಟಿ ಪ್ರೇರಣಾ ಕಂಬಂ 'ರಂಗನಾಯಕಿ'ಯಾಗಿ ಚಿರಪರಿಚಿತರಾಗಿದ್ದರು. ಆಕೆ ಮೊದಲು 'ಹರಹರ ಮಹದೇವ' ಧಾರಾವಾಹಿಗೆ ಬಣ್ಣ ಹಚ್ಚಿದ್ದರು.

ಕಳ್ಳಿ ಬಂಗಾರಿ ಎಂದೇ ಖ್ಯಾತಿ ಪಡೆದಿದ್ದ ನಟಿ

'ಹರಹರ ಮಹದೇವ' ಧಾರಾವಾಹಿಯಲ್ಲಿ ಚಂದ್ರನ ಪತ್ನಿ ರೇವತಿ ಪಾತ್ರದಲ್ಲಿ ನಟಿಸಿದ್ದರು. ತದನಂತರ 'ರಂಗನಾಯಕಿ' ಎಂಬ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಕಳ್ಳಿಯ ಪಾತ್ರವನ್ನು ನಿರ್ವಹಿಸಿ 'ಕಳ್ಳಿ ಬಂಗಾರಿ' ಎಂದೇ ಹೆಸರು ಪಡೆದಿದ್ದರು. ನಂತರದಲ್ಲಿ 'ನಕ್ಷತ್ರ' ಧಾರಾವಾಹಿಯಲ್ಲೂ ಪ್ರೇರಣಾ ಕಂಬಂ ನಟಿಸಿದರು. 'ನಮ್ಮನೆ ಯುವರಾಣಿ' ಧಾರಾವಾಹಿಗೂ ಕೆಲ ಕಾಲ ಬಣ್ಣ ಹಚ್ಚಿದ್ದರು.

ತೆಲುಗು ಅಂಗಳದಲ್ಲೂ ನಟಿಸಿದ್ದ ಪ್ರೇರಣಾ

ಧಾರಾವಾಹಿಗಳಿಗಷ್ಟೇ ಸೀಮಿತರಾಗಿರದ ಪ್ರೇರಣಾ ಸಿನಿಮಾಗಳಲ್ಲೂ ಮಿಂಚಿದ್ದರು. 'ಚೂರಿಕಟ್ಟೆ' ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡರು. 'ಪೆಂಟಗನ್', 'ಒಂದಂಕೆ ಕಾಡು', 'ಆನ', 'ಫಿಸಿಕ್ಸ್ ಟೀಚರ್' ಎಂಬ ಸಿನಿಮಾಗಳಲ್ಲೂ ಪ್ರೇರಣಾ ಕಂಬಂ ನಟಿಸಿದರು. ತೆಲುಗು ಕಿರುತೆರೆಗೂ ಎಂಟ್ರಿ ಕೊಟ್ಟ ಪ್ರೇರಣಾ 'ಕೃಷ್ಣ ಮುಕುಂದ ಮುರಾರಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದರು. ಇವರಿಗೆ ಜೋಡಿಯಾಗಿ ಗಗನ್ ಚಿನ್ನಪ್ಪ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಕಳೆದ ಒಂದು ತಿಂಗಳಿನಿಂದ ಪ್ರೇರಣಾ ಈ ಧಾರಾವಾಹಿಯಿಂದ ಹೊರ ನಡೆದಿದ್ದರು. ಅಕ್ಕೆ ಕಾರಣ ಯಾರಿಗೂ ಗೊತ್ತಿರಲಿಲ್ಲ.

ಮದುವೆಯ ಸುಳಿವು ನೀಡದ ನಟಿ

ಇನ್ನು ನಟಿ ಪ್ರೇರಣಾ ಕಂಬಂ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ರೀಲ್ಸ್ ಹಾಕುತ್ತಿದ್ದರು. ಆದರೆ, ಎಲ್ಲೂ ಕೂಡ ವೈಯಕ್ತಿಕ ವಿಚಾರಗಳ ಬಗ್ಗೆ ಅಪ್ ಡೇಟ್ ನೀಡುತ್ತಿರಲಿಲ್ಲ. ಆದರೆ ಇದೇ ತಿಂಗಳ ಆರಂಭದಲ್ಲಿ ಪ್ರೀವೆಡ್ಡಿಂಗ್ ವೀಡಿಯೋ ಒಂದನ್ನು ಅಪ್ ಲೋಡ್ ಮಾಡಿ ಎಲ್ಲರಿಗೂ ಶಾಕ್ ನೀಡಿದ್ದರು. ಶ್ರೀಪಾದ್ ದೇಶಪಾಂಡೆ ಎಂಬುವರೊಂದಿಗೆ ಫೋಟೋ ಹಂಚಿಕೊಂಡು ತಮ್ಮ ಮದುವೆಯ ವಿಚಾರ ಹೇಳಿದ್ದರು.

ಸದ್ದಿಲ್ಲದೇ ವಿವಾಹವಾದ ನಟಿ

ಪ್ರೇರಣಾ ಮದುವೆ ಅಥವಾ ನಿಶ್ಚಿತಾರ್ಥದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ಅಭಿಮಾನಿಗಳು ಮದುವೆಗೆ ಇನ್ನೂ ಬಹಳ ಸಮಯವಿದೆ ಎಂದು ಭಾವಿಸಿದ್ದರು. ಆದರೆ ಇಬ್ಬರೂ ಸದ್ದಿಲ್ಲದೇ ಸಪ್ತಪದಿಯನ್ನು ತುಳಿದಿದ್ದಾರೆ. ಈಗ ಇವರಿಬ್ಬರ ಮದುವೆಯ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಮದುವೆ ಫೋಟೋವನ್ನು ನೋಡಿ ಖುಷಿ ಪಟ್ಟಿದ್ದಾರೆ. ಪ್ರೇರಣಾ ಕಂಬಂ ಕುಟುಂಬದವರು ಹಾಗೂ ಆಪ್ತ ಸ್ನೇಹಿತರನ್ನು ಮಾತ್ರವೇ ಮದುವೆಗೆ ಕರೆದಿದ್ದಾರೆ. ಐಯ್ಯಂಗಾರಿ ಶೈಲಿಯಲ್ಲಿ ವಿವಾಹವಾಗಿದ್ದಾರೆ. ಅಭಿಮಾನಿಗಳು ನಟಿಗೆ ಶುಭ ಹಾರೈಸಿದ್ದಾರೆ.

More from Filmibeat

English summary
Prerana kambam gets married to her boyfriend;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X